ಕಿನ್ನಿಗೋಳಿ : ಕರೋಕೆ ಗಾಯನ ಸ್ಪರ್ಧೆ ಸಮಾರೋಪ

ಕಿನ್ನಿಗೋಳಿ: ಪರಶುರಾಮ ಸೃಷ್ಟಿಯ, ಜಾನಪದ ಸೊಗಡಿನ ಕರಾವಳಿ ಭಾಗದ ಜನರು ಕಲೆ, ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು ಕ್ರೀಡೆ, ಸಿನಿಮಾ, ನಾಟಕ ಯಕ್ಷಗಾನ, ಮುಂತಾದ ಕಲಾಪ್ರಕಾರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಖ್ಯಾತ ಚಲನಚಿತ್ರ ನಟ ಶಿವಧ್ವಜ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲ್ಲಿ ಕಿನ್ನಿಗೋಳಿ ಜನನಿ ಮಲೋಡಿಸ್‌ನ ಆಶ್ರಯದಲ್ಲಿ ಎದೆ ತುಂಬಿ ಹಾಡುವೆನು ಕರಾವಳಿ ಯುವ ಗಾಯಕ ನಾಯಕಿಯರಿಗಾಗಿ ಕರಾವಳಿ ಸೂಪರ್ ಸಿಂಗರ್ 2013ಕರೋಕೆ ಗಾಯನ ಸ್ಪರ್ಧೆಯ ಸಮಾರೋಪ ಮತ್ತು ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಬಜ್ಪೆ ಥಂಡರ್ ಗೈಸ್ ತಂಡದ ನೃತ್ಯ ನಿರ್ದೇಶಕ ಸುರಜ್ ಶೆಟ್ಟಿ, ಗಿಟಾರ್ ವಾದಕ ಶರತ್ ಕುಮಾರ್ ಹಳೆಯಂಗಡಿ ಹಾಗೂ ಬಾಲ ಕಲಾವಿದ ದೀಕ್ಷಿತ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಮಂಗಳೂರು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ರವೀಂದ್ರ ಪ್ರಭು, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ದಿನೇಶ್ ಆಚಾರ್ಯ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಚ್. ಮಯ್ಯದ್ದಿ, ಮಾಧವ, ಉದ್ಯಮಿ ಪಿ, ಸತೀಶ್ ರಾವ್, ಜನನಿ ಮೆಲೋಡಿಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಕಾರ್ಯದರ್ಶಿ ಮಹಮ್ಮದ್ ಅರೀಫ್ ಉಪಸ್ಥಿತರಿದ್ದರು.
ರಾಜೇಂದ್ರ ಎಕ್ಕಾರು. ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ
ಜೂನಿಯರ್ 6 ರಿಂದ 12ರ ವಿಭಾಗ :
ಪ್ರಥಮ : ಅನುಶ್ರೀ, ದ್ವಿತೀಯ : ಕ್ಷಿತಿಜಾ,
ಉತ್ತಮ ಸ್ವರ; ಮೆಲ್‌ರಿನಾ, ಉತ್ತಮ ಪ್ರದರ್ಶನ: ಅಶ್ವಿಜಾ ಉಡುಪ, ಉತ್ತಮ ಗಾಯನ: ಲಿಖಿತ್ ರಾಜ್

ಜೂನಿಯರ್ 12 ರಿಂದ 20 ರ ವಿಭಾಗ:
ಪ್ರಥಮ : ಆರಾಧನಾ, ದ್ವಿತೀಯ : ಪ್ರಜ್ಞಾ ರಾವ್, ಉತ್ತಮ ಸ್ವರ; ಸಚಿನ್ ಕಾಮತ್, ಉತ್ತಮ ಪ್ರದರ್ಶನ: ರಾಹುಲ್, ಉತ್ತಮ ಗಾಯನ: ಅಪೂರ್ವ

ಸೀನಿಯರ್ 20 ರಿಂದ 32ರ ವಿಭಾಗ :
ಪ್ರಥಮ : ರವಿ, ದ್ವಿತೀಯ : ಚಂದ್ರ ಶೇಖರ್ ಪುತ್ತೂರು, ಉತ್ತಮ ಸ್ವರ; ಸುಭೋದ್ ಸಾಲಿಯಾನ್, ಉತ್ತಮ ಪ್ರದರ್ಶನ: ಸಫ್ರಿನ್, ಉತ್ತಮ ಗಾಯನ: ವಿಶ್ವಾಸ್

ಸೀನಿಯರ್ ವಿಭಾಗ32 ವರ್ಷ ಮೇಲ್ಪಟ್ಟು:
ಪ್ರಥಮ : ಹುಸೇನ್ ಶಿರ್ವ, ದ್ವಿತೀಯ : ಸುರೇಶ್ ಪಣಂಬೂರು, ಉತ್ತಮ ಸ್ವರ; ಎಮ್.ಎಸ್.ಪ್ರಶಾಂತ್, ಉತ್ತಮ ಪ್ರದರ್ಶನ: ದಿನೇಶ್ ಆರ್.ಕೆ, ಉತ್ತಮ ಗಾಯನ: ರಾಧಕಾಂತ್

Kinnigoli02101301

 

Comments

comments

Comments are closed.

Read previous post:
Kinnigoli01101303
ಪ್ರಪ್ರಥಮ ಕಿಸಾನ್ ಶಕ್ತಿ ಪಂಪ್ ಕಂಟ್ರೋಲರ್ ಉದ್ಘಾಟನೆ.

ಕಿನ್ನಿಗೋಳಿ: 2012-13ನೇ ಸಾಲಿನ ಉತ್ತಮ ನೀರಿನ ನಿರ್ವಹಣಾ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿ ನಿಧಿಯಿಂದ ಹೊಸ ಪ್ರಯೋಗತ್ವ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಿನ್ನಿಗೋಳಿಯ...

Close