ಯುವಶಕ್ತಿಯ ಸದ್ಭಳಕೆ ದೇಶದ ಅಭಿವೃದ್ಧಿಗೆ ಪೂರಕ

ಕಿನ್ನಿಗೋಳಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾರತದ ಮೇಲೆ ಪರ ರಾಷ್ಟ್ರಗಳಿಂದ ಸಾಂಸ್ಕೃತಿಕ ದಾಳಿ ನಡೆಯುತ್ತಿದ್ದು, ಇದರಿಂದ ಯುವ ಜನಾಂಗ ತಪ್ಪು ದಾರಿ ತುಳಿಯುತ್ತಿದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಸ್ತು, ಶೃದ್ಧೆ, ಸಂಸ್ಕಾರ ತುಂಬುವಲ್ಲಿ ಪಾಲಕರು ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ. ಯುವಶಕ್ತಿಯ ಸದ್ಭಳಕೆಯೇ ದೇಶದ ಅಭಿವೃದ್ಧಿಗೆ ಪೂರಕ ಎಂದು ಯುವ ಪ್ರತಿಭೆ ಅನುಜ್ಞಾ ಭಟ್ ಹೇಳಿದರು.
ಸೋಮವಾರ ಕಿನ್ನಿಗೋಳಿ ಸಹಕಾರ ಸೌಧದಲ್ಲಿ ಕಿನ್ನಿಗೋಳಿ ರೋಟರಿ ಸಂಸ್ಥೆ ಆಯೋಜಿಸಿದ “ಯುವಜನಾಂಗ ಮಾಸಾಚರಣೆ” ಸಂಧರ್ಭ ಮಾತನಾಡಿದರು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರೊಸಾರಿಯೊ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭ ಯುವ ಪ್ರತಿಭೆ ಅನುಜ್ಞಾ ಭಟ್ ಅವರನ್ನು ಸನ್ಮಾನಿಸಲಾಯಿತು.
ರೋಟರಿ ನಿಕಟಪೂರ್ವ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಜೊಕಿಂ ಸಿಕ್ವೇರಾ, ರೋಟರಿ ಮಾಜಿ ಅಧ್ಯಕ್ಷರುಗಳಾದ ಜಯರಾಮ ಪೂಂಜಾ, ಕೆ. ಲವ ಶೆಟ್ಟಿ, ರೋಟರಿಯ ಯುವ ಜನಾಂಗ ನಿರ್ದೇಶಕ ಯಶವಂತ ಐಕಳ, ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ಉಪಸ್ಥಿತರಿದ್ದರು. ರೋಟರಾಕ್ಟ್ಅಧ್ಯಕ್ಷ ಪ್ರಣಿಲ್ ಹೆಗ್ಡೆ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli02101302

Comments

comments

Comments are closed.

Read previous post:
Kinnigoli02101301
ಕಿನ್ನಿಗೋಳಿ : ಕರೋಕೆ ಗಾಯನ ಸ್ಪರ್ಧೆ ಸಮಾರೋಪ

ಕಿನ್ನಿಗೋಳಿ: ಪರಶುರಾಮ ಸೃಷ್ಟಿಯ, ಜಾನಪದ ಸೊಗಡಿನ ಕರಾವಳಿ ಭಾಗದ ಜನರು ಕಲೆ, ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು ಕ್ರೀಡೆ, ಸಿನಿಮಾ, ನಾಟಕ ಯಕ್ಷಗಾನ, ಮುಂತಾದ ಕಲಾಪ್ರಕಾರಗಳಲ್ಲಿ ಉತ್ತಮ...

Close