ಐಕಳದಲ್ಲಿ ರಂಗವೇದಿಕೆ ಉದ್ಘಾಟನೆ

ಕಿನ್ನಿಗೋಳಿ: ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿದಾಗ ನಾಯಕತ್ವ ಗುಣಗಳು ತನ್ನಿಂತಾನೇ ಮೈಗೂಡುತ್ತದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು.
ದ. ಕ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅನುದಾನದಿಂದ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ರಂಗವೇದಿಕೆ ಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೋ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಸಾಲ್ಯಾನ್, ಐಕಳ ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೀಶ್ ಕೋಟ್ಯಾನ್, ಕಿರಣ್ ಕುಮಾರ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಹೇಮಲತಾ , ಶಂಕರ್ ಶೆಟ್ಟಿ, ಸೂರ‍್ಯ, ಸುರೇಶ್ ಸುವರ್ಣ, ಉಲ್ಲಂಜೆ ಕ್ಲಸ್ಟರ್ ಸಿ.ಆರ್.ಪಿ. ಜಗದೀಶ್ ನಾವಡ, ಮುಲ್ಕಿ ಕ್ಲಸ್ಟರ್ ಸಿ.ಆರ್. ಪಿ. ಚಂದ್ರಕಲಾ, ಸಮುದಾಯದತ್ತ ಶಾಲೆ ಕಾರ್ಯಕ್ರಮದ ಮಾರ್ಗದರ್ಶಿ ಕವಿತಾ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಕುಮಾರ್ ಪ್ರಸ್ತಾವನೆಗೈದರು. ಪ್ರಭಾರ ಮುಖ್ಯ ಶಿಕ್ಷಕಿ ಜೂಲಿಯೆಟ್ ಲೂವಿಸ್ ಸ್ವಾಗತಿಸಿ, ಶಿಕ್ಷಕಿ ಫೆಲ್ಸಿ ಡಿ ಸೋಜಾ ವಂದಿಸಿದರು. ಶಿಕ್ಷಕಿ ವೀಡಾ ಸೆರಾವೊ ಕಾರ್ಯಕ್ರಮ ನಿರೂಪಿಸಿದರು.

Kinnigoli03101305

Comments

comments

Comments are closed.

Read previous post:
Kinnigoli03101304
ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ

ಕಿನ್ನಿಗೋಳಿ: ದೈವತ್ವಕ್ಕೆ ಹತ್ತಿರವಾದುದು ಸ್ವಚ್ಚತೆ ಮತ್ತು ನೈರ್ಮಲ್ಯತೆ. ಮಾಲಿನ್ಯ ಮುಕ್ತ ಪರಿಸರವೇ ಆರೋಗ್ಯಭರಿತ ನೆಮ್ಮದಿಯ ಜೀವನ ಎಂದು ಐಕಳ ಪೊಂಪೈ ಕಾಲೇಜು ಪ್ರಾಂಶುಪಾಲ ಡಾ| ಜೋನ್ ಕ್ಲಾರೆನ್ಸ್ ಮಿರಾಂದ...

Close