ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ

ಕಿನ್ನಿಗೋಳಿ: ದೈವತ್ವಕ್ಕೆ ಹತ್ತಿರವಾದುದು ಸ್ವಚ್ಚತೆ ಮತ್ತು ನೈರ್ಮಲ್ಯತೆ. ಮಾಲಿನ್ಯ ಮುಕ್ತ ಪರಿಸರವೇ ಆರೋಗ್ಯಭರಿತ ನೆಮ್ಮದಿಯ ಜೀವನ ಎಂದು ಐಕಳ ಪೊಂಪೈ ಕಾಲೇಜು ಪ್ರಾಂಶುಪಾಲ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಪೊಂಪೈ ಕಾಲೇಜು ಐಕಳ, ಯುತ್ ರೆಡ್ ಕ್ರಾಸ್ ಮತ್ತು ರಿಬ್ಬನ್ ಕ್ಲಬ್, ಯುಗಪುರುಷ, ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ, ರಿಕ್ಷಾ-ಚಾಲಕ ಮಾಲಕರ ಸಂಘ, ಇನ್ನರ್‌ವೀಲ್ ಕ್ಲಬ್, ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಕಿನ್ನಿಗೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಗಾಂಧಿ ಜಯಂತಿ ಪ್ರಯುಕ್ತ ನಡೆದ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನವನ್ನು ಕಿನ್ನಿಗೋಳಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಐಕಳ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳು ಕಿನ್ನಿಗೋಳಿಯಿಂದ ಮೂರುಕಾವೇರಿ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿರುವ ಕಳೆಗಿಡಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಸ್ಚಚ್ಚಗೊಳಿಸಿದರು.
ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಪೊಂಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ| ಗುಣಕರ್ ಎಸ್. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಕಾರ್ಯದರ್ಶಿ ಪ್ರದೀಪ್ ಬಂಗೇರ, ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹಾ, ಕಾರ್ಯದರ್ಶಿ ರಂಜಿತಾ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೆ ಕೃಷ್ಣ ಸಾಲ್ಯಾನ್, ಕಾರ್ಯದರ್ಶಿ ಪ್ರಾನ್ಸಿಸ್ ಸೆರಾವೊ, ಮಾಜಿ ಅಧ್ಯಕ್ಷ ವೈ.ಯೋಗೀಶ್ ರಾವ್, ಪೊಂಪೈ ಕಾಲೇಜು ಯುತ್ ರೆಡ್ ಕ್ರಾಸ್ ಅಧಿಕಾರಿಗಳಾದ ಪ್ರೊ| ಯೋಗಿಂದ್ರ ಬಿ., ಪ್ರೊ| ವಿಕ್ಟರ್ ವಾಸ್, ಕಿನ್ನಿಗೋಳಿ ರಿಕ್ಷಾ-ಚಾಲಕ ಮಾಲಕರ ಸಂಘ ಅಧ್ಯಕ್ಷ ಉಮೇಶ್ ಬಂಗೇರ ಐಕಳ, ಐಕಳ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಎನ್.ಎಸ್.ಎಸ್. ನಾಯಕಿ ಅಶ್ವಿತಾ ಶೆಟ್ಟಿ, ಲಿಖಿತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli03101304

Comments

comments

Comments are closed.

Read previous post:
Kinnigoli03101303
ಕಿಲೆಂಜೂರು ಪೈಪ್ ಕಾಮಗಾರಿ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಯ ಜಿಲ್ಲಾ ಪಂಚಾಯಿತಿ ಹತ್ತು ಲಕ್ಷ ಅನುದಾನzಲ್ಲಿ ಈಗಾಗಲೆ ಆರು ಲಕ್ಷ ಕಾಮಾಗಾರಿ ಮುಗಿದಿದ್ದು, ಉಳಿದ...

Close