ಮೆನ್ನಬೆಟ್ಟು ಪಂಚಾಯಿತಿ ಹುಲ್ಲು ಕಟಾವು ಯಂತ್ರ ಖರೀದಿ

ಕಿನ್ನಿಗೋಳಿ: ರಸ್ತೆ ಸುರಕ್ಷತೆಗಾಗಿ ಹಾಗೂ ಮೆನ್ನಬೆಟ್ಟು ಗ್ರಾಮದ ಸ್ವಚ್ಚತೆಯ ಹಿತದೃಷ್ಟಿಯಿಂದ ಅಲ್ಲದೆ ಪಂಚಾಯಿತಿಯನ್ನು ಮಾದರಿ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಹುಲ್ಲು ಕಟಾವು ಯಂತ್ರವನ್ನು ಖರೀದಿಸಲಾಗಿದೆ. ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಹೇಳಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಪರಿಸರದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಅಂದೋಲನಾ ಕಾರ್ಯಕ್ರಮದಡಿ ಬುಧವಾರ ನಡೆದ ಹುಲ್ಲು ಕಟಾವು ಯಂತ್ರವನ್ನು ಚಾಲನೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಪಿಡಿಒ ಗಣೇಶ ಬಡಿಗೇರ, ಪಂಚಾಯಿತಿ ಸದಸ್ಯರಾದ ಭಾಸ್ಕರ ಪೂಜಾರಿ, ಕೇಶವ, ಹರಿಶ್ಚಂದ್ರ ರಾವ್, ಶಕ್ತಿಪ್ರಸಾದ್, ಜಯಶಂಕರ ರೈ, ಬೇಬಿ ಮತ್ತಿತರರು ಉಪಸ್ಥಿತರಿದ್ದರು.

Kinnigoli03101302

Comments

comments

Comments are closed.

Read previous post:
Kinnigoli03101301
ಕಿನ್ನಿಗೋಳಿ : ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಣೆ

ಕಿನ್ನಿಗೋಳಿ: ಪ್ರಾಮಾಣಿಕ ಶಿಸ್ತು ಬದ್ಧ ಜೀವನ ನಡೆಸಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಇತರರರಿಗೆ ಮಾದರಿಯಾಗಬೇಕು. ಎಂದು ಮುಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾ...

Close