ಕಿನ್ನಿಗೋಳಿ ಮೀನು ಮಾರುಕಟ್ಟೆ ನಿರ್ಮಾಣ

ಕಿನ್ನಿಗೋಳಿ: ಕರಾವಳಿ ಅಭಿವ್ದೃ ಪ್ರಾಕಾರದ ಅನುದಾನದಲ್ಲಿ ಸುಮಾರು 76 ಲಕ್ಷ ರೂ ವೆಚ್ಚದಲ್ಲಿ ಕಳೆದ ಜನವರಿ 2012 ರಂದು ರಾಜ್ಯದ ಮುಖ್ಯಮಂತ್ರಿ ದಿ ವಿ ಸದಾನಂದ ಗೌಡರಿಂದ ಶಿಲಾನ್ಯಾಸ ನಡೆಸಲ್ಪಟ್ಟು ಕೆಲವೊಂದು ಕಾರಣಗಳಿಂದಾಗಿ ಆರು ತಿಂಗಳೊಳಗೆ ಉದ್ಘಾಟನೆಗೊಳ್ಳಬೇಕಾಗಿದ್ದ ಕಿನ್ನಿಗೋಳಿ ಮೀನು ಮಾರುಕಟ್ಟೆ ನಿರ್ಮಾಣ ನೆನೆಗುದಿಗೆ ಬಿದ್ದಿದ್ದು ಮೀನು ಮಾರಾಟಗಾರರು ಮಳೆ ಚಳಿಯ ನಡುವೆ ಪರದಾಡುವಂತಾಗಿದ್ದು ಇದೀಗ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು 75 ಶೇಕಡಾ ಕಾಮಗಾರಿ ಮುಗಿಸಿದೆ.
ಫೆಬ್ರವರಿ 2013 ಯ ಒಳಗೆ ಕಾಮಗಾರಿ ಮುಗಿಸಿ ಕೊಡುತ್ತೇವೆ ಅಂದು ಗುತ್ತಿಗೆದಾರರು ಹೇಳಿದ್ದರು ಇನ್ನೂ ಕೂಡಾ ಕಾಮಗಾರಿ ಮುಗಿದಿಲ್ಲ ಕೂಡಲೇ ಕಾಮಗಾರಿ ಕೈಗೆತ್ತಿ ಕೊಂಡು ಯೋಜನೆ ಮುಗಿಸದಿದ್ದಲ್ಲಿ ರಸ್ತೆ ಬದಿಯಲ್ಲಿ ಮೀನು ಮಾರಾಟ ನಡೆಸುವುದಾಗಿ ಆಗ ಹೇಳಿದ್ದರೂ ಇನ್ನೂ ಕೂಡ ಕಾಮಾಗಾರಿ ಮುಗಿದಿಲ್ಲ ಬೇಸಿಗೆ ಕಾಲದಲ್ಲಿ ಬಿಸಿಲನ್ನು ಎದುರಿಸುತ್ತಿದ್ದ ಮೀನು ಮಾರಾಟಗಾರರು ಇದೀಗ ಮಳೆ ಚಳಿಯನ್ನು ಎದುರಿಸುತ್ತಿದ್ದಾರೆ. ಎಂದು ಗುರುವಾರ ಸ್ಥಳಕ್ಕೆ ಬೇಟಿ ನೀಡಿದ ಕರಾವಳಿ ಅಭಿವ್ದೃ ಪ್ರಾಕಾರದ ಕಾರ್ಯದರ್ಶಿ ಪಿ.ಎ. ಗಣಪತಿ ಅವರಲ್ಲಿ ಮೀನುಗಾರ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಅನುದಾನ ನೀಡುತ್ತಿರುವ ಪ್ರಾಕಾರ ಮತ್ತು ಸ್ಥಳೀಯ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಆಡಳಿತ ಸಮರ್ಪಕವಾಗಿ ಸ್ಪಂದಿಸುತ್ತಿದ್ದು ಕೆಲವೊಂದು ವಿದ್ಯುತ್ ಕಂಬಗಳ ಸ್ಥಳಾಂತರ, ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಸಂಗ್ರಹಣಾ ಜಾಗದ ಸಮಸ್ಯೆ ಹಾಗೂ ಇಕ್ಕಟ್ಟು ಪರಿಸರದಿಂದಾಗಿ ಕಾಮಗಾರಿ ವಿಳಂಬವಾಗಿದೆ ನಿಜ, ಡಿಸೆಂಬರ್‌ನೊಳಗೆ ಸುಸಜ್ಜಿತ ಮಾರುಕಟ್ಟೆ ತಲೆಯೆತ್ತಲಿದೆಯೆಂದು ಗುತ್ತಿಗೆದಾರ ಸುನಿಲ್ ಶೆಟ್ಟಿ ತಿಳಿಸಿದ್ದಾರೆ.

ಗ್ರಾನೈಟ್, ಟೈಲ್ಸ್ ಅಳವಡಿಕೆ, ಪ್ಲಾಸ್ಟರಿಂಗ್ ಬಾಕಿ ಇದೆ. ಗಾಳಿ ಬೆಳಕು ಸರಾಗವಾಗಿ ಹರಿದು ಬರಲು ಮೀನುಗಾರ ಮಹಿಳೆಯರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಡಿಸೆಂಬರ್ ಒಳಗೆ ಪೂರ್ತಿ ಕಾಮಗಾರಿ ಮುಗಿಯಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ
ಪಿ.ಎ. ಗಣಪತಿ
ಕಾರ್ಯದರ್ಶಿ ಕರಾವಳಿ ಅಭಿವೃದ್ಧಿ ಪ್ರಾಕಾರ

ಪಂಚಾಯಿತಿ ಮಟ್ಟದಲ್ಲಿ ನಮ್ಮ ಪ್ರಯತ್ನ ನಡೆದಿದೆ, ಪ್ರಾಕಾರ ಉತ್ತಮವಾಗಿ ಸ್ಪಂದನೆ ನೀಡುತ್ತಿದೆ. ಮೀನುಗಾರರಿಗೆ ತೊಂದರೆಯಾಗದ ರೀತಿಯಲ್ಲಿ ಕೂಡಲೇ ಕಾಮಗಾರಿ ಪೂರ್ಣಗೊಳ್ಳಲಿದೆ.
ಶ್ಯಾಮಲ ಪಿ. ಹೆಗ್ಡೆ
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಈ ಮೊದಲು ಅಕಾರಿಗಳು ನಮ್ಮ ಅನುಕೂಲ ನೋಡಿ ಕಾಮಗಾರಿ ನಡೆಸುವುದೆಂದು ಹೇಳಿದ್ದರು. ಆದರೆ ಈಗ ಸ್ಥಳದ ಅಡಚಣೆ ಅಲ್ಲದೆ ಗಾಳಿ ಬೆಳಕಿನ ಅಭಾವವಿದೆ. ಇಲಾಖಾಕಾರಿಗಳು ಹಾಗೂ ಜನಪ್ರತಿನಿಗಳು ಸೂಕ್ತ ಸ್ಪಂದನೆ ನೀಡಿ ಸಾರ್ವಜನಿಕ ಉಪಯೋಗದ ಉತ್ತಮ ಮಾರುಕಟ್ಟೆ ನಿರ್ಮಾಣಗೊಳ್ಳಬೇಕು ಎಂಬುದು ನಮ್ಮ ಆಶಯ
ಮೀನುಗಾರ ಮಹಿಳೆಯರು.

Kinnigoli-04101301

Kinnigoli-04101302

 

Comments

comments

Comments are closed.

Read previous post:
Kinnigoli03101306
ಮುಲ್ಕಿ: ಸರಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಹಣ್ಣು-ಹಂಪಲು ವಿತರಣೆ

ಮುಲ್ಕಿ: ಕರಾವಳಿ ಚಿಕನ್ ಟ್ರೇಡರ‍್ಸ್ ವತಿಯಿಂದ ಗಾಂಧಿಜಯಂತಿಯಂದು ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು-ಹಂಪಲು ವಿತರಿಸಿ ಶೀಘ್ರ ಗುಣಮುಖಲಾಗಲು ಹಾರೈಸಲಾಯಿತು. ಈ ಸಂದರ್ಭ ಮುಲ್ಕಿ ನ.ಪಂ. ಆಧ್ಯಕ್ಷ...

Close