ಶಿಥಿಲಾವಸ್ಥೆಯಲ್ಲಿ ಶಿಮಂತೂರು – ಎಳತ್ತೂರು ನೆಲಗುಡ್ಡೆ- ಪಂಜಿನಡ್ಕ ರಸ್ತೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮಪಂಚಾಯಿತಿ ಮತ್ತು ಕಿಲ್ಪಾಡಿ ಗ್ರಾಮ ಪಂಚಾಯಿತಿ ಗಡಿಗಳ ವ್ಯಾಪ್ತಿಯಲ್ಲಿ ಬರುವ ಶಿಮಂತೂರು ವಿನಿಂದ ಎಳತ್ತೂರು ನೆಲಗುಡ್ಡೆ ಪಂಜಿನಡ್ಕ ವನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾನಿಯಾಗಿದ್ದು ಗ್ರಾಮಸ್ಥರು ಜನಪ್ರತಿನಿಗಳು ಹಾಗೂ ಸರಕಾರದ ಬಗ್ಗೆ ಜಿಗುಪ್ಸೆ ಹೊಂದಿದ್ದಾರೆ. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಮಂತೂರು ವರೆಗಿನ ರಸ್ತೆ ಕಾಂಕ್ರೀಟ್ ಕಾಮಗಾರಿ ಹಾಗೂ ಡಾಮಾರೀಕರಣಗೊಂಡಿದ್ದು ಉತ್ತಮ ಸ್ಥಿತಿಯಲ್ಲಿದೆ. ಆದರೆ ಕಿಲ್ಪಾಡಿ ಪಂಚಾಯಿತಿ ರಸ್ತೆ ನಿರ್ವಹಣೆ ಒಬಿರಾಯನ ಕಾಲದ ರಸ್ತೆಯಂತಿದ್ದು ರಸ್ತೆಯೊ ಹೊಂಡವೋ ಅಥವಾ ಮಣ್ಣಿನ ರಸ್ತೆಯೋ ಎಂಬತ್ತಿದ್ದು ವಾಹನ ಸಂಚಾರಕ್ಕೆ ಅಯೋಗ್ಯ ಎನಿಸುವಷ್ಟು ಕೆಟ್ಟಿದೆ,. ಈರಸ್ತೆಯ ನಡುವಿನಲ್ಲಿ ಬರುವ ಎಳತ್ತೂರು ನೆಲಗುಡ್ಡೆ ಹರಿಜನ ಕಾಲೋನಿಯಿಂದ ಶಿಮಂತೂರು ಶಾಲೆಯವರೆಗಿನ ರಸ್ತೆಯು ತೀರಾ ಕೆಟ್ಟುಹೋಗಿದೆ. ಹಲವು ವರ್ಷಗಳ ಹಿಂದೆ ಖಾಸಗಿಯವರು ಜಾಗ ನೀಡಿ ಸಹಕರಿಸಿದ ಈಗಿನ ಈ ರಸ್ತೆ ದುಸ್ಥಿತಿಯನ್ನು ಕಂಡು ಜಾಗ ಬಿಟ್ಟುಕೊಟ್ಟ ಮನೆಯವರು ರಸ್ತೆ ಸದ್ಬಳಕೆಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸುತ್ತಿದ್ದಾರೆ. ಸುಮಾರು ೧೫ ವರ್ಷಗಳ ಹಿಂದೆ ಡಾಮಾರೀಕರಣಗೊಂಡ ರಸ್ತೆ ಐದು ವರ್ಷಗಳಿಂದೀಚೆಗೆ ಕೇವಲ ತೇಪೆಯನ್ನು ಕಂಡಿತ್ತು. ಹಳ್ಳಿ ಪರಿಸರದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಕಾರು ಅಥವಾ ರಿಕ್ಷಾದವರು ಇಲ್ಲಿಗೆ ಬರಲು ಸುತರಾಂ ಒಪ್ಪುವುದಿಲ್ಲ. ಜಾಸ್ತಿ ಬಾಡಿಗೆ ಕೊಟ್ಟರೂ ಬರಲು ಹಿಂಜರಿಯುತ್ತಾರೆ. ರೋಗಿಗಳನ್ನು ಅಂಬ್ಯುಲೆನ್ಸ್ ಮೂಲಕ ಕರೆತರುವಾಗಲೂ ಹೊಂಡ ಗುಂಡಿ ರಸ್ತೆಯಿಂದಾಗಿ ವಾಹನ ಕುಲುಕಾಟದಿಂದ ರೋಗಿಯ ಅವಸ್ಥೆ ಜೀವನ್ಮರಣದಂತಾಗುತ್ತಿದೆ. ಎರಡೂ ಪಂಚಾಯಿತಿಗಳಲ್ಲಿ ಹಾಗೂ ಜನಪ್ರತಿನಿಗಳಲ್ಲಿ ಸಾಕಷ್ಟು ಮನವಿಗಳನ್ನು ನೀಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ ಕೇವಲ ಆಶ್ವಸನೆಗಳ ಸುರಿಮಳೆ ಮಾತ್ರ ದೊರಕುತ್ತದೆ. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಗುತ್ತಿಗೆದಾರರೊಬ್ಬರು ತೇಪೆ ಡಾಮರೀಕರಣ ನಡೆಸಲು ಶುರು ಮಾಡಿದ್ದರು ಆಗ ವಿರೋದಪಕ್ಷದವರು ಜಿಲ್ಲಾಕಾರಿಗಳಿಗೆ ಚುನಾವಣೆಯ ನೀತಿಸಂಹಿತೆ ಉಲ್ಲಂಘನೆ ದೂರು ನೀಡಿದ ಕಾರಣ ಕಾಮಗಾರಿ ಹಠಾತ್ ಸ್ಥಗಿತಗೊಂಡಿತ್ತು. ನಂತರ ಯಾರೂ ಈ ಕಡೆ ತಲೆ ಹಾಕದೆ ದಿವ್ಯ ಮೌನದಲ್ಲಿದ್ದಾರೆ. ಊರಿನ ನಾಗರಿಕರ ಪರಿಪಾಟಲು ಹೇಳತೀರದು. ಮಳೆಗಾಲ ಪ್ರಾರಂಭವಾದ ಬಳಿಕ ಈ ಸಮಸ್ಯೆ ತೀರಾ ಉಲ್ಬಣಿಸಿದ್ದು ಈ ರಸ್ತೆಯೋ ಕೆರೆಯಂಬತಿದೆ. ರಸ್ತೆಯ ಗುಂಡಿಗಳ ಸಮಸ್ಯೆಯಿಂದಾಗಿ ಸಣ್ಣ ಮಕ್ಕಳನ್ನು ಹೆತ್ತವರು ಶಾಲೆಗೆ ಕರೆದುಕೊಂಡು ಹೋಗಿ ಕರೆತರುವ ಪ್ರಮೇಯವಿದೆ. ಪಾದಾಚಾರಿಗಳು ಮತ್ತು ವಾಹನಗಳು ಬಿದ್ದು ಗಾಯಗೊಂಡ ಹಾಗೂ ಮೂಳೆ ಮೂರಿತದ ಸಂಭಾವ್ಯ ಘಟನೆಗಳು ಸಾಕಷ್ಟಿವೆ. ರಾತ್ರಿ ಈ ಪ್ರದೇಶ ನಿರ್ಜನವಾಗಿದ್ದು ಅಫಘಾತ ಸಂಭವಿಸಿದರೆ ಬೆಳಗಾಗುವವರೆಗೆ ಕಾಯುವ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಆದರೂ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಈ ಬಗ್ಗೆ ಸಾಕಷ್ಟು ಬೊಬ್ಬೆಹೊಡೆದರೂ ಪಂಚಾಯಿತಿಗಳು ದಿವ್ಯ ನಿರ್ಲಕ್ಷ ತಾಳಿದೆ. ಜಿಲ್ಲಾ ಪಂಚಾಯಿತಿ ರಸ್ತೆಯಾದ್ದರಿಂದ ಪಂಚಾಯಿತಿಗಳು ಅನುದಾನಕ್ಕೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಸದ್ಯಕ್ಕೆ ಮೂರು ಬಸ್ಸುಗಳು ಈ ರಸ್ತೆಯಲ್ಲಿ ಒಡಾಡುತ್ತಿದ್ದು ರಿಪೇರಿ ನಿರ್ವಹಣಾ ವೆಚ್ಚ ತಾಳಲಾರದೆ ಹೆಚ್ಚಿನ ಬಸ್ಸು ಮಾಲಕರು ಬಸ್ಸು ಸಂಚಾರ ನಿಲುಗಡೆಗೊಳಿಸುವ ನಿರ್ಧಾರ ಕೈಗೊಂಡರೆ ಸಾರ್ವಜನಿಕರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ಬರಬಹುದು. ಬಸ್ಸು ಮಾಲಕರು ಸ್ವಂತ ಮುತುವರ್ಜಿಯಿಂದ ಗ್ರಾಮಸ್ಥರ ಸಹಿಯೊಂದಿಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಸೂಕ್ತ ಪರಿಹಾರ ಸಿಗಲಿಲ್ಲ. ಇನ್ನಾದರೂ ಸಂಬಂಧ ಪಟ್ಟ ಅಕಾರಿಗಳು ಮತ್ತು ಜನಪ್ರತಿನಿಗಳು ಗಮನಹರಿಸುತ್ತಾರೆಯೇ ಎಂದು ಕಾದುನೋಡಬೇಕಾಗಿದೆ. ಅಕ್ರೋಶಭರಿತ ಕಿನ್ನಿಗೋಳಿ ಹಾಗೂ ಕಿಲ್ಪಾಡಿ ಗ್ರಾಮಸ್ಥರು ತಮ್ಮ ಸ್ವಂತ ನೆಲೆಯಲ್ಲಿ ಹಾಗು ಹಿರಿಯರಾದ ಶ್ರೀಧರ ಶೆಟ್ಟರ ಪ್ರೇರಣೆಯಿಂದ ಗಾಂ ಜಯಂತಿ ದಿನಾಚರಣೆಯಂದು ಶ್ರಮದಾನ ಮಾಡುವ ಮೂಲಕ ಕಿಲ್ಪಾಡಿ ಪಂಚಾಯಿತಿ, ಕಿನ್ನಿಗೋಳಿ ಪಂಚಾಯಿತಿ ಹಾಗೂ ಜನಪ್ರತಿನಿಗಳಿಗೆ ಮಾದರಿಯಾದರು. ಸ್ತ್ರೀ ಶಕ್ತಿ ಸಂಘಗಳಾದ ಕಟಿಲೇಶ್ವರಿ ಮತ್ತುಮಹಾಲಿಂಗೇಶ್ವರೀ ಸ್ವಸಹಾಯ ಸಂಘ, ಸಂತ ಸತ್ಸಂಗ ನಿರಂಕಾರಿ ಮಂಡಳಿ ಹಾಗೂ ಊರ ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡರು. ಗ್ರಾಮಸ್ಥ ಈ ಕಾರ್ಯ ಶ್ಲಾಘನೀಯವಾದುದು. ಮಹಿಳೆಯರು ಮಕ್ಕಳು ಶ್ರಮದಾನದಲ್ಲಿ ಹೆಚ್ಚಾಗಿ ಕಂಡುಬಂದದು ವಿಶೇಷವಾಗಿತ್ತು. ಈ ಸಂದರ್ಭ ಕಮಲ ನೆಲ್ಲಿಗುಡ್ಡೆ, ಲೀಲಾ ಕೆ. ಶ್ರೀಧರ ಶೆಟ್ಟಿ, ಸಂತ ಸತ್ಸಂಗ ನಿರಂಕಾರಿ ಮಂಡಳಿ ಮುಖ್ಯಸ್ಥ ಸದಾಶಿವ ದೇವಾಡಿಗ , ಜಯಂತಿ ಕೋಟ್ಯಾನ್, ಕೇಶವ ದೇವಾಡಿಗ, ಸುನೀಲ್ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.

ಓಟಿನ ಸಮಯ ಅಕ್ಕ, ಅಮ್ಮ ಅಜ್ಜ, ಅಜ್ಜಿ ಎಂದು ಪುಸಲಾಯಿಸಿ ಓಟು ಕೇಳಿ ನಂತರ ತಿರುಗಿಯೂ ಈ ಕಡೆ ನೋಡುವುದಿಲ್ಲ ಬಡವರ ಕಷ್ಟ ಅವರಿಗೇನು ಗೊತ್ತು? ಮುಂದಿನ ಲೋಕ ಸಭೆ ಚುನಾವಣೆಯೊಳಗೆ ರಸ್ತೆ ಡಾಮಾರೀಕರಣಗೊಳಿಸದಿದ್ದರೆ ಖಂಡಿತಾ ಚುನಾವಣಾ ಬಹಿಷ್ಕಾರ ಹಾಕುತ್ತೇವೆ. (ಹಿರಿಯ ನಾಗರೀಕರು) ಕಮಲ ನೆಲಗುಡ್ಡೆ

ರಸ್ತೆ ದುರಸ್ಥಿ ಬಗ್ಗೆ ಇಲಾಖಾಕಾರಿಗಳು ಹಾಗೂ ಜನಪ್ರತಿನಿಗಳು ರಸ್ತೆ ಸರಿಪಡಿಸುವಲ್ಲಿ ವೈಜ್ಞಾನಿಕವಾಗಿ ಚಿಂತಿಸಿ ಗ್ರಾಮಸ್ಥರ ಮತ್ತು ಕೃಷಿಕರ ಬೇಡಿಕೆಗಳನ್ನು ಪೂರೈಸಬೇಕಾಗಿದೆ. ಲೀಲಾ ಕೆ.

Kinnigoli-05101301

Kinnigoli-05101302

Comments

comments

Comments are closed.

Read previous post:
Kinnigoli-04101302
ಕಿನ್ನಿಗೋಳಿ ಮೀನು ಮಾರುಕಟ್ಟೆ ನಿರ್ಮಾಣ

ಕಿನ್ನಿಗೋಳಿ: ಕರಾವಳಿ ಅಭಿವ್ದೃ ಪ್ರಾಕಾರದ ಅನುದಾನದಲ್ಲಿ ಸುಮಾರು 76 ಲಕ್ಷ ರೂ ವೆಚ್ಚದಲ್ಲಿ ಕಳೆದ ಜನವರಿ 2012 ರಂದು ರಾಜ್ಯದ ಮುಖ್ಯಮಂತ್ರಿ ದಿ ವಿ ಸದಾನಂದ ಗೌಡರಿಂದ ಶಿಲಾನ್ಯಾಸ...

Close