ಹರಿಶ್ಚಂದ್ರ ಪಿ.ಸಾಲ್ಯಾನ್ – ಸಂಗ್ರಹ ಕೃತಿ ಅನಾವರಣ

Bhagyavan Sanil
ಮೂಲ್ಕಿ: ಸರ್ವಧರ್ಮೀಯರ ಇತಿಹಾಸ ಪ್ರಸಿದ್ದ ಆರಾಧನಾ ಕ್ಷೇತ್ರವಾದ ಬಪ್ಪನಾಡು ದೇವಸ್ಥಾನದ ಚರಿತ್ರೆ ಇನ್ನಷ್ಟು ಜನರಲ್ಲಿಗೆ ತಲುಪಬೇಕಾದರೆ ಅಕ್ಷರದ ರೂಪದಲ್ಲಿ ಮಾತ್ರ ಸಾಧ್ಯವಿದೆ. ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸು ಹೇಳಿದರು.
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಸಾಹಿತಿ ಹರಿಶ್ಚಂದ್ರ ಪಿ.ಸಾಲ್ಯಾನ್ ರಚಿಸಿರುವ ಶ್ರೀ ಕ್ಷೇತ್ರ ಬಪ್ಪನಾಡು ಲೇಖನಗಳ ಸಂಗ್ರಹದ ಕೃತಿಯನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಕೃತಿಯನ್ನು ಬಿಡುಗಡೆಗೊಳಿಸಿ ಸಾಹಿತಿಗಳಿಗೆ ಸೂಕ್ತ ವೇದಿಕೆಯನ್ನು ನಿರ್ಮಿಸುವ ಕೆಲಸ ಪೂಜಾ ಕೇಂದ್ರಗಳಿಂದ ನಿರಂತರವಾಗಿ ನಡೆಯಬೇಕು ಮತ್ತು ಭಕ್ತಾದಿಗಳು ಸಾಹಿತ್ಯವನ್ನು ಕೊಂಡು ಕೊಂಡಾಡಬೇಕು ಆಗ ಮಾತ್ರ ಕವಿಯ ಪ್ರಯತ್ನ ಸಾರ್ಥಕವಾಗುವುದು ಎಂದರು.
ಕೃತಿಕಾರ ಹರಿಶ್ಚಂದ್ರ ಪಿ ಸಾಲ್ಯಾನ್‌ರನ್ನು ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದ ವತಿಯಿಂದ ಕೊಡೆತ್ತೂರು ಭುವನಾಭಿರಾಮ ಉಡುಪ ಸನ್ಮಾನಿಸಿದರು.
ದೇವಳದ ಅಧ್ಯಕ್ಷ ಎನ್.ಎಸ್.ಮನೋಹರ ಶೆಟ್ಟಿ, ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ,ಎಚ್,ಅರವಿಂದ ಪೂಂಜಾ, ಬಾಲಪ್ರತಿಭೆ ಆಯನಾ ವಿ.ರಮಣ್ ಉಪಸ್ಥಿತರಿದ್ದರು.
ಲಕ್ಷ್ಮೀಕಾಂತ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ದೇವಳದ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಆಯನ ವಿ.ರಮಣ್‌ರಿಂದ ನೃತ್ಯ ಮತ್ತು ಪ್ರತಿಭಾ ಪ್ರದರ್ಶನ ನಡೆಯಿತು.

Kinnigoli-07101301

Comments

comments

Comments are closed.

Read previous post:
Kinnigoli-05101304
ಕಟೀಲು ವಿಜಯಾ ಬ್ಯಾಂಕ್: ಐ.ಕುಮಾರ್ ಶೆಟ್ಟಿ ನಿವೃತ್ತ

ಕಿನ್ನಿಗೋಳಿ : ಕಟೀಲು ವಿಜಯಾ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮೆನೇಜರ್ ಆಗಿದ್ದ ಐ.ಕುಮಾರ್ ಶೆಟ್ಟಿಯವರು 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಕಟೀಲು ಶಾಖೆಯಲ್ಲಿ ಅಭಿನಂದಿಸಲಾಯಿತು. ಪ್ರಬಂಧಕರಾದ...

Close