ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಸರ್ಮಪಕ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಬಳಿ ಶಾಂಭವೀ ನದಿಯಿಂದ ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರು ಉದಗಿಸುವ ಉದ್ಧೇಶದಿಂದ ಪ್ರಾರಂಭಗೊಂಡ ಸುಮಾರು 16.8 ಕೋಟಿ ವೆಚ್ಚದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ತಿಳಿಸಿದ್ದಾರೆ.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಗುತ್ತಕಾಡು ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನಾ ಘಟಕದ ನೀರಿನ ಟ್ಯಾಂಕ್ ನಿರ್ಮಾಣ ಗೊಳ್ಳುತ್ತಿರುವ ಕೊಲ್ಲೂರು ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗುತ್ತಕಾಡು ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆ ಹಾಗೂ ಗ್ರಾಮದ ಪಂಪ್ ಸ್ಥಾವರಗಳಿಗೆ ಕಿಸಾನ್ ಶಕ್ತಿ ಕಂಟ್ರೋಲರ್ ಮೊಬೈಲ್ ತಂತ್ರಜ್ಞಾನ ಅಳವಡಿಸಬೇಕು ಎಂದು ಸೂಚಿಸಿದರು.
2012 ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಾಗಿದ್ದ ಬಹು ಗ್ರಾಮ ಕುಡಿಯುವ ನೀರಿನ ಯೋಜನಾ ಘಟಕದ ಕಾಮಗಾರಿ 2012 ನವೆಂಬರ್‌ನೊಳಗೆ ಪೂರ್ಣಗೊಳ್ಳುತ್ತದೆ ಎಂದು ಗುತ್ತಿಗೆದಾರರು ಭರವಸೆ ನೀಡಿದ್ದರು. ಹಲವು ತಿಂಗಳುಗಳ ಹಿಂದೆ ದೆಹಲಿಯ 30ಸಂಸದರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು ಕಾಮಗಾರಿಯ ಕುರಿತು ಅನುಮಾನ ವ್ಯಕ್ತ ಪಡಿಸಿತ್ತು. ನಂತರ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಈ ಕಾಮಗಾರಿ ಕುರಿತು ವಿಶೇಷ ಕಾಳಜಿ ವಹಿಸಿದ್ದರು. ಈಗ ಖುದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಕುಂಟುತ್ತಾ ಸಾಗುವ ಕಾಮಗಾರಿ ತ್ವರಿತವಾಗಿ ಮುಗಿಸುವ ಬಗ್ಗೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಇಲ್ಲದಿದ್ದಲ್ಲಿ ಸಂಸ್ಥೆಯನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ 100 ಎಚ್.ಪಿ.ಯ ಎರಡು ಪಂಪ್‌ಗಳನ್ನು ಜಾಕ್ ವೆಲ್‌ನಲ್ಲಿ ಅಳವಡಿಸಲಾಗಿದ್ದು 74 ಕಿಲೋಮೀಟರ್ ಉದ್ದದ ಪೈಪ್ ಕಾಮಾಗಾರಿಯಲ್ಲಿ 68 ಕಿಲೋಮೀಟರ್ ಕಾಮಗಾರಿ ಮುಗಿದಿದೆ. ಡಿಸೆಂಬರ್ ಒಳಗೆ ಕಾಮಗಾರಿ ಪೂರ್ತಿ ಮುಗಿಸಲಾಗುವುದು ಎಂದು ಗುತ್ತ್ತಿಗೆದಾರರು ತಿಳಿಸಿದರು.

ಮುಖ್ಯಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶೀ ಎನ್. ಆರ್. ಉಮೇಶ್, ಕಾರ್ಯಪಾಲಕ ಅಭಿಯಂತರ ಸತ್ಯನಾರಾಯಣ, ಅಧೀಕ್ಷಕ ಇಂಜಿನಿಯರ್ ರಂಗನಾಥ ನಾಯರ್ ಜಿಲ್ಲಾ ನೆರವು ಘಟಕ ಮೇಲ್ವಿಚಾರಕಿ ಮಂಜುಳಾ, ಕಿನ್ನಿಗೋಳಿ ಗ್ರಾ. ಪಂ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಉಪಾಧ್ಯಾಕ್ಷ ಜಾನ್ಸನ್ ಜೆರೋಮ್ ಡಿಸೋಜ, ಕಾರ್ಯದರ್ಶಿ ಒಸ್ವಾಲ್ಡ್ ಡಿಸೋಜ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಎ.ಪಿ.ಎಂ. ಸದಸ್ಯ ಪ್ರಮೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

KInnigoli-08101324

Comments

comments

Comments are closed.

Read previous post:
KInnigoli-08101323
ಗುತ್ತಕಾಡು ರಸ್ತೆ : ದಿ| ಸೋಮಪ್ಪ ಸುವರ್ಣ ಹೆಸರಿನಲ್ಲಿ ನಾಮಕರಣ

ಕಿನ್ನಿಗೋಳಿ : ಗುತ್ತಕಾಡು ರಸ್ತೆಯನ್ನು ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಮಾಜಿ ಶಾಸಕರಾದ ದಿ| ಸೋಮಪ್ಪ ಸುವರ್ಣ ಹೆಸರಿನಲ್ಲಿ ನಾಮಕರಣ ಮಾಡಲಾಯಿತು. ಈ ಸಂದರ್ಭ ಬಿಲ್ಲವ ಮುಂದಾಳು ಕಡಂಬೋಡಿ...

Close