ದೇಶಕ್ಕೆ ಅನ್ನ ನೀಡುವ ರೈತರು

ಕಿನ್ನಿಗೋಳಿ: ದೇಶಕ್ಕೆ ಅನ್ನ ನೀಡುವ ರೈತರ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಹುಟ್ಟು ಹಾಕಿದ ರೈತ ಸಂಘ, ಶೋಷಣೆಯ ವಿರುದ್ಧ ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಇದೆ. ಎಂದು ಐಕಳ ರೈತ ಸಂಘದ ಗೌರವಾಧ್ಯಕ್ಷ ರಘುರಾಮ ಅಡ್ಯಂತಾಯ ಹೇಳಿದರು.
ಕಿನ್ನಿಗೋಳಿ ಸಮೀಪದ ಪಟ್ಟೆ ಪೆರ್ಗುಂಡಿ ಸಾರ್ವಜನಿಕ ಗಣೇಶೋತ್ಸವ ಸಭಾಂಗಣದಲ್ಲಿ  ರಾಜ್ಯ ರೈತ ಸಂಘ ಮೂಡಬಿದ್ರೆ ವಲಯದ ಐಕಳ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಮುಲ್ಕಿ ರೈತ ಸೇವಾ ಕೇಂದ್ರವನ್ನು ೩೨ ಗ್ರಾಮಗಳಿಗೆ ಕೇಂದ್ರವಾದ ಕಿನ್ನಿಗೋಳಿಗೆ ಸ್ಥಳಾಂತರಿಸಲು ಎಲ್ಲರೂ ಪ್ರಯತ್ನ ಪಡಬೇಕು ಸಬ್ಸಿಡಿಯಲ್ಲಿ ದೊರೆಯುವ ಕೃಷಿಗೆ ಸಂಬಂದಿಸಿದ ವಸ್ತುಗಳನ್ನು ಪಡೆದು ಸದ್ಬಳಕೆ ಮಾಡಬೇಕು ಎಂದು ತಿಳಿಸಿದರು.
ಮನುಷ್ಯನ ಮೌಲ್ಯ ವೃದ್ಧಿಯಾಗಲು ಸಂಘಟನೆ ಮುಖ್ಯ. ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಸರಕಾರದಿಂದ ದೊರಕುವ ಅನುಕೂಲತೆಗಳನ್ನು ಪಡೆಯಬೇಕು ಅಲ್ಲದೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಅತೀ ಸಣ್ಣ ರೈತ ಹಾಗೂ ಸಣ್ಣ ರೈತರಿಗೆ ಸಿಗುವ ಸವಲತ್ತುಗಳನ್ನು ಪಡಕೊಳ್ಳಬೇಕು ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ವೈ.ಕೃಷ್ಣ ಸಾಲ್ಯಾನ್ ಹೇಳಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪರಿಸರ ಹಾನಿ ಮಾಡುವ ಯೋಜನೆಗಳಾದ ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಹಾಗೂ ನೇತ್ರಾವತಿ ತಿರುವು ಯೋಜನೆಯ ವಿರುದ್ಧ ರೈತಸಂಘ ವಿರೋಧ ವ್ಯಕ್ತ ಪಡಿಸಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಬೇಕು ಎಂದು ನಿವೃತ್ತ ಉಪನ್ಯಾಸಕ ಜೆ.ಬಿ. ಮಿರಾಂದ ಹೇಳಿದರು. ಮನವಿಗಳನ್ನು ನೀಡಲು ಸಭೆಯಲ್ಲಿ ಒಕ್ಕೊಲರ ತೀರ್ಮಾನವಾಯಿತು.
ಐಕಳ ಘಟಕ ರೈತ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಐಕಳ ಘಟಕ ರೈತ ಸಂಘದ ಉಪಾಧ್ಯಕ್ಷ ಗ್ರೆಗರಿ ಪಿಂಟೊ, ಮಾಜಿ ಐಕಳ ಪಂಚಾಯಿತಿ ಅದ್ಯಕ್ಷೆ ಉಷಾ ಜೆ. ಶೆಟ್ಟಿ, ಪಂಚಾಯಿತಿ ಸದಸ್ಯ ಪ್ರಕಾಶ ಶೆಟ್ಟಿ, ಜಯಂತ್ ಬೈಲಂಗಡಿ ಉಪಸ್ಥಿತರಿದ್ದರು. ಐಕಳ ಘಟಕ ರೈತ ಸಂಘದ ಕಾರ್ಯದರ್ಶಿ ಡೆನಿಸ್ ಸೆರಾವೊ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ರಘುರಾಮ ಕಾರ್ಯಕ್ರಮ ನಿರೂಪಿಸಿದರು.

Kinnigoli-14101302

Comments

comments

Comments are closed.

Read previous post:
Kinnigoli-14101301
ಪಂಚೇಂದ್ರಿಯಗಳಲ್ಲಿ ನಯನವೇ ಪ್ರಧಾನ

ಕಿನ್ನಿಗೋಳಿ : ಪಂಚೇಂದ್ರಿಯಗಳಲ್ಲಿ ನಯನವೇ ಪ್ರಧಾನ ಎಂದು ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವೆಂಕಟರಮಣ ಆಸ್ರಣ್ಣ ಹೇಳಿದರು. ಮಂಗಳೂರು ನೇತ್ರ ಚಿಕಿತ್ಸಾ ಕೇಂದ್ರ ವಾಸನ್ ಐ ಕೇರ್ ನೇತ್ರತ್ವದಲ್ಲಿ...

Close