ಅವಿತಿರುವ ಅರಿವುಗಳು ಕೃತಿ ಬಿಡುಗಡೆ

ಕಿನ್ನಿಗೋಳಿ :ಮೌಲ್ಯಾಧರಿತ ಚಿಂತನೆ, ಆತ್ಮಗೌರವ ಹಾಗೂ ಸಂಸ್ಕಾರಗಳು ಮಾನವನ ಬದುಕನ್ನು ಹಸನಾಗಿಸುತ್ತದೆ ಎಂದು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಹೇಳಿದರು.
ಮಂಗಳವಾರ ಮೂರುಕಾವೇರಿ “ಮಾರ್ಜೋಲ್” ಮನೆಯಂಗಳದಲ್ಲಿ ಜೋಯ್ಸ್ ಪಿಂಟೊ ವಿರಚಿತ “ಅವಿತಿರುವ ಅರಿವುಗಳು” ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಮೇರಿವೇಲ್ ಕಾನ್ವೆಂಟ್‌ನ ಭಗಿನಿ ಇನ್ವಿಯೋಲತಾ ಬಿ.ಎಸ್. ಅಧ್ಯಕ್ಷತೆ ವಹಿಸಿ “ನಾಲ್ಕು ಭಾಷೆಗಳಲ್ಲಿ ಕವನ ಬರೆಯುವ ಯುವ ಕವಯಿತ್ರಿ ಜೋಯ್ಸ್ ಪಿಂಟೊ ಇಂದಿನ ಕಾಲದ ಯುವಜನಾಂಗದ ಜ್ವಲಂತ ಸಮಸ್ಯೆ ಹಾಗೂ ಸಾಮಾಜಿಕ ಕಾಳಜಿಯನ್ನು ಕವನಗಳಲ್ಲಿ ಮೂಡಿಸಿದ್ದಾರೆ” ಎಂದು ಹೇಳಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ.ಪಿಂಟೊ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕವಯಿತ್ರಿ ಜೋಯ್ಸ್ ಪಿಂಟೊ, ಲಿಯೋ ಪಿಂಟೊ ಉಪಸ್ಥಿತರಿದ್ದರು.
ವಿಲ್ಮಾ ಪಿಂಟೊ ಸ್ವಾಗತಿಸಿ ಜೋಯಲ್ ಪಿಂಟೊ ವಂದಿಸಿದರು. ಶೈಲಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-14101304

Comments

comments

Comments are closed.

Read previous post:
Kinnigoli-14101303
ಬಿಜೆಪಿ ಆಡಳಿತ ಪಂಚಾಯಿತಿಗೆ ಶಾಸಕರ ಅಸಹಕಾರ; ಆರೋಪ

ಕಿನ್ನಿಗೋಳಿ : ಅಭಿವೃದ್ಧಿಗೆ ಸಹಕಾರ ನೀಡಬೇಕಾದ ಕ್ಷೇತ್ರದ ಶಾಸಕರು ಬಿಜೆಪಿ ಆಡಳಿತ ಇರುವ ಗ್ರಾಮ ಪಂಚಾಯಿತಿಗಳಿಗೆ ಅಸಹಕಾರ ನೀಡುತ್ತಿದ್ದು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಗ್ರಾಮದ ಅಭಿವೃದ್ಧಿಗೋಸ್ಕರ ಕೈಗೊಂಡ ಸರ್ವಾನುಮತದ...

Close