ಪಂಚೇಂದ್ರಿಯಗಳಲ್ಲಿ ನಯನವೇ ಪ್ರಧಾನ

ಕಿನ್ನಿಗೋಳಿ : ಪಂಚೇಂದ್ರಿಯಗಳಲ್ಲಿ ನಯನವೇ ಪ್ರಧಾನ ಎಂದು ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವೆಂಕಟರಮಣ ಆಸ್ರಣ್ಣ ಹೇಳಿದರು.
ಮಂಗಳೂರು ನೇತ್ರ ಚಿಕಿತ್ಸಾ ಕೇಂದ್ರ ವಾಸನ್ ಐ ಕೇರ್ ನೇತ್ರತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು, ಹಾಗೂ ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ನ ಸಹಯೋಗದೊಂದಿಗೆ  ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  ವಾಸನ್ ಐಕೇರ್‌ನ ತಜ್ಞ ವೈದ್ಯರಿಂದ ಸುಮಾರು 200 ವಿದ್ಯಾರ್ಥಿಗಳ ನೇತ್ರ ತಪಾಸಣೆ ಹಾಗೂ ಕಣ್ಣಿನ ಮುಂಜಾಗ್ರತೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ವಾಸನ್ ಐಕೇರ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರೊನಾಲ್ಡ್ ಫೆರ್ನಾಂಡಿಸ್, ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್ ಕಾರ್ಯದರ್ಶಿ ರಂಜಿತಾ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜು ಪ್ರಾಚಾರ‍್ಯ ಜಯರಾಮ ಪೂಂಜ ಸ್ವಾಗತಿಸಿದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ವಂದಿಸಿದರು. ಉಪನ್ಯಾಸಕ ಪುಂಡರೀಕ ಕಾರ್ಯಕ್ರಮ ನಿರೂಪಿಸಿದರು.

Kinnigoli-14101301

Comments

comments

Comments are closed.

Read previous post:
Sweet-potato
ಪ್ರಕೃತಿ ವೈಚಿತ್ರ : ಹಾವಿನ ರೂಪದ ಕೆಂಪು ಗೆಣಸು

ಕಿನ್ನಿಗೋಳಿ : ಮೂರುಕಾವೇರಿ ಸಮೀಪದ ಕಾಜುಗುರಿ ಕೆಲ್ವಿನ್ ಸಲ್ಡಾನ ಅವರ ತೋಟದಲ್ಲಿ ಕಂಡು ಬಂದ ಹಾವಿನ ರೂಪದ ಕೆಂಪು ಗೆಣಸು

Close