ಕಿನ್ನಿಗೋಳಿ ವಿಶೇಷ ಗ್ರಾಮ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋದನೆಯ ವಿಶೇಷ ಗ್ರಾಮ ಸಭೆ ಕಿನ್ನಿಗೋಳಿ ಪಂಚಾಯಿತಿ ಸಭಾ ಭವನದಲ್ಲಿ ಗುರುವಾರ ನಡೆಯಿತು.
ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಠಿ, ಆರ್ಥಿಕ ಅಭಿವೃದ್ಧಿ. ಗ್ರಾಮಗಳ ಸಬಲೀಕರಣ ಮುಖ್ಯ ಉದ್ದೇಶವಾಗಿದ್ದು ಈ ಯೋಜನೆಯನ್ನು ಜನಪ್ರಿಯಗೊಳಿಸಲು ಅಧಿಕಾರಿಗಳು ಶ್ರಮ ಪಡಬೇಕು. ಕೃಷಿ ಇಲಾಖೆಯಲ್ಲಿನ ಕಾಮಗಾರಿಗಳಾದ ಕಾಂಪೋಸ್ಟ್ ಗುಂಡಿ, ಎರೆಹುಳು ಗೊಬ್ಬರ ಘಟಕಗಳ ನಿರ್ಮಾಣ, ದ್ರವ ರೂಪದ ಜೈವಿಕ ಗೊಬ್ಬರ ಘಟಕ, ಜೈವಿಕ ಇಂಧನ, ತಡೆಗೋಡೆ ನಿರ್ಮಾಣ, ಬಾವಿ, ಕೆರೆ ಕಾಲುವೆ ನಿರ್ಮಾಣ, ಭೂಮಿ ಸಮತಟ್ಟು ಹಾಗೂ ಇನ್ನಿತರ ಕೃಷಿ ಸಂಬಂಧ ಕೆಲಸಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮ ಹೊಲ ನಮ್ಮ ದಾರಿ ಯೊಜನೆಯಡಿಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಅಲ್ಲದೆ ದಿನಗೂಲಿ 174  ನೀಡಲಾಗುತ್ತಿದೆ. ಎಂದು ತಾಲೂಕು ಲೆಕ್ಕ ಪರಿಶೋಧನೆ ಸಂಯೋಜಕ ರಾಜು ಸಾಲ್ಯಾನ್ ಪೂರಕ ಮಾಹಿತಿ ನೀಡಿದರು.
ಗುತ್ತಕಾಡು ಮಸೀದಿ ಕೆರೆಯ ಹೂಳೆತ್ತುವಿಕೆ ಕಾಮಗಾರಿ ಈ ಯೋಜನೆಯಲ್ಲಿ ಪೂರ್ಣಗೊಡಿದೆ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಸಭೆಯಲ್ಲಿ ತಿಳಿಸಿದರು.
ಎನ್.ಆರ್.ಜಿ. ಸಹಾಯಕ ನಿರ್ದೇಶಕ ಸಿಪ್ರಿಯಾನ್ ಮಿರಾಂದ, ಕಿನ್ನಿಗೋಳಿ ಪಂಚಾಯಿತಿ ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿಸೋಜ, ಪಂಚಾಯಿತಿ ಕಾರ್ಯದರ್ಶಿ ಒಲಿವರ್ ಒಸ್ವಾಲ್ಡ್ ಪಿಂಟೊ, ಪಿಡಿಒ ಅರುಣ್ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

Kinnigoli-14101305

Comments

comments

Comments are closed.

Read previous post:
Kinnigoli-14101304
ಅವಿತಿರುವ ಅರಿವುಗಳು ಕೃತಿ ಬಿಡುಗಡೆ

ಕಿನ್ನಿಗೋಳಿ :ಮೌಲ್ಯಾಧರಿತ ಚಿಂತನೆ, ಆತ್ಮಗೌರವ ಹಾಗೂ ಸಂಸ್ಕಾರಗಳು ಮಾನವನ ಬದುಕನ್ನು ಹಸನಾಗಿಸುತ್ತದೆ ಎಂದು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಹೇಳಿದರು. ಮಂಗಳವಾರ ಮೂರುಕಾವೇರಿ "ಮಾರ್ಜೋಲ್" ಮನೆಯಂಗಳದಲ್ಲಿ ಜೋಯ್ಸ್...

Close