ಕೊಲ್ಲೂರು : ಆಯುಷ್ ಮನೆಮದ್ದು ಕಾರ್ಯಕ್ರಮ

ಕಿನ್ನಿಗೋಳಿ : ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ ಆಯುಷ್ ಇಲಾಖೆ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕೊಲ್ಲೂರು, ಹಳೇ ವಿದ್ಯಾರ್ಥಿ ಸಂಘ ಕೊಲ್ಲೂರು ಹಾಗೂ ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯ. ಮೂಡಬಿದರೆ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕೊಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯುಷ್ ಮನೆಮದ್ದು ಕಾರ್ಯಕ್ರಮ ನಡೆಯಿತು.
ವೈದ್ಯಾಧಿಕಾರಿ ಡಾ.ಮುರಳೀಧರ.ಎ. ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ಸರಳ ಉಪಾಯಗಳು ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಮೂಡಬಿದರೆ ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯ ಉಪನ್ಯಾಸಕರಾದ ಡಾ.ದೀಪಕ ಬಂಗೇರ, ಹಾಗೂ ಡಾ.ಬಿನು ಶಾಲಾ ಮಕ್ಕಳ ಎತ್ತರ, ತೂಕ,ವಯಸ್ಸು ಮುಂತಾದವುಗಳಿಂದ ಅಪೌಷ್ಟಿಕತೆಯನ್ನು ಗುರುತಿಸುವ ಬಗ್ಗೆ ಪ್ರಾತ್ಯಕ್ಷತೆ ಮೂಲಕ ವಿವರಿಸಿದರು.
ಕೊಲ್ಲೂರು ಗ್ರಾಮಸ್ಥರು ಹಾಗೂ ಮೂಡಬಿದರೆ ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯದ ೪೦ ವಿದ್ಯಾರ್ಥಿಗಳು ಮಾಹಿತಿ ಕಾರ್ಯಕ್ರಮ ಪ್ರಾತ್ಯಕ್ಷತೆಯಲ್ಲಿ ಭಾಗವಹಿಸಿದ್ದರು. ಕೊಲ್ಲೂರು ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಮೈಕಲ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-14101306

Comments

comments

Comments are closed.