ನಂಬಿಕೆ ಮುಖ್ಯ ಮೌಢ್ಯತೆ ಸಲ್ಲದು ; ರಮಾನಾಥ ರೈ

ಕಿನ್ನಿಗೋಳಿ: ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಸಾಮಾಜಿಕ ಶಾಂತಿ, ಸೌಹಾರ್ಧ್ಯತೆ, ಸಹೃದಯತೆ ನಮ್ಮಲ್ಲಿರಬೇಕು. ಭ್ರಷ್ಟಾಚಾರಿ, ಅತ್ಯಾಚಾರಿಗೆ ಹಾಗೂ ಸಾಮಾಜಿಕ ಚಿಂತನೆ ಇಲ್ಲದವರನ್ನು ದೂರವಿರಿಸುವ ಪ್ರಯತ್ನ ಮಾಡಬೇಕು, ನಿಷ್ಕಳಂಕ ಪ್ರಾಮಾಣಿಕ ರಾಜಕಾರಣಿಗಳಿಗೆ ಮಾಧ್ಯಮ ಹಾಗೂ ಪರೋಕ್ಷ ಸಹಕಾರ ಇರಬೇಕು. ಧಾರ್ಮಿಕ ಪ್ರಜ್ಞೆಯಲ್ಲಿ ನಂಬಿಕೆ ಪ್ರಾಮುಖ್ಯತೆ ಪಡೆಯುತ್ತದೆ. ಜನರಲ್ಲಿರುವ ಮೌಢ್ಯತೆಯನ್ನು ಜಾಗೃತಿಯ ಮೂಲಕ ದೂರಮಾಡುವ ಜವಾಬ್ದಾರಿ ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳ ಮೇಲಿದೆ. ಎಂದು ಅರಣ್ಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಕಿನ್ನಿಗೋಳಿ ಬಳಿಯ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದಲ್ಲಿ ಭಾನುವಾರ ನಡೆದ ಶರನ್ನವರಾತ್ರಿ ಉತ್ಸವದ ಧಾರ್ಮಿಕ ಸಭೆಯಲ್ಲಿ ಕಿನ್ನಿಗೋಳಿ ಪರಿಸರದ ಪತ್ರಕರ್ತರೊಂದಿಗೆ ಧಾರ್ಮಿಕ ಪ್ರಜ್ಞೆ ಮತ್ತು ಮೌಢ್ಯತೆ ಬಗ್ಗೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿ ಮಾತನಾಡಿದರು.
ಸ್ಪಂದನ ಟಿ.ವಿ.ವಾಹಿನಿ ಸಮೂಹ ಸಂಪಾದಕ ಹರೀಶ್ ಆದೂರು ಚಿಂತನ ಮಂಥನ ನಡೆಸಿ ಸಧೃಢ ಇತಿಹಾಸವಿರುವ ಮಾಧ್ಯಮವು ಧಾರ್ಮಿಕತೆಯ ಬಗ್ಗೆ ಹೆಚ್ಚಿನ ಚಿಂತನೆ ನಡೆಸಿ, ಜನರೊಂದಿಗೆ ಜನ ಪ್ರತಿನಿಧಿಗಳು ಮಂಥನವನ್ನು ಮುಕ್ತವಾಗಿ ಭಾಗವಹಿಸಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಪತ್ರಕರ್ತ ಸಮಾಜದ ಒಳಿತು ಹಾಗೂ ತತ್ವ ನಿಷ್ಠೆಗೆ ಆದರ್ಶಪ್ರಾಯನಾಗಿರಬೇಕು ಎಂದು ತಿಳಿಸಿದರು.
ಯುವಜನಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಸಂವಾದದಲ್ಲಿ ತನ್ನ ಭ್ರಷ್ಟಚಾರ ರಹಿತ ರಾಜಕಾರಣದ ಅನುಭವ ತೆರೆದಿಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪತ್ರಕರ್ತ ನರೇಂದ್ರ ಕೆರೆಕಾಡು ಸಂವಾದದ ಉದ್ದೇಶ ಆಶಯ ಹಾಗೂ ಮಾಧ್ಯಮದ ಕಳಕಳಿಯ ಬಗ್ಗೆ ಜೊತೆಗೆ ಮೌಢ್ಯತೆಯನ್ನು ಅಳವಡಿಸುವ ಸರ್ಕಾರದ ಕ್ರಮದ ಬಗ್ಗೆ ದಿಕ್ಸೂಚಿ ಮಾತುಗಳನ್ನಾಡಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿ ಸಾಮಾಜಿಕ ಕ್ರಾಂತಿ ಆದಾಗ ಮೊದಲು ಸಮಾಜದ ವಿರೋಧ ವ್ಯಕ್ತವಾಗುವುದು ಸಹಜ ಪ್ರಕ್ರಿಯೆ. ನಾರಾಯಣಗುರುಗಳು, ಗಾಂಧೀಜಿ, ಬಸವಣ್ಣನವರು ಕೈಗೊಂಡ ಕ್ರಾಂತಿಕಾರಿ ಬದಲಾವಣೆಗೂ ಆ ಕಾಲದಲ್ಲಿ ವಿರೋಧ ಇತ್ತು ಆದರೆ ಗಾಢವಾದ ಚಿಂತನೆ ನಡೆಸಿದಾಗ ಕ್ರಮೇಣ ಪ್ರತಿರೋಧ ತಿಳಿಯಾಗುತ್ತದೆ. ಜನರನ್ನು ಮೋಸ, ವಂಚನೆ ಮಾಡುವ ಮೌಢ್ಯತೆಗೆ ಜನ ಜಾಗೃತಿಯೇ ಸೂಕ್ತ ಮಾರ್ಗವಾಗಿದೆ ಎಂದು ಹೇಳಿದರು.
ಯುವಜನಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ದೇವಸ್ಥಾನದ ಕಾರ್ಯಾಧ್ಯಕ್ಷ ಉಳೆಪಾಡಿ ನಾರಾಯಣ ಶೆಟ್ಟಿ. ಕಿನ್ನಿಗೋಳಿಯ ಪತ್ರಕರ್ತರಾದ ರಘುನಾಥ ಕಾಮತ್ ಕೆಂಚನಕೆರೆ, ಯಶವಂತ ಐಕಳ, ನರೇಂದ್ರ ಕೆರೆಕಾಡು, ಪುನೀತ್ ಕೃಷ್ಣ, ಸುನಿಲ್ ಹಳೆಯಂಗಡಿ, ಪ್ರಕಾಶ್ ಸುವರ್ಣ, ನಿಶಾಂತ್ ಶೆಟ್ಟಿ ಕಿಲೆಂಜೂರು, ಕಾರ್ಪೋರೇಶನ್ ಬ್ಯಾಂಕ್‌ನ ಹಿರಿಯ ಅಧಿಕಾರಿ ಕೃಷ್ಣ ಮೋಹನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ ಮೇಲ್ವಿಚಾರಕ ಸತೀಶ್, ಉಪಸ್ಥಿತರಿದ್ದರು.
ಕ್ಷೇತ್ರದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪತ್ರಕರ್ತ ಶರತ್ ಶೆಟ್ಟಿ ಸಂಕಲಕರಿಯ ಸಮನ್ವಯಕಾರನಾಗಿ ಕಾರ್ಯಕ್ರಮ ನಿರ್ವಹಿಸಿದರು.

Kinnigoli15101301

Comments

comments

Comments are closed.

Read previous post:
Kinnigoli-14101306
ಕೊಲ್ಲೂರು : ಆಯುಷ್ ಮನೆಮದ್ದು ಕಾರ್ಯಕ್ರಮ

ಕಿನ್ನಿಗೋಳಿ : ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ ಆಯುಷ್ ಇಲಾಖೆ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕೊಲ್ಲೂರು, ಹಳೇ ವಿದ್ಯಾರ್ಥಿ ಸಂಘ ಕೊಲ್ಲೂರು ಹಾಗೂ ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸೆ...

Close