SKPA ಮುಲ್ಕಿ ವಲಯ ದಶಮಾನೋತ್ಸವ ಸಭೆ

ಕಿನ್ನಿಗೋಳಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ ರಾಜ್ಯದಲ್ಲಿಯೇ ಮುಂಚೂಣಿಯ ಸಂಘಟನೆಯಾಗಿದ್ದು ಗ್ರಾಮೀಣ ವಲಯದ ಸದಸ್ಯರು ಸಂಘಟಿತರಾಗಿ ಸಮಾಜ ಸೇವೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಪೋಟೋಗ್ರಾಫರ‍್ಸ್ ಎಸೋಸಿಯೇಶನ್ ಅಧ್ಯಕ್ಷ ವಾಸುದೇವ ರಾವ್ ಹೇಳಿದರು.
ಕಿನ್ನಿಗೋಳಿ ಯುಗಪುರುಷದಲ್ಲಿ ಮಂಗಳವಾರ ನಡೆದ ಪೊಟೋಗ್ರಾಫರ‍್ಸ್ ಎಸೋಸಿಯೇಶ್ ಮುಲ್ಕಿ ವಲಯದ ದಶಮಾನೋತ್ಸವ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಮುಲ್ಕಿ ವಲಯದ ದಶಮಾನೋತ್ಸವ ಉದ್ಘಾಟನೆಯನ್ನು ಅಕ್ಟೋಬರ್ 29 ಮಂಗಳವಾರ ನಡೆಸಿ ಪ್ರತೀ ತಿಂಗಳು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು. ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರು ಮತ್ತು ತಂಡವನ್ನು ಅಭಿನಂದಿಸಲಾಯಿತು.
2011-13ಸಾಲಿನ ಅಧ್ಯಕ್ಷ ರೆಫೆಲ್ ರೆಬೆಲ್ಲೋ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಹರ್ಷಾಕರ್, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ, ಮುಲ್ಕಿ ವಲಯದ 2013-15ನೇ ಸಾಲಿನ ಅಧ್ಯಕ್ಷ ನವೀನ್ ಕುಮಾರ್ ಕಟೀಲು, ಕಾರ್ಯದರ್ಶಿ ಕೆ.ಬಿ.ಸುರೇಶ್, ಯಶವಂತ ಐಕಳ, ಮಾಜಿ ಅಧ್ಯಕ್ಷ ಲೈನೆಲ್ ಪಿಂಟೋ ಉಪಸ್ಥಿತರಿದ್ದರು.

Kinnigoli16101302

Comments

comments

Comments are closed.

Read previous post:
Kinnigoli15101303
ಯುಗಪುರುಷ ಮಾಸ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿಯ ಯುಗಪುರುಷ ಮಾಸ ಪತ್ರಿಕೆ ದಸರಾ ದೀಪಾವಳಿ ವಿಶೇಷಾಂಕವನ್ನು ಸೋಮವಾರ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರಿ ದೇವಳ ಸನ್ನಿಧಿಯಲ್ಲಿ ಕ್ಷೇತ್ರದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್...

Close