ದೇವತಾ ಕಾರ್ಯಕ್ಕೆ ದೇವರ ಅನುಗ್ರಹವಿದೆ

Puneetha Krishna Mulki
ನೆಲ್ಲಿತೀರ್ಥ : ಶ್ರೀ ಕ್ಷೇತ್ರ ಕಟೀಲು ಹಾಗೂ ನೆಲ್ಲಿತೀರ್ಥಕ್ಕೂ ಅವಿನಾಭಾವ ಸಂಬಂಧವಿದೆ ಜಗತ್ತಿನಲ್ಲಿ ಶ್ರೀ ಕ್ಷೇತ್ರ ನೆಲ್ಲಿತೀರ್ಥವನ್ನು ಜನರು ಗುರುತಿಸುವಂತೆ ಮಾಡಿದ ಇಲ್ಲಿನ ಭಕ್ತರ ಕಾರ್ಯ ಸಾಧನೆ ಮೆಚ್ಚವಂತಹದ್ದು. ಭಕ್ತರ ಸಹಾಯ ಮುಖ್ಯ. ದೇವತಾ ಕಾರ್ಯಗಳಿಗೆ ಸಹಾಯ ಮಾಡಿದರೆ ದೇವರ ಅನುಗ್ರಹ ಖಂಡಿತಾ ಸಾದ್ಯ ಎಂದು ಶ್ರೀ ಕ್ಷೇತ್ರ ಕಟೀಲು ದೇವಳದ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಶ್ರೀ ಕ್ಷೇತ್ರ ನೆಲ್ಲಿತೀರ್ಥ ಗುಹಾ ಪ್ರವೇಶ ಹಾಗೂ ತೀರ್ಥ ಸ್ನಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಊರಿನವರೆಲ್ಲರೂ ಒಗ್ಗಟ್ಟಾದರೆ ಮಾತ್ರ ಮುಂದಿನ ದೇಗುಲದ ಜೀರ್ಣೋದ್ದಾರ ಕಾರ‍್ಯಕ್ರಮಗಳು ನಡೆಯಲು ಸಾದ್ಯ ಎಂದು ಅಬಿಪ್ರಾಯಪಟ್ಟರು.
ಈ ಸಂಧರ್ಭ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ,ನಿಡ್ಡೋಡಿ ಜ್ಞಾನರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷ ಭಾಸ್ಕರ ದೇವಸ್ಯ, ಮುಂಬೈ ಉದ್ಯಮಿ ಡಿ.ಕೃಷ್ಣ ಶೆಟ್ಟಿ ಮುರ,ಎಕ್ಕಾರು, ಮುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಶ್ರೀಪತಿ ಭಟ್, ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಸುಬ್ರಾಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಧನ್ಯವಾದವಿತ್ತರು.

Kinnigoli-17101303

Kinnigoli-17101304

Kinnigoli-17101305

 

Comments

comments

Comments are closed.

Read previous post:
Kinnigoli-17101302
ಮೂಲ್ಕಿ-ಬೆಳ್ಳಾಯರು ಹುಡ್ಕೋ ಕಾಲನಿ-ಗ್ರಾಹಕರ ಆಕ್ಷೇಪ

Narendra Kerekadu ಮೂಲ್ಕಿ: ಜನಸಾಮಾನ್ಯರಿಗೆ ಉಪಯೋಗವಾಗಬೇಕಿದ್ದ ಗೃಹ ಮಂಡಳಿ ತನ್ನೆಲ್ಲ ಚೈತನ್ಯ ಕಳೆದುಕೊಂಡು ಬಿಟ್ಟಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯೊಂದು ಮೂಲ್ಕಿ ಬಳಿಯ ಪಡುಪಣಂಬೂರು ಗ್ರಾಮ ಪಂಚಾಯಿತಿಯ ಬೆಳ್ಳಾಯರು ಎಂಬ...

Close