ದಾಮಸ್‌ಕಟ್ಟೆ ಕಿರೆಂ ಚರ್ಚ್ ಬಳಿ ಮೋರಿ ರಚನೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಕಿರೆಂ ಚರ್ಚ್ ಬಳಿಯ ರಸ್ತೆಯಲ್ಲಿ ಒಂದರಿಂದ ಎರಡು ಅಡಿ ನೀರು ನಿಲ್ಲುತ್ತಿದ್ದು ಕಳೆದ ವರ್ಷ ಸ್ಥಳೀಯ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳು ಒಂದಿಷ್ಟು ಶ್ರಮದಾನ ಮಾಡಿ ಹೊಂಡ ಮುಚ್ಚಿ ಅಲ್ಪ ಮುಕ್ತಿ ದೊರಕಿಸಿ ಮಾನವೀಯತೆ ಪ್ರದರ್ಶಿಸಿದ್ದರು. ಪ್ರಸ್ತುತ ಸ್ಥಳದಲ್ಲಿ ಮೋರಿ ರಚನೆ ಆಗುತಿದ್ದು ವಿಜಯ ಕರ್ನಾಟಕ ಹಲವಾರು ಬಾರಿ ಸಚಿತ್ರ ವರದಿ ಪ್ರಕಟಿಸಿದ್ದು ಈಗ ಶಾಶ್ವತ ಪರಿಹಾರ ದೊರಕಿದೆ.
ರಸ್ತೆಯ ಒಂದು ಭಾಗ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮತ್ತೊಂದು ಭಾಗ ಐಕಳ ಗ್ರಾಮ ಪಂಚಾಯತ್‌ಗೆ ಸೇರಿದೆ. ರಸ್ತೆಯ ಪಕ್ಕದ ಜಾಗವನ್ನು ರಸ್ತೆಗಿಂತ ಎತ್ತರವಾಗಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಅಲ್ಲದೆ ನೀರು ಸರಾಗವಾಗಿ ಹೋಗುತ್ತಿದ್ದ ದಾರಿಯನ್ನು ಮುಚ್ಚಿರುವುದು ಈ ದುರಂತಗಳಿಗೆ ಪರೋಕ್ಷ ಕಾರಣವಾಗಿದ್ದು ಈದೀಗ ನಾಲ್ಕೂವರೆ ಅಡಿ (4.5 ಅಡಿ) ಎತ್ತರ ಮೋರಿ ಹಾಗೂ ರಸ್ತೆ ನಿರ್ಮಿಸಲಾಗುತ್ತಿದೆ. ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಪ್ರೇರಣೆಯಿಂದ ರಸ್ತೆ ಶಾಶ್ವತ ಮುಕ್ತಿ ಕಂಡುಕೊಳ್ಳಲಿದೆ.
ಕ್ಷೇತ್ರ ಶಾಸಕರ 3.25 ಕೋಟಿ ಅನುದಾನದಿಂದ ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿರುವ ಪೆರ್ಮುದೆಯಿಂದ ಸಂಕಲಕರಿಯ ತನಕದ ರಾಜ್ಯ ಹೆದ್ದಾರಿ ಡಾಮರೀಕರಣದ ಯೋಜನೆಯಲ್ಲಿಯೇ ಈ ಮೋರಿಯ ಸಮಸ್ಯೆ ಕೂಡಾ ಇತ್ಯರ್ಥವಾಗುತ್ತಿರುವುದು ಸಾರ್ವಜನಿಕರಿಗೆ ಸಂತಸ ತಂದಿದೆ. ತಾಂತ್ರಿಕ ಕಾರಣಾಂತರಗಳಿಂದ ಕೆಲವು ಕಡೆ ಕಾiಗಾರಿ ತಡೆಹಿಡಿಯಲ್ಪಟ್ಟಿದ್ದು ಮಳೆಗಾಲ ನಂತರ ಕಾಮಗಾರಿ ಪೂರ್ತಿಯಾಗುವುದು. ಮೋರಿಯ ಆಚೆ ಈಚೆ ರಸ್ತೆ ಕೂಡ ಎತ್ತರವಾಗಲಿದ್ದು ಸಲೀಸಾದ ಸಂಚಾರಕ್ಕೆ ಕಾಯಕಲ್ಪವಾಗಲಿದೆ.
ಗುತ್ತಿಗೆದಾರರಾದ ಜೆ.ಡಿ. ಸುವರ್ಣ ಗ್ರೂಪ್ ಸಂಸ್ಥೆಯವರು ಮೇ ತಿಂಗಳಲ್ಲಿ ರಸ್ತೆ ಕಾಮಾಗಾರಿ ಕೈಗೆತ್ತಿಕೊಂಡಿದ್ದು. ಶೇಕಡಾ 90 ರಷ್ಷು ಕಾಮಗಾರಿ ಮುಗಿದಿದ್ದು, ಅರ್ಧ ಮೋರಿ ಈಗಾಗಲೇ ರಚನೆಯಾಗಿದ್ದು. ಇನ್ನು ವಾಹನಗಳ ಓಡಾಟಕ್ಕೆ ಸೂಕ್ತ ಪರ್ಯಾಯ ದಾರಿ ಕಲ್ಪಿಸಿ ಶೀಘ್ರ ಕಾiಗಾರಿ ಮುಗಿಸಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

ಬೈಟ್ಸ್
ಕಾರಾಣಾಂತರಗಳಿಂದ ತಾತ್ಕಲಿಕವಾಗಿ ರಸ್ತೆ ತಡೆ ಹಿಡಿಯಲಾಗಿತ್ತು. ರಸ್ತೆಗೆ ಮೋರಿ ನಿರ್ಮಿಸಿ 4.5 ಅಡಿ ಎತ್ತರಕ್ಕೆರಿಸಿ ಡಾಮರೀಕರಣ ಮಾಡಲಾಗುವುದು. ಈ ಯೋಜನೆಗೆ ಯಾವುದೇ ಪ್ರತ್ಯೇಕ ಅನುದಾನವಿರದೆ ಪೆರ್ಮುದೆ ಸಂಕಲಕರಿಯ ರಾಜ್ಯ ಹೆದ್ದಾರಿ ಡಾಮರೀಕರಣದ ಅನುದಾನ ಯೋಜನೆಯಲ್ಲಿಯೇ ಬರುತ್ತದೆ.
ಕಾರ್ಯನಿರ್ವಾಹಕ ಇಂಜೀನಿಯರ್ ಲೋಕೋಪಯೋಗಿ ಇಲಾಖೆ
ಗೋಪಾಲ ನಾಯಕ್

kinnigoli18101301

Comments

comments

Comments are closed.

Read previous post:
Kinnigoli-17101305
ದೇವತಾ ಕಾರ್ಯಕ್ಕೆ ದೇವರ ಅನುಗ್ರಹವಿದೆ

Puneetha Krishna Mulki ನೆಲ್ಲಿತೀರ್ಥ : ಶ್ರೀ ಕ್ಷೇತ್ರ ಕಟೀಲು ಹಾಗೂ ನೆಲ್ಲಿತೀರ್ಥಕ್ಕೂ ಅವಿನಾಭಾವ ಸಂಬಂಧವಿದೆ ಜಗತ್ತಿನಲ್ಲಿ ಶ್ರೀ ಕ್ಷೇತ್ರ ನೆಲ್ಲಿತೀರ್ಥವನ್ನು ಜನರು ಗುರುತಿಸುವಂತೆ ಮಾಡಿದ ಇಲ್ಲಿನ...

Close