ಎಸ್.ಕೋಡಿ-ಪಡುಪಣಂಬೂರು ರಸ್ತೆ ದುರಸ್ತಿಯಾಗಬೇಕಾಗಿದೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಎಸ್.ಕೋಡಿ -ತೋಕೂರು ಸುಬ್ರಹ್ಮಣ್ಯ ದೇವಳ – ಪಡುಪಣಂಬೂರು ರಸ್ತೆಯು ಅಲ್ಲಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಸಂಚಾರ ವ್ಯವಸ್ಥೆಗೆ ದಕ್ಕೆಯಾಗಿದೆ. ರಸ್ತೆ ಅವ್ಯವಸ್ಥೆ ಜನರನ್ನು, ಚಾಲಕರನ್ನು ಬಾಧಿಸುತ್ತಿದೆ. ವಾಹನಗಳ ಓಡಾಟ ಹೆಚ್ಚಿದಂತೆ ಸಣ್ಣ ಪ್ರಮಾಣದ ಗುಂಡಿಗಳಲ್ಲಿನ ಜಲ್ಲಿ ಕಲ್ಲು ಹರಡಿ ರಸ್ತೆಯಲ್ಲಿ ವಿಸ್ತಾರಗೊಂಡಿದ್ದು, ದ್ವಿಚಕ್ರ ವಾಹನ ಚಾಲಕರು ಸ್ವಲ್ಪ ನಿಯಂತ್ರಣ ತಪ್ಪಿದರೂ ಬೀಳುವ ಸ್ಥಿತಿ ಇದೆ.
ಕೆಲವು ಕಡೆ ರಸ್ತೆಯಲ್ಲಿ ಪೂರ್ತಿಯಾಗಿ ಹೊಂಡ ಗುಂಡಿಗಳು ತುಂಬಿದ್ದು ಕೆಸರಿನಿಂದ ಕೂಡಿದೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವವರಿಗೆ ಕೆಸರಿನ ಓಕುಳಿ ನಿತ್ಯ ಸಂಚನವಾಗುತ್ತಿದೆ. ಈ ರಸ್ತೆಯ ಮೂಲಕ ಪ್ರತಿದಿನ ನೂರಾರು ಪ್ರಯಾಣಿಕರು, ವಾಹನಗಳು ಬಸ್ಸುಗಳು ತೆರಳುತ್ತವೆ. ಎಸ್.ಕೋಡಿ ಪಕ್ಷಿಕೆರೆ ಹಳೆಯಂಗಡಿ ರಸ್ತೆ ತಡೆಯಾದರೆ ಈ ರಸ್ತೆ ಪ್ರಮುಖ ಪರ್ಯಾಯ ಮಾರ್ಗವಾಗಿದೆ.

ಕಳೆದ ೧೦ ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲದ ರಸ್ತೆಯು ಜಿಲ್ಲಾ ಪಂಚಾಯಿತಿಗೆ ಸೇರಿದ್ದು ಕೆಲವು ವರ್ಷಗಳಿಂದ ತೇಪೆ ಮಾತ್ರ ಹಾಕುತ್ತಿದ್ದಾರೆ. ಎಸ್.ಕೋಡಿಯಿಂದ ಸುಮಾರು ಒಂದೂವರೆ ಕಿಲೋಮೀಟರ್ ವರೆಗೆ ಸುದೃಢ ರಸ್ತೆಯಿದ್ದು ಬಾಕಿ ಉಳಿದ ರಸ್ತೆ ಡಾiರೀಕರಣಗೊಳ್ಳಲು ಕಾಯುತ್ತಿದೆ. ಆಫೀಸು ಹಾಗೂ ಕೂಲಿ ಕೆಲಸಕ್ಕೆ ಹೋಗುವ ಜನರು, ಶಾಲಾ ಮಕ್ಕಳು, ವಯೋವೃದ್ಧರು, ಕೆಸರಿನ ಓಕುಳಿಯಿಂದ ತಪ್ಪಿಸಿ ನಡೆದಾಡಲು ಶ್ರಮಪಡುತ್ತಿದ್ದಾರೆ. ಸುಮಾರು ೧೫೦ ಹೌಸಿಂಗ್ ಕಾಲನಿ ಹಾಗೂ ಹುಡ್ಕೊ ಮನೆಗಳಿಗೆ ಹೋಗುವ ರಸ್ತೆ ಉತ್ತಮವಾಗಿದ್ದು ಇವುಗಳನ್ನು ಸಂಪರ್ಕಿಸುವ ಈ ರಸ್ತೆ ಹದೆಗೆಟ್ಟಿದ್ದು ಮಾತ್ರ ವಿಪರ‍್ಯಾಸ.

sಈ ರಸ್ತೆ ರಾಜ್ಯ ಹೆದ್ದಾರಿಗೆ ಸಂಪರ್ಕ ರಸ್ತೆಯಾಗಿದ್ದು, ಹತ್ತಿರದಲ್ಲಿಯೇ ತೋಕೂರು ಸುಬ್ರಮಣ್ಯ ದೇವಸ್ಥಾನ ಹಾಗೂ ವೀರಭದ್ರ ದೇವಸ್ಥಾನವಿರುವುದರಿಂದ ಭಕ್ತಾಧಿಗಳು ಹಾಗೂ ಜನರ ಓಡಾಟ ಅಧಿಕವಾಗಿದೆ. ತೋಕೂರು ಸುಬ್ರಮಣ್ಯ ದೇವಸ್ಥಾನ ಸಂಕ್ರಮಣ,ನಾಗರಪಂಚಮಿ ಷಷ್ಠಿ ಹಾಗೂ ಜಾತ್ರೆಯ ಸಮಯದಲ್ಲಿ ಜನರು ಕಿಕ್ಕಿರಿದು ಸೇರುತ್ತಾರೆ. ಹೀಗಾಗಿ ವಾಹನಗಳ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯವಾಗಿದೆ. ರಸ್ತೆ ಹದಗೆಟ್ಟ ಕಾರಣ ಬಸ್ಸು, ರಿಕ್ಷಾ ಇನ್ನಿತರ ವಾಹನಗಳು ಬರಲು ಹಿಂದೇಟು ಹಾಕುತ್ತಾರೆ.
ಈಗಲಾದರೂ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆಯ ಬಗ್ಗೆ ಗಮನಕೊಟ್ಟು ಗ್ರಾಮದ ಪ್ರಗತಿ ಹಾಗೂ ಜನರ ಅಪೇಕ್ಷೆಯನ್ನು ಈಡೇರಿಸಬೇಕಾಗಿದೆ.

ಬೈಟ್ಸ್:
ಕೆಲವು ವರ್ಷಗಳಿಂದ ತೇಪೆ ಮಾತ್ರ ಹಾಕುತ್ತಿದ್ದಾರೆ. ಶಾಲಾ ಮಕ್ಕಳು, ವೃದ್ಧರು, ಕೆಸರಿನ ಓಕುಳಿಯಿಂದಾಗಿ ನಡೆದಾಡಲು ಕಷ್ಟಕರವಾಗಿದೆ. ಹೌಸಿಂಗ್ ಕಾಲನಿ ಹಾಗೂ ಹುಡ್ಕೊ ಮನೆಗಳು ಇರುವ ಜನ ನಿಬಿಡ ಪ್ರದೇಶವಾಗಿದ್ದು ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ತ್ವರಿತ ಸ್ಪಂದನೆ ನೀಡಬೇಕಾಗಿದೆ.
-ನಾರಾಯಣ ಕಾಮತ್
ಪೇಪರ್ ವಿತರಕ ಮತ್ತು ಹಾಲು ಮಾರಾಟಗಾರ

ಈ ರಸ್ತೆ sರಾಜ್ಯ ಹೆದ್ದಾರಿಗೆ ಸಂಪರ್ಕ ರಸ್ತೆಯಾಗಿದ್ದು, ಹತ್ತಿರದಲ್ಲಿಯೇ ತೋಕೂರು ಸುಬ್ರಮಣ್ಯ ದೇವಸ್ಥಾನ ಹಾಗೂ ವೀರಭದ್ರ ದೇವಸ್ಥಾನವಿರುವುದರಿಂದ ಭಕ್ತಾಧಿಗಳು ಹಾಗೂ ಜನರ ಓಡಾಟ ಅಧಿಕವಾಗಿದೆ. ರಸ್ತೆ ಹದಗೆಟ್ಟ ಕಾರಣ ಬಸ್ಸು, ರಿಕ್ಷಾ ಇನ್ನಿತರ ವಾಹನಗಳು ಬರಲು ಹಿಂದೇಟು ಹಾಕುತ್ತಾರೆ.
ಸ್ಥಳೀಯ ಗ್ರಾಮಸ್ಥರು.

Kinnigoli18102013

Comments

comments

Comments are closed.

Read previous post:
kinnigoli18101301
ದಾಮಸ್‌ಕಟ್ಟೆ ಕಿರೆಂ ಚರ್ಚ್ ಬಳಿ ಮೋರಿ ರಚನೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಕಿರೆಂ ಚರ್ಚ್ ಬಳಿಯ ರಸ್ತೆಯಲ್ಲಿ ಒಂದರಿಂದ ಎರಡು ಅಡಿ ನೀರು ನಿಲ್ಲುತ್ತಿದ್ದು ಕಳೆದ ವರ್ಷ ಸ್ಥಳೀಯ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳು ಒಂದಿಷ್ಟು ಶ್ರಮದಾನ...

Close