ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಸಮಾರಂಭ

ಕಟೀಲು : ಸಾಮಾನ್ಯ ಜನರನ್ನು ಬಹುಬೇಗ ತಲುಪುವ ಮಾಧ್ಯಮ ಯಕ್ಷಗಾನ. ಸ್ವಚ್ಚಕನ್ನಡದ ಮಾತುಗಾರಿಕೆ ಮತ್ತು ನಾಟ್ಯವನ್ನು    ಒಳಗೊಂಡ ಯಕ್ಷಗಾನ ಕಲೆಯನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಕಮಲಪ್ರಸಾದ ಆಸ್ರಣ್ಣ ಹೇಳಿದರು.
ಕಟೀಲು ಸರಸ್ವತಿ ಸದನದಲ್ಲಿ ಶುಕ್ರವಾರ ನಡೆದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಮೂರುದಿನಗಳ ಕಾಲದ ವಾರ್ಷಿಕ ಕಲಾ ಪರ್ವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಬಜಪೆ ನವದುರ್ಗಾ ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಶ್ರೀ ಡೆವಲಪರ‍್ಸ್ ಮಾಲಕ ಗಿರೀಶ್ ಶೆಟ್ಟಿ, ಶ್ರೀ ದುರ್ಗಾ ಮಕ್ಕಳ ಮೇಳದ ಟ್ರಸ್ಟಿ ಬಜಪೆ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು
ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಮಾಡ ವಂದಿಸಿದರು.

Kinnigoli-19101301

Comments

comments

Comments are closed.

Read previous post:
Kinnigoli18102013
ಎಸ್.ಕೋಡಿ-ಪಡುಪಣಂಬೂರು ರಸ್ತೆ ದುರಸ್ತಿಯಾಗಬೇಕಾಗಿದೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಎಸ್.ಕೋಡಿ -ತೋಕೂರು ಸುಬ್ರಹ್ಮಣ್ಯ ದೇವಳ - ಪಡುಪಣಂಬೂರು ರಸ್ತೆಯು ಅಲ್ಲಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಸಂಚಾರ ವ್ಯವಸ್ಥೆಗೆ ದಕ್ಕೆಯಾಗಿದೆ. ರಸ್ತೆ ಅವ್ಯವಸ್ಥೆ ಜನರನ್ನು,...

Close