ತೋಕೂರು ತಂಗುದಾಣ ಅವ್ಯವಸ್ಥೆ

ಕಿನ್ನಿಗೋಳಿ: ಸರಕಾರ ಸಾರ್ವಜನಿಕರಿಗೆ ಅನುಕೂಲ ಹಾಗೂ ಸಮಾಜದ ಪ್ರಗತಿಗಾಗಿ ಪ್ರತಿವರ್ಷ ಹಲವಾರು ಇಲಾಖೆಗಳಲ್ಲಿ ನೂರಾರು ಯೋಜನೆಗಳ ಮೂಲಕ ಹಣ ವ್ಯಯ ಮಾಡುತ್ತಿದೆ. ಹೀಗೆ ಮಹತ್ತರವಾದ ಆಕಾಂಕ್ಷೆಯಿಂದ ಮಾಡುವ ಖರ್ಚಿನಿಂದ ಜನರ ಆಶೋತ್ತರಗಳು ಈಡೇರಬೇಕು ಇಲ್ಲವಾದಲ್ಲಿ ಸರಕಾರದ ಹಣ ನೀರಿನಲ್ಲಿ ಇಟ್ಟ ಹೋಮವಾದಂತಾಗುತ್ತದೆ. ಹೀಗೊಂದು ಉದಾಹರಣೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಬಳಿಯ ಹಿಂದುಸ್ಥಾನಿ ಶಾಲೆಯ ಹತ್ತಿರದ ಪ್ರಯಾಣಿಕರ ತಂಗುದಾಣ.
ಗ್ರಾಮೀಣ ಪ್ರದೇಶ ತಾಂತ್ರಿಕ ವರ್ಗಾವಣೆ ಕೇಂದ್ರ ಕೊಡುಗೆಯಾಗಿ ನೀಡಿದ ಈ ಪ್ರಯಾಣಿಕರ ತಂಗುದಾಣದ ಸುತ್ತಮುತ್ತ ಮುಳ್ಳು ಕಂಟಿ ಗಿಡಗಳು ಬೆಳೆದು ಒಳಗಡೆ ಯಾರೂ ಪ್ರವೇಶ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹತ್ತ್ತಿರದಲ್ಲಿಯೇ ತೋಕೂರು ಶಾಲೆ, ಶ್ರೀ ಸುಬ್ರಹ್ಮಣ್ಯ ದೇವಳ, ಜಾಮಿಯ ಮಸೀದಿ ಹಾಗೂ ಕೋಡ್ದಬ್ಬು ದೈವಸ್ಥಾನವಿದ್ದು ಜಾತ್ರೆ ಹಬ್ಬಹರಿದಿನಗಳು ಸಮೀಪಿಸುತ್ತಿರುವುದರಿಂದ ಯಾತ್ರಿಕರ ಭಕ್ತರ ಜನಸಂಖ್ಯೆ ಪ್ರಮಾಣ ಹೆಚ್ಚಾಗುವುದರಿಂದ ಜನತೆ ಪ್ರಯಾಣಿಕರ ತಂಗುದಾಣದ ಹೊರಗೆ ಬೇಸಿಗೆಯಲ್ಲಿ ಉರಿ ಬಿಸಿಲಲ್ಲೇ ಬಸ್-ರಿಕ್ಷಾ ಕಾರು ಇನ್ನಿತರ ವಾಹನಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದೊಗುತ್ತದೆ.
ತಂಗುದಾಣದ ಸುತ್ತಮುತ್ತಲಿನ ಮುಳ್ಳುಕಂಟಿ ತೆರವುಗೊಳಿಸಲು ಸಂಬಂಧ ಪಟ್ಟವರು ಮುಂದಾಗದೆ ಸಮಸ್ಯೆಯಾಗಿಯೇ ಉಳಿದಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಅಥವಾ ಸಂಘ ಸಂಸ್ಥೆಗಳು ಮುತುವರ್ಜಿ ತೋರಿಸಿ ಅಲ್ಲದೆ ಶ್ರಮದಾನದ ಮೂಲಕ ತಂಗುದಾಣದ ಸುತ್ತಲಿನ ಮುಳ್ಳುಕಂಟಿ ತೆರವುಗೊಳಿಸಿ, ವ್ಯವಸ್ಥಿತ ತಂಗುದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Kinnigoli-19101305

Comments

comments

Comments are closed.

Read previous post:
Kinnigoli-19101304
ಬೈಕ್ ಮತ್ತು ಪಿಕ್ ಅಪ್ ಡಿಕ್ಕಿ

ಕಿನ್ನಿಗೋಳಿ: ಬೈಕ್ ಮತ್ತು ಪಿಕ್ ಅಪ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆಯಿತು. ಕಿನ್ನಿಗೋಳಿಯಿಂದ ಎಸ್.ಕೋಡಿ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಎಸ್.ಕೋಡಿ...

Close