ಅ. 22 ನಿಡ್ಡೋಡಿ ವಿದ್ಯುತ್ ಸ್ಥಾವರ ವಿರುದ್ಧ ವಾಹನ ಜಾಥಾ

ಕಿನ್ನಿಗೋಳಿ : 4000 ಮೆಗಾವ್ಯಾಟ್ ಸಾಮಾರ್ಥ್ಯದ ಆಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಸ್ಥಾಪನೆ ಬಗ್ಗೆ ನಿಖರ ಮಾಹಿತಿ ನೀಡುವ ಬಗ್ಗೆ ಎಷ್ಟೇ ಮನವಿಗಳು ನೀಡಿದರೂ ಸರ್ಕಾರದಿಂದ ಸ್ಪಷ್ಟವಾದ ನಿರ್ಧಾರ ಪ್ರಕಟಿಸದೆ ಇರುವುದರಿಂದ ಪ್ರಸ್ತಾವಿತ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ನಿಡ್ಡೋಡಿ ಮಾತೃಭೂಮಿ ಸಂರಕ್ಷಣ ಸಮಿತಿಯ ನೇತೃತ್ವದಲ್ಲಿ ಅಕ್ಟೋಬರ್ 22 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕಿನ್ನಿಗೋಳಿಯಿಂದ ಮೂಡಬಿದ್ರಿಗೆ ಬೃಹತ್ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನಿಡ್ಡೋಡಿ ಮಾತೃಭೂಮಿ ಸಂರಕ್ಷಣ ಸಮಿತಿ ಅಧ್ಯಕ್ಷ ಆಲ್ಪೋನ್ಸ್ ಡಿ’ಸೋಜಾ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶನಿವಾರ ಬೃಹತ್ ವಾಹನ ಜಾಥಾ ನಡೆಸುವ ಬಗ್ಗೆ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಸದ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ನಿಡ್ಡೋಡಿ ಮಾತೃಭೂಮಿ ಸಂರಕ್ಷಣ ಸಮಿತಿ ನಿಯೋಗವು ಕೇಂದ್ರ ಸರ್ಕಾರದ ಇಂಧನ ಸಚಿವರಿಗೆ ಮನವಿ ನೀಡಿದ್ದು ಹಾಗೂ ಯೋಜನೆಯನ್ನು ಕೈಬಿಡುವಂತೆ ಪ್ರತಿಭಟನೆಗಳು, ಹಕ್ಕೋತ್ತಾಯಗಳು, ಸಭೆಗಳ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದ್ದರೂ ಫಲಕಾರಿ ಆಗಿಲ್ಲ ಆದುದರಿಂದ ಜಾಥಾದ ಮೂಲಕ ನಮ್ಮ ಹೋರಾಟವನ್ನು ತೀವ್ರಗೊಳಿಸಲಿದ್ದೇವೆ ಎಂದರು.
ಕಿನ್ನಿಗೋಳಿಯ ವಸಂತ ಮಂಟಪದಿಂದ ಬೆಳಿಗ್ಗೆ ೧೦ಗಂಟೆಗೆ ಪ್ರಾರಂಭವಾಗುವ ಈ ಜಾಥಾದಲ್ಲಿ ೩೦೦ಕ್ಕೂ ಹೆಚ್ಚು ವಿವಿಧ ವಾಹನಗಳ ಮೂಲಕ ತೆರಳಿ ಮೂಡಬಿದಿರೆಯ ಸ್ವರಾಜ್ ಮೈದಾನದಿಂದ ಮೂಡಬಿದಿರೆ ಪೇಟೆಯನ್ನು ಕಾಲ್ನಡಿಗೆಯ ಮೂಲಕ ಸಂಚರಿಸಿ ನಾಡಕಚೇರಿಯಲ್ಲಿ ಮುಖ್ಯಮಂತ್ರಿಗೆ ತಹಶೀಲ್ದಾರರ ಮೂಲಕ ಮನವಿಯನ್ನು ನೀಡಲಾಗುವುದು ಎಂದು ಜಾಥಾದ ಬಗ್ಗೆ ವಿವರನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಕೊಡೆತ್ತೂರು ಭುವನಾಭಿರಾಮ ಉಡುಪ ಕಿನ್ನಿಗೋಳಿ ಸಮಿತಿಯ ಜೊಸ್ಸಿಪಿಂಟೋ, ಕಿನ್ನಿಗೋಳಿ ವಲಯ ಮಟ್ಟದ ಕೆಥೋಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿಸೋಜಾ, ನಿಡ್ಡೋಡಿ ಕೆಥೋಲಿಕ್ ಸಭಾ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಕಿನ್ನಿಗೋಳಿ ಕೆಥೋಲಿಕ್ ಸಭಾ ಅಧ್ಯಕ್ಷ ಸದಸ್ಯ ಆಂಡ್ರ್ಯೂ ಪಿಂಟೋ ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ ಐಕಳ ಉಪಸ್ಥಿತರಿದ್ದರು.


ಮುಖ್ಯಮಂತ್ರಿಯವರನ್ನು ಆರು ತಿಂಗಳಿನಿಂದಲೂ ಭೇಟಿ ಮಾಡಲು ಸಾಧ್ಯವಾಗಿಲ್ಲ, ಜನತಾ ದರ್ಶನದಲ್ಲಾದರು ಅವಕಾಶ ಸಿಕ್ಕಲ್ಲಿ ಭೇಟಿ ಮಾಡುವ ಇರಾದೆ ಹೊಂದಿದ್ದೇವೆ. ಜಾಥಾ ಹಾಗೂ ಮನವಿಗೆ ಸ್ಪಂದಿಸಬಹುದೆಂಬ ಆಶಾ ಭಾವನೆಯಿದೆ. ಇಲ್ಲದಿದ್ದಲ್ಲಿ ಬೆಂಗಳೂರು ವಿಧಾನಸೌಧದ ಎದುರು ಸತ್ಯಾಗ್ರಹ ನಡೆಸುವ ತೀರ್ಮಾನ ಕೈಗೊಳ್ಳಬೇಕಾಗಿದೆ. ಸರ್ಕಾರ ಯೋಜನೆ ಕೈಬಿಡುವವರೆಗೂ ಹೋರಾಟ ನಮ್ಮದು

ನಿಡ್ಡೋಡಿ ಮಾತೃಭೂಮಿ ಸಂರಕ್ಷಣ ಸಮಿತಿ  ಅಧ್ಯಕ್ಷ ಆಲ್ಫೊನ್ಸ್ ಡಿಸೋಜ 

Kinnigoli-20101302

Comments

comments

Comments are closed.

Read previous post:
Kinnigoli-20101301
ಅತ್ತೂರು-ಕಾಪಿಕಾಡು ರಸ್ತೆ ದುರಸ್ತಿ

ಕಿನ್ನಿಗೋಳಿ :  ಅತ್ತೂರು-ಕಾಪಿಕಾಡು ಫ್ರೆಂಡ್ಸ್ ಕ್ಲಬ್ ಸದಸ್ಯರು ಕಾಪಿಕಾಡುವಿನಿಂದ ಕೋರ‍್ದಬ್ಬು ದೈವಸ್ಥಾನದ ತನಕ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಿದರು.

Close