ಚತುಷ್ಪಥ ಕಾಮಗಾರಿಯಿಂದ ನಾಗರಿಕರು ಅತಂತ್ರ; ಬೃಹತ್ ಪ್ರತಿಭಟನೆ

Narendra Kerekadu
ಸುರತ್ಕಲ್: ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಒಕ್ಕೆಲೆಬ್ಬಿಸಿ ಭೂ ಸ್ವಾಧೀನ ನಡೆಸಿ ಅವರನ್ನು ಅತಂತ್ರರನ್ನಾಗಿ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಸುರತ್ಕಲ್ ಬಳಿಯ ಮುಕ್ಕದ ನಿವಾಸಿಗಳು ಗುರುವಾರ ಹೆದ್ದಾರಿ ತಡೆ ನಡೆಸಿ ಭಾರೀ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಚತುಷ್ಪಥ ಹೆದ್ದಾರಿ ಭೂಸ್ವಾಧೀನ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಮಹಾಬಲ ರೈ ಮಾತನಾಡಿ ಪ್ರಸ್ತಾವಿತ ಸುರತ್ಕಲ್-ಕುಂದಾಪುರ ಚತುಷ್ಪಥ ಕಾಮಗಾರಿಗೆ ಬೇಕಾಗುಷ್ಟು 43ರಿಂದ 49 ಮೀ ಅಗಲದ ಹೆದ್ದಾರಿ ರಸ್ತೆಯಿದ್ದರು ಇಲ್ಲಿನ 38 ಮನೆಗಳನ್ನು ನೆಲಸಮ ಮಾಡಿ ಹೆಚ್ಚುವರಿಯಾಗಿ 60 ಮೀ. ರಸ್ತೆಯನ್ನು ನಿರ್ಮಿಸುತ್ತಿರುವ ಉದ್ದೇಶವನ್ನು ಹೆದ್ದಾರಿ ಅಧಿಕಾರಿಗಳು ಮೊದಲು ತಿಳಿಸಬೇಕು, ಜನರ ಪ್ರಶ್ನೆಗೆ ಉತ್ತರಿಸದೆ ಇಲ್ಲಿನ ಪವಿತ್ರ ಸತ್ಯಧರ್ಮ ದೇವಿ ದೇವಸ್ಥಾನ, ವ್ಯಾಪಾರಸ್ಥರ ಅಂಗಡಿಗಳು, ಮನೆಗಳನ್ನು ಕೆಡವಲು ಪ್ರಯತ್ನ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಹೆದ್ದಾರಿ ಅಗಲೀಕರಣದ ನೆಪದಲ್ಲಿ ಮಧ್ಯೆರೇಖೆಯನ್ನು ಪೂರ್ವಕ್ಕೆ ಸ್ಥಳಾಂತರಿಸುವುದಕ್ಕೆ ಯಾರ ಒತ್ತಡವಿದೆ ಎಂಬುದನ್ನು ಬಹಿರಂಗ ಪಡಿಸಲಿ ಈ ಬಗ್ಗೆ ಸಚಿವರರಿಗೆ, ಶಾಸಕರಿಗೆ ನೀಡಿದ ಮನವಿ ನೀರಿಗಿಟ್ಟ ಹೋಮವಾಗಿದೆ. ಹೆದ್ದಾರಿ ಇಲಾಖೆಯ ಉದ್ದಟತನದಿಂದ ಎನ್‌ಐಟಿಕೆ ಬಳಿ ಟೋಲ್ ಗೇಟನ್ನು ಹಾಕುವ ವ್ಯವಸ್ಥಿತ ತಂತ್ರಗಾರಿಕೆಗೆ ಮುಕ್ಕದ ಜನತೆಯನ್ನು ಬಲಿ ಕೊಡುತ್ತಿರುವ ಅಧಿಕಾರಿಗಳ ಉದ್ಧಟತನಕ್ಕೆ ಇದು ಸಾಂಕೇತಿಕ ಪ್ರತಿಭಟನೆ ಆಗಿದೆ ಈ ಕ್ರಮ ಮುಂದುವರಿದಲ್ಲಿ ಇನ್ನೂ ತೀವ್ರ ಹೋರಾಟ ನಡೆಸುವುದು ಅನಿವಾರ್ಯ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಐದು ನಿಮಿಷ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು. ಹಾಗೂ ಹಳೆಯಂಗಡಿ ಪಾವಂಜೆಯಿಂದ ಎನ್‌ಐಟಿಕೆಯವರೆಗೆ ಪಾದಯಾತ್ರೆಯನ್ನು ನಡೆಸಿದರು. ಮನವಿಯನ್ನು ಜಿಲ್ಲಾಧಿಕಾರಿಗೆ ನೀಡುವ ಬಗ್ಗೆ ಘೋಷಿಸಲಾಯಿತು. ಸುರತ್ಕಲ್ ಪೊಲೀಸರು ಬಿಗಿ ಬಂದೋಬಸ್ತನ್ನು ನೀಡಿದ್ದರು.
ಸದಾನಂದ ಹೊಳ್ಳ, ಸದಾಶಿವ ಜಿ.ಅಮಿನ್, ಅಬೂಬಕ್ಕರ್, ಉಸ್ಮಾನ್, ನಜೀರ್, ಯಶೋಧರ್ ಬಂಗೇರ, ಎಂ.ಜಿ.ರಾಮಚಂದ್ರರಾವ್, ಬೀರಣ್ಣ ಶೆಟ್ಟಿ, ಮೋನಪ್ಪ ಕುಂದರ್, ಹರೀಶ್ ಐತಾಳ್, ದೇವೆಂದ್ರ ಪೂಜಾರಿ ಭಂಡಾರಮನೆ, ಸೈಲೇಶ್, ಗೋವಿಂದ ಪೂಜಾರಿ, ಗಿರೀಶ್ ಸುವರ್ಣ, ಹೂವಯ್ಯ ಶೆಟ್ಟಿ, ಯೋಗೀಶ್, ಶ್ರೀನಿವಾಸ ರಾವ್ ಕಪಿಲ್, ಜಗದೀಶ ಶೆಟ್ಟಿ, ರವೀಂದ್ರ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.

Kinnigoli-22101302

Kinnigoli-22101303

Comments

comments

Comments are closed.

Read previous post:
Kinnigoli-22101301
Many Happy Returns of The Day

Dearest Aida Margaret, A world of wishes, Meant especially for you, May all the nicest things be yours Today and...

Close