ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ಗೆ ಜಿಲ್ಲಾ ಚೆಯರ್‌ಮನ್ ಭೇಟಿ

 ಕಿನ್ನಿಗೋಳಿ : ಸಮಾಜದ ದುರ್ಬಲ ವರ್ಗ ಹಾಗೂ ಮಹಿಳೆಯರ ಕಷ್ಟಕಾರ್ಪಣ್ಯಗಳನ್ನು ಅರಿತು, ಅಭಿವೃದ್ಧಿ ಪರ ಕೆಲಸಗಳಿಗೆ ಸೇವಾ ಸಂಸ್ಥೆಗಳು ಸಹಾಯ ಹಸ್ತ ನೀಡಬೇಕು ಎಂದು ಇನ್ನರ್ ವೀಲ್ ಜಿಲ್ಲೆ ೩೧೮ ರ ಜಿಲ್ಲಾ ಚೆಯರ್‌ಮನ್ ಶಮೀಮ್ ಕುನಿಲ್ ಹೇಳಿದರು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್‌ಗೆ ಜಿಲ್ಲಾ ಚೆಯರ್‌ಮನ್ ಅಧಿಕೃತ ಭೇಟಿ ನೀಡಿದ ಸಂದರ್ಭ ಮಂಗಳವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ವತಿಯಿಂದ ರೋಹಿತ್ ಮಧ್ಯ ಅವರಿಗೆ ಉಚಿತ ಗಾಲಿ ಕುರ್ಚಿಯನ್ನು ನೀಡಲಾಯಿತು. ಭಾರತ ಮಾತಾ ಶಾಲೆಗೆ ಕ್ರೀಡಾ ಸಲಕರಣೆಗಳು, ಬೊಳ್ಳೂರು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಐಡಿ ಕಾರ್ಡುಗಳು ಮತ್ತು ಕೆರೆಕಾಡು ಪ್ರಾಥಮಿಕ ಶಾಲೆಗೆ ಬೆಲ್ಟ್ ಗಳನ್ನು ನೀಡಲಾಯಿತು. ಪವರ್ ಲಿಪ್ಟಿಂಗ್ ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆಗೈದ ಅಕ್ಷತಾ ಪೂಜಾರಿ ಹಾಗೂ ಹೆರಿಗೆ ತಜ್ಞೆ ಶುಶ್ರೂಷಕಿ ಮೇರಿ ನಜರೆತ್ ಅವರನ್ನು ಸನ್ಮಾನಿಸಲಾಯಿತು. ರೇಖಾ ಶೆಟ್ಟಿ ಹಾಗೂ ಅಂಬಿಕಾ ಶೆಟ್ಟಿ ಅವರನ್ನು ನೂತನ ಸದಸ್ಯೆಯರಾಗಿ ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು.

ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರುಸಾರಿಯೋ ಇನ್ನರ್ ವೀಲ್ ಮುಖವಾಣಿ “ಕಾರಂಜಿ” ಬಿಡುಗಡೆಗೊಳಿಸಿದರು.
ಇನ್ನರ್ ವೀಲ್ ಜಿಲ್ಲಾ ಕಾರ್ಯದರ್ಶಿ ಚಿತ್ರಾ ರಾವ್, ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಮಮತಾ ಶರತ್ ಶೆಟ್ಟಿ ಉಪಸ್ಥಿತರಿದ್ದರು,
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ಸ್ವಾಗತಿಸಿದರು. ಕಾರ್ಯದರ್ಶಿ ರಂಜಿತಾ ಶೆಟ್ಟಿ ವರದಿ ನೀಡಿದರು. ಸವಿತಾ ಶೆಟ್ಟಿ ವಂದಿಸಿ, ಶಾಲೆಟ್ ಪಿಂಟೊ ಹಾಗೂ ಪ್ರೀತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23101316

Kinnigoli-23101317

Kinnigoli-23101318

Kinnigoli-23101319

Comments

comments

Comments are closed.

Read previous post:
Kinnigoli-23101311
ಕಿನ್ನಿಗೋಳಿ- ಮೂಡಬಿದಿರೆ ಬೃಹತ್ ವಾಹನ ಜಾಥಾ

 ಕಿನ್ನಿಗೋಳಿ : ಜನರ ಹೋರಾಟವನ್ನು ಎಂದಿಗೂ ಸರ್ಕಾರ ಎಂದೂ ಲಘುವಾಗಿ ಪರಿಗಣಿಸಬಾರದು ಹೋರಾಟಕ್ಕೆ ಸ್ಪಂದಿಸುವ ಮನೋಭಾವನೆ ಸರ್ಕಾರಕ್ಕಿರಬೇಕು. ಜಿಲ್ಲೆಯಲ್ಲಿ ತಳವೂರುತ್ತಿರುವ ವಿಷಯುಕ್ತ ಕೈಗಾರಿಕೆಗಳು ಕರಾವಳಿಯಲ್ಲಿ ನಾಶ ಮಾಡುವಂತಹ ಅಪಾಯಕ್ಕೆ...

Close