ಕಿನ್ನಿಗೋಳಿ- ಮೂಡಬಿದಿರೆ ಬೃಹತ್ ವಾಹನ ಜಾಥಾ

 ಕಿನ್ನಿಗೋಳಿ : ಜನರ ಹೋರಾಟವನ್ನು ಎಂದಿಗೂ ಸರ್ಕಾರ ಎಂದೂ ಲಘುವಾಗಿ ಪರಿಗಣಿಸಬಾರದು ಹೋರಾಟಕ್ಕೆ ಸ್ಪಂದಿಸುವ ಮನೋಭಾವನೆ ಸರ್ಕಾರಕ್ಕಿರಬೇಕು. ಜಿಲ್ಲೆಯಲ್ಲಿ ತಳವೂರುತ್ತಿರುವ ವಿಷಯುಕ್ತ ಕೈಗಾರಿಕೆಗಳು ಕರಾವಳಿಯಲ್ಲಿ ನಾಶ ಮಾಡುವಂತಹ ಅಪಾಯಕ್ಕೆ ಸರ್ವ ಧರ್ಮದವರು ಒಗ್ಗೂಡಿ ಹೋರಾಡುವ ಪರಿಸ್ಥಿತಿ ಬಂದಿದೆ. ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಕೆ.ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ನಿಡ್ಡೋಡಿಯ ಮಾತೃಭೂಮಿ ಸಂರಕ್ಷಣ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಿಡ್ಡೋಡಿ ಉಷ್ಟ ವಿದ್ಯುತ್ ಯೋಜನೆಯನ್ನು ವಿರೋಧಿಸಿ ಕಿನ್ನಿಗೋಳಿಯ ವಸಂತ ಮಂಟಪದಿಂದ ಮೂಡಬಿದಿರೆಗೆ ನಡೆದ ಬೃಹತ್ ವಾಹನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ಧರ್ಮಗುರು ವಿಲಿಯಂ ಮಾರ್ಟೀಸ್ ಮಾತನಾಡಿ ನಿಡ್ಡೋಡಿ ವಿದ್ಯುತ್ ಯೋಜನೆಯ ಸಹಿತ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸುವ ಮಾರಕ ಯೋಜನೆಗಳನ್ನು ಜಾರಿಗೆ ತರುವ ಮೊದಲು ಅಲ್ಲಿನ ಕೃಷಿ ಭೂಮಿ, ಪವಿತ್ರ ದೇಗುಲಗಳು, ಪಾರಂಪರಿಕ ಪದ್ಧತಿಗಳು ನಾಶವಾಗುವುದನ್ನು ಮೊದಲು ಸರ್ಕಾರ ಅರಿಯ ಬೇಕು ಎಂದು ಹೇಳಿದರು.
300ಕ್ಕೂ ಹೆಚ್ಚು ವಿವಿಧ ವಾಹನಗಳ ಮೂಲಕ ತೆರಳಿ ಮೂಡಬಿದಿರೆಯ ಸ್ವರಾಜ್ ಮೈದಾನದಿಂದ ಮೂಡಬಿದಿರೆ ಪೇಟೆಯನ್ನು ಕಾಲ್ನಡಿಗೆಯ ಮೂಲಕ ಸಂಚರಿಸಿ ನಾಡಕಚೇರಿಯಲ್ಲಿ ಮುಖ್ಯಮಂತ್ರಿಗೆ ತಲುಪಿಸುವ ಮನವಿಯನ್ನು ಸಲ್ಲಿಸಲಾಗುವುದು ಎಂದು ಜಾಥಾದ ಬಗ್ಗೆ ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಆಲ್ಪೋನ್ಸ್ ಡಿ’ಸೋಜಾ ಮಾಹಿತಿ ಹೇಳಿದರು.

ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ| ಆಲ್ಫ್ರೆಡ್ ಜೆ.ಪಿಂಟೊ, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ರೋಟರಿ ಕ್ಲಬ್‌ನ ಅಧ್ಯಕ್ಷ ರಾಬರ್ಟ್ ರೋಜಾರಿಯೋ, ಲಯನ್ಸ್ ಕ್ಲಬ್‌ನ ಪ್ರಾನ್ಸಿಸ್ ಸೆರಾವೋ, ಕಿನ್ನಿಗೋಳಿ ಸಮಿತಿಯ ಜೊಸ್ಸಿಪಿಂಟೋ, ನಿಡ್ಡೋಡಿ ಕೆಥೋಲಿಕ್ ಸಭಾದ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ ಐಕಳ, ಕಿನ್ನಿಗೋಳಿ ಕೆಥೋಲಿಕ್ ಸಭಾದ ವಲಯ ಅಧ್ಯಕ್ಷ ವಿಲ್ಸನ್ ಡಿಸೋಜಾ, ಕಿನ್ನಿಗೋಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು, ಐಸಿವೈಎಮ್ ಜಿಲ್ಲಾಧ್ಯಕ್ಷ ಶೆಲ್ಡನ್ ಕ್ರಾಸ್ತ, ಮಾತೃಭೂಮಿ ಸಂರಕ್ಷಣಾ ಸಮಿತಿ ಸಂಚಾಲಕ ಕಿರಣ್ ಮಂಜನಬೈಲ್, ಸಮಿತಿಯ ಭಾಸ್ಕರ ದೇವಸ್ಯ ವಿನೋಧರ ಮತ್ತಿತರರು ಉಪಸ್ಥಿತರಿದ್ದರು.

Kinnigoli-23101310

Kinnigoli-23101311

Kinnigoli-23101312

Comments

comments

Comments are closed.

Read previous post:
Kinnigoli23101304
ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಬಡವನಾಗಲಿ, ಬಲ್ಲಿದನಾಗಲಿ ಅಡಂಬರದ ಮದುವೆಗೆ ತಿಲಾಂಜಲಿ ಹಾಡಿ, ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಅವಶ್ಯಕತೆಯಿದೆ. ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದೆರೆ ಕಷ್ಟದ ಕೆಲಸ. ಸರಳ ಸಾಮೂಹಿಕ...

Close