ಕಿನ್ನಿಗೋಳಿಯಲ್ಲಿ ಪತಂಜಲಿ ಯೋಗ ಶಿಬಿರ

ಕಿನ್ನಿಗೋಳಿ:  ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ ಹೇಳಿದರು.

ಸೋಮವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಪತಂಜಲಿ ಯೋಗ ಸಮಿತಿ ಮೂಲ್ಕಿ ಆಯೋಜಿಸಿದ ಉಚಿತ ಪ್ರಾಣಾಯಾಮ ಯೋಗ ಶಿಬಿರ ದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಯುಗಪುರುಷದ ಪಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಕೆ. ಜಿ. ಮಲ್ಯ, ಕಟೀಲು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಯರಾಮ ಪೂಂಜಾ, ಯೋಗ ಶಿಕ್ಷಕರಾದ ಎನ್. ಪಿ. ಶೆಟ್ಟಿ, ಜಯ ಎಮ್. ಶೆಟ್ಟಿ ಕೆಂಚನಕೆರೆ, ತೋಕೂರು ಐ.ಟಿ.ಐ. ಪ್ರಾಂಶುಪಾಲ ವೈ. ಎನ್. ಸಾಲ್ಯಾನ್, ಉದ್ಯಮಿಗಳಾದ ರಾಮಚಂದ್ರ ಆಚಾರ್ಯ, ಶ್ರೀಕಾಂತ್ ಶೆಟ್ಟಿ , ರಾಜೇಂದ್ರ ಸ್ಟೀವನ್ ಸಿಕ್ವೇರಾ, ಪ್ರಕಾಶ್ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು. ಉಪನಾಸ್ಯಕಿ ಸುಧಾರಾಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 90 ಮಂದಿ ಶಿಬಿರಾರ್ಥಿಗಳಾಗಿ ಭಾಗವಹಿಸಿದರು.

Kinnigoli-23101315

 

Comments

comments

Comments are closed.

Read previous post:
Kinnigoli-22101303
ಚತುಷ್ಪಥ ಕಾಮಗಾರಿಯಿಂದ ನಾಗರಿಕರು ಅತಂತ್ರ; ಬೃಹತ್ ಪ್ರತಿಭಟನೆ

Narendra Kerekadu ಸುರತ್ಕಲ್: ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಒಕ್ಕೆಲೆಬ್ಬಿಸಿ ಭೂ ಸ್ವಾಧೀನ ನಡೆಸಿ ಅವರನ್ನು ಅತಂತ್ರರನ್ನಾಗಿ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಸುರತ್ಕಲ್ ಬಳಿಯ ಮುಕ್ಕದ ನಿವಾಸಿಗಳು...

Close