ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಬಡವನಾಗಲಿ, ಬಲ್ಲಿದನಾಗಲಿ ಅಡಂಬರದ ಮದುವೆಗೆ ತಿಲಾಂಜಲಿ ಹಾಡಿ, ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಅವಶ್ಯಕತೆಯಿದೆ. ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದೆರೆ ಕಷ್ಟದ ಕೆಲಸ. ಸರಳ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳುವುದು ಒಳ್ಳೆಯ ಕೆಲಸ. ಸಾಮೂಹಿಕ ಮದುವೆಗಳು ಹಣ ಉಳಿತಾಯದ ಜೊತೆಗೆ ಸಮಾಜದಲ್ಲಿ ಸಾಮಾರಸ್ಯ ಮೂಡಿಸುತ್ತವೆ. ಎಂದು ಮೂಡಬಿದ್ರಿ ಅಲಂಗಾರುಲೇಡಿ ಆಫ್ ದಿ ರೋಸರಿ ಚರ್ಚ್‌ನ ಪ್ರದಾನ ಧರ್ಮಗುರು ರೆ| ಫಾ| ಬಾಸಿಲ್ ವಾಸ್ ಹೇಳಿದರು.
ಕಿನ್ನಿಗೋಳಿ ಬಳಿಯ ಪಕ್ಷಿಕೆರೆಯ ಸಂತ ಜೂದರ ಚರ್ಚ್‌ನಲ್ಲಿ ಮಂಗಳವಾರ ಚರ್ಚ್‌ನ ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿ ಮಾತನಾಡಿದರು.
ಮೂರು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಗೃಹಸ್ಥಾಶ್ರಮ ಸೇರಿದರು.
ದೇವರ ಸಾನ್ನಿಧ್ಯದಲ್ಲಿ ಗುರುಹಿರಿಯರ ಆಶೀರ್ವಾದ ಪಡೆದ ನವದಾಂಪತ್ಯ ಜೀವನ ಸುಖಕರವಾಗಲಿ. ಸಂಸಾರದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಜೀವನದಲ್ಲಿ ದುಡುಕು, ಕೋಪ ದೂರೀಕರಿಸಿ ಪರಸ್ಪರರು ಅನ್ಯೋನ್ಯತೆಯಿಂದ ಬದುಕು ಸುಂದರ ಮಾಡಿಕೊಳ್ಳಿ ಎಂದು ಪಕ್ಷಿಕೆರೆ ಸಂತ ಜೂದರ ಚರ್ಚ್ ಪ್ರಧಾನ ಧರ್ಮಗುರು ಫಾ| ಆಂಡ್ರ್ಯು ಲಿಯೋ ಡಿಸೋಜ ಶುಭ ಹಾರೈಸಿದರು.
ವಿನ್ಸೆಂಟ್ ಡಿಸೋಜ ಪಕ್ಷಿಕೆರೆ ಶುಭಾಶಂಸನೆಗೈದರು.
ಪಕ್ಷಿಕೆರೆ ಚರ್ಚ್ ಸಹಾಯಕ ಧರ್ಮ ಗುರು ಫಾ| ಜೇಸುದಾಸ್ ಡಿಕೋಸ್ಟ, ಚರ್ಚ್ ಉಪಾಧ್ಯಕ್ಷ ಡೊಲ್ಪಿ ಮಿರಾಂದ, ಕಾರ್ಯದರ್ಶಿ ಲೂಸಿ ಡಿಸೋಜ ಲೂವಿಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ರಾಬಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ರವಿ-ವಿನುತಾ ನಿಡ್ಡೋಡಿ, ಜಾನ್ ಪೀಟರ್-ವೀಣಾ ಪಕ್ಷಿಕೆರೆ, ಆಲ್ವಿನ್-ರೆಜಿನಾ ದಾಮಸ್ಕಟ್ಟೆ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Kinnigoli23101301

Kinnigoli23101302

Kinnigoli23101303

Kinnigoli23101304

Comments

comments

Comments are closed.

Read previous post:
Kinnigoli-23101315
ಕಿನ್ನಿಗೋಳಿಯಲ್ಲಿ ಪತಂಜಲಿ ಯೋಗ ಶಿಬಿರ

ಕಿನ್ನಿಗೋಳಿ:  ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ...

Close