ಕಿನ್ನಿಗೋಳಿಯಲ್ಲಿ ಇನ್ನು ಅಚ್ಯುತದಾಸರು ಮರೀಚಿಕೆ ಮಾತ್ರ…

Kinnigoli-23101320

ಕಿನ್ನಿಗೋಳಿ : ಕರಾವಳಿಯ ಭಾಗದ ಕಿನ್ನಿಗೋಳಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಸುಶ್ರಾವ್ಯವಾಗಿ ಕೀರ್ತನೆಗಳನ್ನೂ ದಾಸರ ಹಾಡುಗಳೊಂದಿಗೆ ರಾಮಾಯಣ, ಮಹಾಭಾರತ, ಸಾಮಾಜಿಕ ಕಥಾನಕಗಳನ್ನು ವಿಶಿಷ್ಠವಾಗಿ ತನ್ನ ವಾಗ್ಜರಿಯ ಮೂಲಕ ಪದ್ಯಗಳಿಂದ ಪಸರಿಸುತ್ತಿದ್ದ ಹರಿಕಥೆಯ ದಿಗ್ಗಜ ವಿದ್ವಾನ್ ಸಂತ ಭದ್ರಗಿರಿ ಅಚ್ಯುತದಾಸರು ಇನ್ನು ಕಿನ್ನಿಗೋಳಿ ಪರಿಸರಕ್ಕೆ ನೆನಪು ಮಾತ್ರ.
ಕಿನ್ನಿಗೋಳಿ ಸಾಂಸ್ಕೃತಿಕ ಕಲಾಕೇಂದ್ರವೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ “ಯುಗಪುರುಷ” ಸಂಸ್ಥೆ ಆಯೋಜಿಸುತ್ತಿರುವ ಸಂತ ಭದ್ರಗಿರಿ ಅಚ್ಯುತದಾಸರು ಹರಿಕಥೆಯ ಸಪ್ತಾಹವನ್ನು ಕಳೆದ ೩೫ ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿತ್ತು. ವಾರದ ಎಲ್ಲಾ ದಿನಗಳಲ್ಲಿ ಸಂಜೆಯ ಗೋದೋಳಿ ಸಮಯದಲ್ಲಿ ಪ್ರಾರಂಭವಾಗುತ್ತಿದ್ದ ಹರಿ ಕಥಾ ಕಾಲ ಕ್ಷೇಪಕ್ಕೆ ಅಸಂಖ್ಯಾತ ಅಭಿಮಾನಿಗಳು ಬರುತ್ತಿದ್ದರು ಯುಗಪುರುಷ ಸಭಾಭವನ ತುಂಬಿ ತುಳುಕುತ್ತಿತ್ತು ಪ್ರತೀ ವರ್ಷವು ನಡೆಯುವ ಹರಿಕಥೆ ಸಪ್ತಾಹಕ್ಕೆ ಅಸಂಖ್ಯಾತ ಅಭಿಮಾನಿಗಳು ದೂರದ ಊರಿನಿಂದಲೂ ಆಗಮಿಸುತ್ತಿದ್ದರು. ದಿ.ಕೊ.ಅ.ಉಡುಪರು ಆರಂಭಿಸಿದ ಭದ್ರಗಿರಿ ಅಚ್ಯುತದಾಸರ ಈ ಹರಿಕಥಾ ಕಾಲಕ್ಷೇಪದ ಸಪ್ತಾಹವನ್ನು ಮುಂದುವರಿಸಿಕೊಂಡು ಬರುತ್ತಿರುವ ಉಡುಪರ ಪುತ್ರ ಯುಗಪುರುಷದ ಈಗಿನ ವ್ಯವಸ್ಥಾಪಕ ಕೊಡೆತ್ತೂರು ಭುವನಾಭಿರಾಮ ಉಡುಪರು ಭುವನಾಭಿರಾಮ ಉಡುಪರು ಸ್ಮರಿಸಿಕೊಳ್ಳುತ್ತಿದ್ದಾರೆ.
ಜನರಿಗೆ ಸಂಸ್ಕಾರಭರಿತ ಪುರಾಣ ಕಥಾನಕಗಳನ್ನು ಆಸ್ವಾದಿಸುವ ಕೇಂದ್ರವಾಗಿ ಕಿನ್ನಿಗೋಳಿಯ “ಯುಗಪುರುಷ” ಸಂಸ್ಥೆ ರೂಪುಗೊಂಡಿತ್ತು. ಹಾಗೂ ದಾಸರ ವಾಣಿಯನ್ನು ಆಲಿಸಲು ಅವಕಾಶ ಒದಗಿತ್ತು. ಅಲ್ಲದೇ ದಿ.ಕೊ.ಅ.ಉಡುಪ ಸಂಸ್ಮರಣಾ ಪ್ರಶಸ್ತಿಯೂ ಅವರನ್ನು ಆವರಿಸಿಕೊಂಡಿದ್ದು ವಿಶೇಷ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಅಚ್ಯುತದಾಸರ ಅಭಿಮಾನಿ ಹರಿಕೃಷ್ಣ ಪುನರೂರು ಹೇಳುತ್ತಾರೆ.
ಪ್ರತೀ ವರ್ಷ ಸಪ್ತಾಹಕ್ಕೆ ಆಗಮಿಸುವ ಅಚ್ಯುತದಾಸರು ಕಿನ್ನಿಗೋಳಿ ಪರಿಸರದಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಕಿನ್ನಿಗೋಳಿಯ ಪ್ರಸಿದ್ಧ ಜವಳಿ ವರ್ತಕ ಸಂಸ್ಥೆಯಾದ ಸಂಜೀವ ರಾವ್ ಅಂಡ್ ಸನ್ಸ್‌ರವರ ಯಶವಂತ ರಾವ್ ಅವರ ಮನೆಯಲ್ಲಿ ಹಾಗೂ ಕೆಲವೊಮ್ಮೆ ಮೂಡಬಿದಿರೆಯ ಬಳಿಯ ತಮ್ಮ ಮಗಳ ಮನೆಯಲ್ಲಿ ವಾಸ್ತವ್ಯ ಹೂಡಿ ಸಪ್ತಾಹದ ಪ್ರತೀ ದಿನವು ಸಮಯದ ಮಹತ್ವ ಅರಿತುಕೊಂಡು ಹರಿಕಥೆಯನ್ನು ನಡೆಸುವ ಸಂಪ್ರದಾಯ ಬೆಳೆಸಿಕೊಂಡಿದ್ದರು.
ಕಿನ್ನಿಗೋಳಿ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ.) ಸಮುದಾಯದವರ ಅಚ್ಚುಮೆಚ್ಚಿನ ಕಣ್ಮಣಿಯಾಗಿದ್ದ ಅಚ್ಯುತ ದಾಸರು ತಮ್ಮ ವಾಕ್ ಸಾiರ್ಥ್ಯ, ಸುಶ್ರಾವ್ಯ ಗೀತಾ ಪಠಣ, ಸಂಗೀತ, ಸಾಮಾಜಿಕ ಕಥಾನಕಗಳನ್ನು ಜೀವತುಂಬುವಂತೆ ಬಿಂಬಿಸುವ ವಿಧಾನ ಹಾಸ್ಯ ಚಟಾಕಿಗಳು, ಕೆಲವೊಮ್ಮೆ ರಾಜಕೀಯವನ್ನು ಹದವಾಗಿ ಬೆರೆಸುವ, ಕೊಂಕಣಿ, ತುಳು, ಕನ್ನಡ, ಮರಾಠಿ, ಇಂಗ್ಲೀಷ್‌ನಮತಹ ಬಹುಭಾಷೆಗಳನ್ನು ಬೆರೆಸುವ ಗುಣ ವಿಶೇಷತೆ, ಪುರಾಣಗಳ ತಾತ್ವಿಕತೆ, ಜನರ ಮನಮುಟ್ಟುವ ಉಪಕಥೆಗಳು, ಅಚ್ಯುತದಾಸರ ಹರಿಕಥೆಯಲ್ಲಿ ಒಳಗೊಂಡಿದ್ದರಿಂದ ಎಲ್ಲಾ ವರ್ಗದ ಅಭಿಮಾನಿಗಳನ್ನು ಅವರು ಸೆಳೆದಿದ್ದರು.
ಭದ್ರಗಿರಿ ಅಚ್ಯುತದಾಸರ ಮೃತಕ್ಕೆ ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್‌ಕುಮಾರ್ ಕಟೀಲು, ಕಟೀಲು ದೇವಳದ ಪ್ರಧಾನ ಅರ್ಚಕ ಕೆ.ಲಕ್ಷ್ಮೀ ನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು, ಕೆ.ಭುವನಾಭಿರಾಮ ಉಡುಪ, ಹಿರಿಯ ಸಾಹಿತಿ ಕೆ.ಜಿ.ಮಲ್ಯ, ಅಚ್ಚುತ ಮಲ್ಯ, ಸುರೇಂದ್ರನಾಥ ಶೆಣೈ, ವೈ. ಯೋಗೀಶ್ ರಾವ್, ಯಕ್ಷಲಹರಿಯ ಇ. ಶ್ರೀನಿವಾಸ ಭಟ್, ವಿಜಯ ಕಲಾವಿದರ ಶರತ್ ಶೆಟ್ಟಿ, ಏಳಿಂಜೆ ಕೋಂಜಾಲುಗುತ್ತು ಅನಿಲ್ ಶೆಟ್ಟಿ, ದೇವಪ್ರಸಾದ್ ಪುನರೂರು, ಪು. ಗುರುಪ್ರಸಾದ್ ಭಟ್ ಹಾಗೂ ಇನ್ನಿತರ ಕಿನ್ನಿಗೊಳಿಯ ಅಸಂಖ್ಯಾತ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Comments

comments

Comments are closed.

Read previous post:
Kinnigoli-23101319
ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ಗೆ ಜಿಲ್ಲಾ ಚೆಯರ್‌ಮನ್ ಭೇಟಿ

 ಕಿನ್ನಿಗೋಳಿ : ಸಮಾಜದ ದುರ್ಬಲ ವರ್ಗ ಹಾಗೂ ಮಹಿಳೆಯರ ಕಷ್ಟಕಾರ್ಪಣ್ಯಗಳನ್ನು ಅರಿತು, ಅಭಿವೃದ್ಧಿ ಪರ ಕೆಲಸಗಳಿಗೆ ಸೇವಾ ಸಂಸ್ಥೆಗಳು ಸಹಾಯ ಹಸ್ತ ನೀಡಬೇಕು ಎಂದು ಇನ್ನರ್ ವೀಲ್ ಜಿಲ್ಲೆ...

Close