ಬಹರೈನ್ – ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ

ವರದಿ:ಕೆಬಿ ಜಗದೀಶ್ ಆಚಾರ್, ಬಹರೈನ್.

ಬಹರೈನ್: ಮನಾಮ ಕರ್ನಾಟಕ ಸೋಶಿಯಲ್ ಕ್ಲಬ್ ಸಭಾಂಗಣದಲ್ಲಿ ನಾಲ್ಕನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವವು ಇತ್ತೀಚಿಗೆ ವಿಶ್ವಕರ್ಮ ಸೇವಾ ಬಳಗ ಆಯೋಜಿಸಿತು.
ಜನಪ್ರಿಯ ಜ್ಯೋತಿಷಿ, ವಾಸ್ತು ಶಿಲ್ಪ ಪ್ರವೀಣರು ಹಾಗೂ ಅನರ್ಘ್ಯರತ್ನ ತಜ್ನರೂ ಆದರಣೀಯ ಅಶೋಕ ಪುರೋಹಿತ್, ಮುಂಬಯಿ ಇವರು ಕಲಶಪ್ರತಿಷ್ಠಾಪನೆಯೊಂದಿಗೆ ಚಾಲನೆ ನೀಡಿದರು. ಸೌದಿಅರೇಬಿಯಾದಿಂದ ಆಗಮಿಸಿದ ರವೀಂದ್ರ ಆಚಾರ್ಯ, ಮಂಗಳೂರು ಪುರೋಹಿತರೊಂದಿಗೆ ಪೂಜಾಕಾರ್ಯದಲ್ಲಿ ಸಹಕರಿಸಿದ್ದರು. ಶ್ರೀಧರ್ ಆಚಾರ್, ಚೇಂಪಿ ಪೂಜಾದಂಪತಿಗಳಾಗಿ ಉಪಸ್ಥಿತರಿದ್ದರು.
ಬಳಗದ ಮಹಿಳೆಯರು ವಿಶ್ವಕರ್ಮ ಸ್ತೋತ್ರ, ಶ್ರೀ ಕಾಳಿಕಾಂಬಾ ಸ್ತೋತ್ರ ಮತ್ತು ಶ್ರೀ ಲಲಿತಾಸಹಸ್ರನಾಮಾವಳಿ ಪಠಣೆ ಮಾಡಿ ಮಂಡಲದೀಪವನ್ನು ಬೆಳಗಿಸಲಾಯಿತು. ಸ್ಥಾಪಕಾಧ್ಯಕ್ಷ ಕೆಬಿ ಜಗದೀಶ್ ಆಚಾರ್ ಮತ್ತು ರಾಜೇಶ್ ಕೊಡತ್ತೂರು ಸುಮಾರು ಎರಡು ಗಂಟೆಗಳ ಕಾಲ ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಪ್ರದೀಪ್ ಕಾರ್ಕಳ ಇವರ ಭಜನೆಯ ಜತೆಗೆ ತಬಲಾವಾದನ ಹಾಗೂ ಬಿನು ಮಾಧವನ್ ಹಾರ್ಮೋನಿಯಮ್ ನ ಸುಮಧುರ ಹಿಮ್ಮೇಳದ ಮೇಳೈಕೆ ಸಭಾಂಗಣದಲ್ಲಿ ಸಂಚಲನವನ್ನುಂಟು ಮಾಡಿತ್ತು. ಫಲ-ಪುಷ್ಪಗಳಿಂದ ವಿಶೇಷವಾಗಿ ಅಲಂಕೃತಗೊಂಡ ಶ್ರೀ ದೇವರ ಸನ್ನಿಧಾನವಂತೂ ಅಕ್ಷರಶಃ ಅಶೋಕ್ ಪುರೋಹಿತರ ಕಲಾನೈಪುಣ್ಯತೆಯ ನಿಸ್ವಾರ್ಥ ಸೇವೆಯನ್ನು ಪ್ರತಿಬಿಂಬಿಸುತ್ತಿತ್ತು.
ಮನರಂಜನಾ ಕಾರ್ಯಕ್ರಮ ದಿವ್ಯಾ ದಾಮೋದರ್ ಪ್ರಸ್ತುತಪಡಿಸಿದ ಶ್ರೀ ವಿಘ್ನೇಶನ ಸ್ತುತಿಯೊಂದಿಗೆ ಪ್ರಾರಂಭವಾಯಿತು. ಬಹರೈನ್ ನ ಉದಯೋನ್ಮುಖ ನೃತ್ಯಗಾತಿ ಸಂಧ್ಯಾ ದಾಮೋದರ್ ಪ್ರಾರ್ಥನಾನೃತ್ಯದೊಂದಿಗೆ ತನ್ನ ಶಾಸ್ತ್ರೀಯ ನೃತ್ಯಶೈಲಿಯ ವೈಭವವನ್ನು ಸಾದರಪಡಿಸಿದರು. ಈ ನೃತ್ಯವನ್ನು ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿಯವರು ಸಂಯೋಜಿಸಿದ್ದರು. ಆಮೇಲೆ ಮಹಿಳಾಬಳಗದ ಸವಿತಾ ನಟೇಶ್, ರೇಷ್ಮಾ ಸತೀಶ್, ಪ್ರೀತಿ ಶರತ್ ಕುಮಾರ್, ಮೋಹಿನಿ ಸದಾಶಿವ ಮತ್ತು ವಾಣಿ ಮಂಜುನಾಥ್ ಇವರ ಪೂಜಾನೃತ್ಯ ಪ್ರೇಕ್ಷಕರನ್ನು ರಂಜಿಸಿತು. ಆನಂತರ ಹೊಸ-ಹಳೆಯ ಸುಮಧುರ ಕನ್ನಡ-ಹಿಂದಿ ಹಾಡುಗಳ
ಸಂಗೀತ ರಸದೌತಣವನ್ನಿತ್ತ ಬಳಗದ ಉತ್ಸಾಹೀ ಗಾಯಕರಾದ ಪ್ರದೀಪ್ ಕಾರ್ಕಳ, ಸತೀಶ್ ಉಲ್ಲಾಳ್, ರಾಜೇಶ್ ಕೊಡತ್ತೂರು, ದಿವ್ಯಾ ದಾಮೋದರ್ ಮತ್ತು ವಾಣಿ ಮಂಜುನಾಥ್ ತಮ್ಮ ಪ್ರತಿಭಾ ಪ್ರದರ್ಶನದಿಂದ ನೆರೆದವರ ಶಹಭಾಷ್ ಗಿಟ್ಟಿಸಿಕೊಂಡರು.
ಹಿಂದಿ ನೃತ್ಯಗೀತೆ “ನನ್ನಾರೆ…ನನ್ನಾರೆ…”ಹಾಡಿಗೆ ಹೆಜ್ಜೆ ಹಾಕಿದ ಬಾಲಪ್ರತಿಭೆಗಳಾದ ಅನನ್ಯ ರಾಜೇಶ್ ಮತ್ತು ಸಾಕ್ಷಿ ಶರತ್ ಕುಮಾರ್ ತಮ್ಮದೇ ಸಂಯೋಜನೆಯ ಮೂಲಕ ಎಲ್ಲರ ಗಮನಸೆಳೆದರು. ಪ್ರಧಾನ ಆಕರ್ಷಣೆಯಾಗಿ, ನೆರೆದ ಕಲಾರಸಿಕರನ್ನು ನಗೆಯ ಲೋಕಕ್ಕೆ ಕೊಂಡೊಯ್ದ ತುಳು ಹಾಸ್ಯ ಪ್ರಹಸನ, ಬಹರೈನ್ ನ ಚಿರಪರಿಚಿತ ಭಾಸ್ಕರ ಆಚಾರ್ಯ, ಪ್ರವೀಣ್ ಶೆಟ್ಟಿ ಮತ್ತು ಚೇತನಾ ಹೆಗ್ಡೆಯವರ ನಟನಾಚಾತುರ್ಯಕ್ಕೆ ಸಾಕ್ಷಿಯಾಗಿತ್ತು. ರೋಹನ್ ಸತೀಶ್, ರೋನಿತ್ ಸತೀಶ್, ಶ್ರೇಯಸ್ ಸದಾಶಿವ್, ಅನನ್ಯ ರಾಜೇಶ್ ಮತ್ತು ಸಾಕ್ಷಿ ಶರತ್ ಕುಮಾರ್ ರವರು ಹಿಂದಿ ರಿಮಿಕ್ಸ್ ಹಾಡಿಗೆ ಹೆಜ್ಜೆ ಹಾಕಿದರು. ವಿದುಷಿ ಆಸ್ತಿಕಾ ಶೆಟ್ಟಿಯವರು ಸಂಯೋಜಿಸಿ, ಸಂಧ್ಯಾ ದಾಮೋದರ್, ದಿವ್ಯಾ ದಾಮೋದರ್ ಮತ್ತು ಸಾಕ್ಷರ್ ಪ್ರದರ್ಶಿಸಿದ ಹಿಂದಿ ಫ್ಯೂಶನ್ ಡ್ಯಾನ್ಸ್ ಸುಂದರವಾಗಿ ಮೂಡಿಬಂದಿತ್ತು. ಅಂತೆಯೇ ಶ್ರೀನಿಧಿ ಶ್ರೀಧರ್ ಮತ್ತು ಶ್ರೇಯಾ ಶ್ರೀಧರ್ ಇವರು ತಮ್ಮ ಬಹರೈನ್ ಪ್ರವಾಸದ ಸವಿನೆನಪಿಗಾಗಿ ನಯನಮನೋಹರ ಹಿಂದಿ ನೃತ್ಯಪ್ರದರ್ಶನ ನೀಡಿದರು. ಪುಟ್ಟ ಬಾಲಕ ಆದಿತ್ಯ ಹರೀಶ್ ಇವರ ತಾಳಬದ್ಧ “ಲುಂಗಿ ಡ್ಯಾನ್ಸ್”ಗೆ ಜನರು ಕರತಾಡನದೊಂದಿಗೆ ಹರ್ಷ ವ್ಯಕ್ತಪಡಿಸಿದರು.
ದಿನಾಂಕ 11.10.2013 ರಂದು ನಡೆದ ವಾರ್ಷಿಕ ಆಟೋಟ ಸ್ಪರ್ಧೆಯ ವಿಜೇತರಿಗೆ, ಸಂಘದ ಅಧ್ಯಕ್ಷ ದಾಮೋದರ್ ಮಿಜಾರ್ ಇವರ ಸಮಕ್ಷಮದಲ್ಲಿ, ಅಶೋಕ್ ಪುರೋಹಿತ್ ರವರು ಬಹುಮಾನಗಳನ್ನು ವಿತರಿಸಿದರು.
ದಿನದ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಸ್ತುತ ಪಡಿಸಿದ ಬಳಗದ ಸ್ಥಾಪಕಾಧ್ಯಕ್ಷ ಕೆಬಿ ಜಗದೀಶ್ ಆಚಾರ್ ಈ ಸಂಭ್ರಮದ ಕಾರ್ಯಕ್ರಮದ ಯಶಸ್ಸಿಗಾಗಿ ತನು-ಮನ-ಧನಗಳಿಂದ, ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಸರ್ವರನ್ನೂ ಮನಸಾ ವಂದಿಸುವುದರೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

kinnigoli24101301

kinnigoli24101302

kinnigoli24101303

kinnigoli24101304

kinnigoli24101305

kinnigoli24101306

kinnigoli24101307

kinnigoli24101308

kinnigoli24101309

kinnigoli24101310

kinnigoli24101311

kinnigoli24101312

kinnigoli24101313

kinnigoli24101314

kinnigoli24101315

kinnigoli24101316

kinnigoli24101317 kinnigoli24101318

 

 

Comments

comments

Comments are closed.

Read previous post:
Kinnigoli-23101320
ಕಿನ್ನಿಗೋಳಿಯಲ್ಲಿ ಇನ್ನು ಅಚ್ಯುತದಾಸರು ಮರೀಚಿಕೆ ಮಾತ್ರ…

ಕಿನ್ನಿಗೋಳಿ : ಕರಾವಳಿಯ ಭಾಗದ ಕಿನ್ನಿಗೋಳಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಸುಶ್ರಾವ್ಯವಾಗಿ ಕೀರ್ತನೆಗಳನ್ನೂ ದಾಸರ ಹಾಡುಗಳೊಂದಿಗೆ ರಾಮಾಯಣ, ಮಹಾಭಾರತ, ಸಾಮಾಜಿಕ ಕಥಾನಕಗಳನ್ನು ವಿಶಿಷ್ಠವಾಗಿ...

Close