ಕಿನ್ನಿಗೋಳಿ: ವಿದ್ವಾನ್ ಪೆರ್ಲ ಸಂಸ್ಮರಣೆ

ಕಿನ್ನಿಗೋಳಿ : ನವಂಬರ್ 1 ಕನ್ನಡ ರಾಜ್ಯೋತ್ಸವದಂದು ಕಿನ್ನಿಗೋಳಿಯ ಯಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಹಾಗೂ ಯುಗಪುರುಷ ಸಂಸ್ಥೆಗಳ ಸಹಯೋಗದಲ್ಲಿ ಕೀರ್ತಿಶೇಷರಾದ ಹಿರಿಯ ವಿದ್ವಾಂಸ, ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ. ಲಕ್ಷ್ಮೀನಾರಾಯಣ ಸಾಮಗ ಸಂಸ್ಮರಣಾ ಭಾಷಣ ಮಾಡಲಿರುವರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಎಂ. ಆರ್ ವಾಸುದೇವ ಸಾಮಗ ಸಂಚಾಲಕತ್ವದ ಸಂ.ಯ.ಮಂ. ಕೋಟೇಶ್ವರ ಇವರಿಂದ “ಸತ್ವ ಪರೀಕ್ಷೆ” ಎಂಬ ಅಖ್ಯಾನದ ತಾಳಮದ್ದಲೆ ಜರಗಲಿರುವುದು. ಮೂಡಬಿದ್ರಿ ಧನಲಕ್ಷ್ಮೀ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಮಾಲಕ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು, ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಕೆ. ಮಂಜುನಾಥ ಮಲ್ಯ, ಕೆ. ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಹಾಗೂ ಯುಗಪುರುಷ ಭುವನಾಭಿರಾಮ ಉಡುಪ ಸುದ್ದಿಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

 

Comments

comments

Comments are closed.