ಮೂಲ್ಕಿ: ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಮೂಲ್ಕಿ: ವಿದ್ಯೆಯಿಂದ ಮಾತ್ರ ಬಡತನ ನಿವಾರಣೆ ಯಾಗುದರೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗುವ ನೆಲೆಯಲ್ಲಿ ವಿದ್ಯಾದಾನ ಅತೀ ಅಮೂಲ್ಯದಾನವಾಗಿದೆ ಎಂದು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ದರ್ಶನ ಪಾತ್ರಿ ಶ್ರೀ ವಸಂತ ನಾಯಕ್ ಫಲಿಮಾರ್ಕರ್ ಹೇಳಿದರು.
ಗೌಡ ಸಾರಸ್ವತ ಬ್ರಾಹ್ಮಣ ಸಭಾ ಮೂಲ್ಕಿ ಇವರ ಸಂಯೋಜನೆಯಲ್ಲಿ ಮೂಲ್ಕಿ ಜಿಎಸ್‌ಬಿ ಸಭಾಗೃಹದಲ್ಲಿ ಸಭಾದ ೩೫ನೇ ವರ್ಷಾಚರಣೆ ಗಾಗಿ ನಡೆದ ಜಿಎಸ್‌ಬಿ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಲಿಕಾ ಪುರಸ್ಕಾರ ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯೆ ಬಲು ಶ್ರೇಷ್ಠ ಎಂದು ತಿಳಿದು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳನ್ನು ಆಯ್ದು ಅದರಲ್ಲಿ ಉನ್ನತ ಸಾಧನೆಯನ್ನು ಮಾಡಿ ಹೆಸರುಗಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಭಾದ ಅಧ್ಯಕ್ಷ ನ್ಯಾಯವಾದಿ ಸತೀಶ್ ಕಾಮತ್ ವಹಿಸಿದ್ದರು.
ಸಮಾಜದ ಸಾಧಕರಾಗಿ ಪದವಿ ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಹೆಚ್.ಜಿ.ನಾಗರಾಜ ನಾಯಕ್,ಉದ್ಯೋಗ ಕ್ಷೇತ್ರದಲ್ಲಿ ಪ್ರಭಾಕರ ಗಡಿಯಾರ್,ವೈದಿಕರು ಹಾಗೂ ಬ್ಯಾಂಕಿಗ್ ಕ್ಷೇತ್ರದಲ್ಲಿ ವೆಂಕಟೇಶ ಭಟ್, ಶಿಕ್ಷಣ ಕ್ಷೇತ್ರದಲ್ಲಿ ನಳಿನಿ.ವಿ.ಕಾಮತ್,ಯಕ್ಷಗಾನ ಭೋದಕರಾಗಿ ಪಂಜಿನಡ್ಕ ವಿಟ್ಟಲ್ ಕಾಮತ್ ರವರನ್ನು ಸಪತ್ನೀಕರಾಗಿ ಸನ್ಮಾನಿಸಲಾಯಿತು.ಎಸ್.ಎಸ್.ಎಲ್.ಸಿ ಯಿಂದ ಉನ್ನತ ಶಿಕ್ಷಣ ಸಾಧಕ ವಿದ್ಯಾರ್ಥಿಗಳಿಗೆ ಕಲಿಕಾ ಪುರಸ್ಕಾರ ನೀಡಲಾಯಿತು.
ಅತಿಥಿಗಳಾಗಿ ಮೂಲ್ಕಿ ಸಭಾಗೃಹ ಸಮಿತಿ ಅಧ್ಯಕ್ಷ ವಿ.ವಿಶ್ವನಾಥ ಕಾಮತ್, ಬಡವಿದ್ಯಾರ್ಥಿ ಫಂಡ್ ಅಧ್ಯಕ್ಷ ವಾಸುದೇವ ಆರ್ ಕುಡ್ವಾ, ಎಂ.ರಾಜೇಶ್ ಪ್ರಭು,ಸತ್ಯೇಂದ್ರ ಶೆಣೈ,ಎಂ ರಾಮದಾಸ್ ಕಾಮತ್,ಯು.ಸುರೇಂದ್ರ ಶೆಣೈ,ಬಾಬುರಾಯ ಶೆಣೈ,ಡಾ.ಚಂದ್ರಕಾಂತ ಭಟ್,ಬಾಲಕೃಷ್ಣ ಶೆಣೈ, ಎಂ ಗಣೇಶ್ ಭಟ್,ಗಣೇಶ್ ರಾವ್ ವೇದಿಕೆಯಲ್ಲಿದ್ದರು.

kinnigoli25101302

Comments

comments

Comments are closed.

Read previous post:
kinnigoli25101301
ವೇಷಧಾರಿಗಳಿಂದ ನಿಡ್ಡೋಡಿ ಜಾಗೃತಿ!

ಚಿತ್ರ : ಕಟೀಲ್ ಸ್ಟುಡಿಯೋ ಕಟೀಲು ದೇಗುಲಕ್ಕೆ ನವರಾತ್ರಿ ತೃತೀಯ ದಿನದ ಮೆರವಣಿಗೆಯಲ್ಲಿ ಬಂದ ಗಾಂಧೀವಾದಿಗಳ ವೇಷಧಾರಿ ಭಕ್ತರು ತಮ್ಮ ಉಡುಗೆಗಳಲ್ಲಿ ನಿಡ್ಡೋಡಿ ಉಳಿಸಿ, ರೈತರ ರಕ್ಷಿಸಿ...

Close