ಅಂಗರಗುಡ್ಡೆ ನಮೋ ಬ್ರಿಗೇಡ್ ಬೃಹತ್ ಜಾಥಾ

Nishanth Shetty Kilenjoor

ಕಿನ್ನಿಗೋಳಿ : ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಬೆಂಬಲಿಸುವ ಉದ್ದೇಶದಿಂದ ಮುಲ್ಕಿ ಸಮೀಪದ ಕೆಂಚನಕೆರೆ ಅಂಗರಗುಡ್ಡೆ ಮೋದಿ ಅಭಿಮಾನಿ ಬಳಗ ಮತ್ತು ನಮೋ ಬ್ರಿಗೇಡ್ ನೇತೃತ್ವದಲ್ಲಿ ಭಾನುವಾರ ಬೃಹತ್ ಜಾಥಾ ನಡೆಯಿತು.
ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದಿಂದ ಹೊರಟ ರ‍್ಯಾಲಿಗೆ ಬಿ.ಜೆಪಿ ಮುಖಂಡ ಉಮನಾಥ ಕೋಟ್ಯಾನ್ ಚಾಲನೆ ನೀಡಿದರು. ಪುನರೂರು, ಕಿನ್ನಿಗೋಳಿ, ಎಸ್.ಕೋಡಿ ಕೆರೆಕಾಡು, ಕಾರ್ನಾಡು ಮೂಲಕ ಸಾಗಿ ನಂತರ ಅಂಗರಗುಡ್ಡೆ ಶ್ರೀ ರಾಮ ಭಜನಾಮಂದಿರದಲ್ಲಿ ಸಮಾಪನೆಗೊಂಡಿತು.
ಸಮಾಪನ ಸಮಾರಂಭದಲ್ಲಿ ಅಧಕ್ಷತೆ ವಹಿಸಿದ್ದ ಮೂಲ್ಕಿ ಮೂಡಬಿದ್ರೆ ಬಿ.ಜೆ.ಪಿ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ ಮಹಾಭಾರತದಲ್ಲಿ ಬರುವ ಭಗವದ್ಗೀತೆಯ ಸಂದೇಶದಂತೆ ನರೇಂದ್ರ ಮೋದಿ ಬಿ.ಜೆ.ಪಿ ಪಕ್ಷದ ತಳಮಟ್ಟದ ಸಾಮಾನ್ಯ ಕಾರ್ಯಕರ್ತನಾಗಿ ಬಂದು ಇಂದು ಮುಸ್ಲಿಮರು ಸಹಾ ಪ್ರೀತಿಸುವಂತಹ ಮಟ್ಟಕ್ಕೆ ಬೆಳೆದ ಮೋದಿ ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿಯಾಗಿ ಉತ್ತಮ ಆಡಳಿತ ನಡೆಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಬಿಜೆಪಿ ಮುಖಂಡ ಪಾಂಗಳ ವಿಲಾಸ್ ನಾಯಕ್ ಮಾತನಾಡಿ ತಾತ ಮುತ್ತಾತನ ಕಾಲದಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂದು ಸಾಮಾನ್ಯರು ನಂಬಿದ್ದು ಕೇವಲ ಮರೀಚಿಕೆಯಂತಾಗಿದೆ. ಆದರೆ ಇಂದಿಗೂ ದೇಶ ಹೇಳುವಂತಹ ಅಭಿವೃದ್ಧಿ ಕಂಡಿಲ್ಲ. ನಮ್ಮ ಮುಂದಿನ ಜನಾಂಗ ಅಭಿವೃದ್ಧಿಯನ್ನು ಕಾಣಬೇಕಾದರೆ ಮೋದಿಯನ್ನು ಪ್ರಧಾನಿಯಾಗಿ ಮಾಡಬೇಕು ಎಂದರು
ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಭುವನಾಭಿರಾಮ ಉಡುಪ, ದೇವ ಪ್ರಸಾದ್ ಪುನರೂರು, ವಿನೋದ್ ಸಾಲ್ಯಾನ್, ಕೃಷ್ಣ ಶೆಟ್ಟಿಗಾರ್, ವಿಠಲ, ನವೀನ್ ದೇವಾಡಿಗ, ಸತೀಶ್ ಉಪಸ್ಥಿತರಿದ್ದರು.

Kinnigoli28101301 Kinnigoli28101302 Kinnigoli28101303 Kinnigoli28101304

Comments

comments

Comments are closed.

Read previous post:
kinnigoli25101310
ಕಟೀಲು-ಮಿತ್ತಬೈಲು ರಸ್ತೆ ಕಾಂಕ್ರೀಟು ಕಾಮಗಾರಿ ಶಿಲಾನ್ಯಾಸ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟೀಲು ಪೆಟ್ರೋಲ್ ಪಂಪ್ ಬಳಿಯಿಂದ ಮಿತ್ತಬೈಲು ವರೆಗಿನ ರಸ್ತೆಗೆ ಮಂಗಳೂರು ಸಂಸದರ ಅನುದಾನ ಐದು ಲಕ್ಷ ಹಾಗೂ ಜಿ.ಪಂ. ಅನುದಾನದಿಂದ...

Close