ಈರುಳ್ಳಿ ಮೇನಿಯಾ

Wilson Kateel

 Onions

ಎಂದಿನಂತೆ
ಸಂತೆಗೆ ಹೋಗಿ ಬಂದ
ಹೆಂಡತಿಯ ಚಿರಿಪಿರಿಯನ್ನು ಕೇಳಿ
ಗಂಡ ಹೊಸತಾಗಿ ಪ್ರತಿಕ್ರಿಯಿಸಿದ-
“ಈರುಳ್ಳಿಯ ಸಿಟ್ಟು
ನನ್ನ ಮೇಲೆ ಯಾಕೆ ತೋರಿಸುತ್ತಿ ಮಾರಾಯ್ತಿ….”!
**
ಹೊಸದಾಗಿ ಮದ್ವೆಯಾದ ಜೋಡಿಗೆ
ನಾನು ಎರಡು ಕಿಲೋ ಈರುಳ್ಳಿ
ಗಿಫ್ಟ್ ಕೊಟ್ಟೆ.
ಅವರು ಅದಕ್ಕೆ
ಯಾವೂದೋ ಕೆಮಿಕಲ್ ಸಿಂಪಡಿಸಿ
ಲಾಕರಲ್ಲಿ ಇಟ್ಟಿದ್ದಾರಂತೆ
ಸಂಸಾರದ ಭದ್ರತೆಗಾಗಿ!
**
ನನ್ನ ಹೆಂಡತಿಗೆ ನಾನು
ಈರುಳ್ಳಿಯ ಸಿಪ್ಪೆ ಮುಡಿಸಿದೆ
ಇಡೀ ರಾತ್ರಿ
ಅವಳು ನನ್ನ ತನಿಖೆ ಮಾಡಿದಳು-
“ಉಳಿದವನ್ನು ಯಾರಿಗೆ ಕೊಟ್ಟು ಬಂದ್ರಿ?”!
**
ಈಗೀಗ
ಮೋಡಗಳನ್ನು ನೋಡುವಾಗ
ನನಗೆ
ಗಗನಕ್ಕೇರಿದ ಈರುಳ್ಳಿಯ ಬೆಲೆಯ
ಸಿಪ್ಪೆಗಳಂತೆ ಕಾಣುತ್ತಿವೆಯಲ್ಲ!
**
ಮಧ್ಯಾನ್ಹ ಊಟ ಫ್ರೀ ಕೊಡುವ
ಶಿಕ್ಶಣ ಸಂಸ್ಥೆಗಳು
ಈಗೀಗ
ಡೊನೇಶನ್ ಬದಲಾಗಿ
ಈರುಳ್ಳಿ ಕೇಳುತ್ತಿದ್ದಾರಂತೆ!
**

Comments

comments

Comments are closed.

Read previous post:
Kinnigoli28101305
ಯಕ್ಷ ಗುರು ಗಣೇಶ್ ಕೊಲಕಾಡಿ ಸನ್ಮಾನ

ಕಿನ್ನಿಗೋಳಿ : ಯಕ್ಷಗಾನದ ಸಾಹಿತ್ಯವೂ ಛಂದಸ್ಸು ಪೂರ್ಣವಾಗಿದ್ದಾಗ ಮಾತ್ರ ಹಾಡಲು ಮತ್ತು ಕೇಳಲು ಇಂಪಾಗಿರುತ್ತದೆ. ಯಕ್ಷಗಾನದ ಶ್ರೇಷ್ಠತೆಯನ್ನು ಬಿಡಿಸಿ ಹೇಳುವ ಹೊಸ ಜ್ಞಾನಲೋಕ ತೆರೆದುಕೊಳ್ಳಬೇಕು. ಜೀವನದುದ್ದಕ್ಕೂ ಯಕ್ಷಗಾನ ಸಾಹಿತ್ಯವನ್ನು...

Close