ಯಕ್ಷ ಗುರು ಗಣೇಶ್ ಕೊಲಕಾಡಿ ಸನ್ಮಾನ

ಕಿನ್ನಿಗೋಳಿ : ಯಕ್ಷಗಾನದ ಸಾಹಿತ್ಯವೂ ಛಂದಸ್ಸು ಪೂರ್ಣವಾಗಿದ್ದಾಗ ಮಾತ್ರ ಹಾಡಲು ಮತ್ತು ಕೇಳಲು ಇಂಪಾಗಿರುತ್ತದೆ. ಯಕ್ಷಗಾನದ ಶ್ರೇಷ್ಠತೆಯನ್ನು ಬಿಡಿಸಿ ಹೇಳುವ ಹೊಸ ಜ್ಞಾನಲೋಕ ತೆರೆದುಕೊಳ್ಳಬೇಕು. ಜೀವನದುದ್ದಕ್ಕೂ ಯಕ್ಷಗಾನ ಸಾಹಿತ್ಯವನ್ನು ಉಸಿರಾಗಿಸಿಕೊಂಡು ಅದನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುವ ಗಣೇಶ ಕೊಲೆಕಾಡಿ ಅವರ ಜೀವನ ಸಾರ್ಥಕವಾಗಲಿ ಎಂದು ಯಕ್ಷಗಾನದ ಛಂದೋಬ್ರಹ್ಮ ಡಾ| ನಾರಾಯಣ ಶೆಟ್ಟಿ ಹೇಳಿದರು.
ಗಣೇಶ ಕೊಲಕಾಡಿ ಅಭಿಮಾನಿ ಬಳಗ ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಆಯೋಜಿಸಿದ ಗಣೇಶ ಕೊಲಕಾಡಿ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಯಕ್ಷಗಾನ ಪ್ರಸಂಗಕರ್ತ, ಯಕ್ಷಗುರು ಕವಿ, ಕಲಾವಿದ ಗಣೇಶ್ ಕೊಲಕಾಡಿ ಅವರನ್ನು ಗಣೇಶ ಕೊಲಕಾಡಿ ಅಭಿಮಾನಿ ಬಳಗ ಐವತ್ತು ಸಾವಿರ ನಗದು ಹಾಗೂ ಬಂಗಾರದ ಪದಕ ನೀಡಿ ಸನ್ಮಾನಿಸಿದರು.
ಧಾರ್ಮಿಕ ಚಿಂತಕ ವೆ|ಮೂ| ವಾದಿರಾಜ ಉಪಾಧ್ಯಾಯ ಆಶೀರ್ವಚನಗೈದರು. ಸುಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಭವ್ಯಶ್ರೀ ಯಕ್ಷಗಾನ ಭಾಗವತಿಕೆ ಶೈಲಿಯಲ್ಲಿ ಸನ್ಮಾನ ಪತ್ರ ವಾಚಿಸಿದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ನಡಿಬೆಟ್ಟು ಶ್ರೀ ಧೂಮವತಿ ದೈವಸ್ಥಾನ ಅತಿಕಾರಿಬೆಟ್ಟು ಗುತ್ತಿನಾರ್ ಜಯರಾಮ ಶೆಟ್ಟಿ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದ ವಸಂತ್, ಗುತ್ತಿಗೆದಾರ ದಯಾನಂದ ಶೆಟ್ಟಿ ಖಂಡಿಗೆ ಚೆಳ್ಯಾರು, ಪಿ.ಡಬ್ಲ್ಯು.ಡಿ. ಗುತ್ತಿಗೆದಾರ ಬಾಸ್ಕರ ಪಡುಬಿದ್ರಿ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಗೋಪಿನಾಥ ಪಡಂಗ, ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಗನಾಥ ಶೆಟ್ಟಿ, ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಉಪಸ್ಥಿತರಿದ್ದರು.
ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು.

Kinnigoli28101305

Comments

comments

Comments are closed.

Read previous post:
Kinnigoli28101301
ಅಂಗರಗುಡ್ಡೆ ನಮೋ ಬ್ರಿಗೇಡ್ ಬೃಹತ್ ಜಾಥಾ

Nishanth Shetty Kilenjoor ಕಿನ್ನಿಗೋಳಿ : ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಬೆಂಬಲಿಸುವ ಉದ್ದೇಶದಿಂದ ಮುಲ್ಕಿ ಸಮೀಪದ ಕೆಂಚನಕೆರೆ ಅಂಗರಗುಡ್ಡೆ ಮೋದಿ ಅಭಿಮಾನಿ ಬಳಗ ಮತ್ತು ನಮೋ...

Close