ಕಿನ್ನಿಗೋಳಿ ರೋಟರಿಯಿಂದ ವೃತ್ತಿ ಪರರಿಗೆ ಸನ್ಮಾನ

ಕಿನ್ನಿಗೋಳಿ : ನಿಷ್ಠೆ, ಶಿಸ್ತು ಬದ್ದ ಪ್ರಾಮಾಣಿಕತೆ ದುಡಿಮೆ ಮತ್ತು ಸಾಮಾಜಿಕ ಸೇವೆಯ ಉದ್ದೇಶ ಹೊಂದಿದವರನ್ನು ಸಮಾಜ ಯಾವಾಗಲೂ ಗುರುತಿಸುತ್ತದೆ ಎಂದು ರೋಟರಿ ಜಿಲ್ಲೆ 3180 ವಲಯ 3ರ ಸಹಾಯಕ ಗವರ್ನರ್ ಮಾಧವ ಸುವರ್ಣ ಹೇಳಿದರು.

ಕಿನ್ನಿಗೋಳಿ ರೋಟರಿ ಕ್ಲಬ್ ಸೋಮವಾರ ಕಿನ್ನಿಗೋಳಿ ಸಹಕಾರ ಸೌಧದಲ್ಲಿ ಆಯೋಜಿಸಿದ ವೃತ್ತಿಸೇವೆ ಮಾಸಾಚರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕ್ಷೌರಿಕ ಶಿವಾನಂದ ಸಾಲ್ಯಾನ್, ಇಲೆಕ್ಟ್ರೀಷಿಯನ್ ಭೋಜ ಆಚಾರ್ಯ ಹಾಗೂ ಪಿಗ್ಮಿ ಸಂಗ್ರಾಹಕ ರವಿದಾಸ್ ಶೆಣೈ ಅವರನ್ನು ವೃತ್ತಿ ಪರರ ನೆಲೆಯಲ್ಲಿ ಸನ್ಮಾನಿಸಲಾಯಿತು.
ರೋಟರಿ ಜಿಲ್ಲೆ ವಲಯ 3 ವಲಯ ಸೇನಾನಿ ಎನ್.ಪಿ. ಶೆಟ್ಟಿ, ಜಿಲ್ಲಾ ವೃತ್ತಿ ಪರ ಸೇವಾ ಜಾಗೃತಿ ಅಧ್ಯಕ್ಷ ಪಿ.ಸತೀಶ್ ರಾವ್, ಕಿನ್ನಿಗೋಳಿ ರೋಟರಿ ವೃತ್ತಿ ಸೇವೆ ನಿರ್ದೇಶಕ ಕೆ. ಲವ ಶೆಟ್ಟಿ, ರೋಟರಿ ಕಾರ್ಯದರ್ಶಿ ಜೋಕಿಂ ಸಿಕ್ವೇರಾ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೋ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 29101301

Comments

comments

Comments are closed.