ಕಿನ್ನಿಗೋಳಿ : ಎಸ್.ಕೆ.ಪಿ.ಎ. ವಾರ್ಷಿಕ ಮಹಾಸಭೆ

ಕಿನ್ನಿಗೋಳಿ : ಸವಿನೆನಪುಗಳನ್ನು ಶಾಶ್ವತವಾಗಿಸುವ ಛಾಯಾಗ್ರಾಹಕರು ಸಂಘಟಿತರಾಗಿ ಬೆಳೆದು, ಸೇವೆಯಲ್ಲಿ ಶೀಘ್ರ ಸ್ಪಂದಿಸಿ ನೈತಿಕತೆ ಮತ್ತು ಶಿಸ್ತಿಗೆ ಆದ್ಯತೆ ನೀಡಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು
ಮಂಗಳವಾರ ಕಿನ್ನಿಗೋಳಿ ಸಹಕಾರ ಸೌಧದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮೂಲ್ಕಿ ವಲಯದ ಪದಗ್ರಹಣ ಸಮಾರಂಭ ಹಾಗೂ ದಶಮಾನೋತ್ಸವ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಕೆಪಿಎ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಮಾತನಾಡಿ ಛಾಯಾಗ್ರಾಹಕ ಸಂಘಟನೆಯನ್ನು ಬಲಪಡಿಸಿ, ಸರ್ಕಾರಿ ಸವಲತ್ತುಗಳ ಬೇಡಿಕೆ ಹಾಗೂ ಗ್ರಾಮೀಣ ವಲಯದಲ್ಲಿ ತಾಂತ್ರಿಕತೆಯ ಬಗ್ಗೆ ಛಾಯಾಗ್ರಾಹಕರಿಗೆ ತರಬೇತಿ ನೀಡಲಾಗುವುದು. ಎಂದರು.
ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಕ್ಲಾರೆನ್ಸ್ ಮಿರಾಂದ ಮಾತನಾಡಿ ಛಾಯಾಗ್ರಾಹಕರು ವೃತ್ತಿಯಲ್ಲಿ ಸಂಘಟಿತರಾಗಿ ಸಮಾಜದ ಒಳಿತಿಗೆ ಪೂರಕವಾಗಿ ಸ್ಪಂದಿಸಬೇಕು ಎಂದು ಹೇಳಿದರು ಅಲ್ಲದೆ ವಿಶಿಷ್ಟ ರೀತಿಯಲ್ಲಿ ಛಾಯಚಿತ್ರದ ಇತಿಹಾಸದ ಬಗ್ಗೆ ದೃಶ್ಯ ಮಾಧ್ಯಮದ ಮೂಲಕ ವಿವರಣೆ ನೀಡಿದರು.
ಈ ಸಂದರ್ಭ ಹಿರಿಯ ಛಾಯಾಗ್ರಾಹಕ ಕೆ.ನಾಗೇಶ್‌ರಾವ್ ಅವರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರಾಗಿ ನವೀನ್ ಕುಮಾರ್ ಕಟೀಲು ಹಾಗೂ ಕಾರ್ಯದರ್ಶಿಯಾಗಿ ಕೆ.ಬಿ ಸುರೇಶ್ ಅಧಿಕಾರ ಸ್ವೀಕರಿಸಿದರು.
ಪೋಂಪೈ ಪದವಿ ಕಾಲೆಜು ಪ್ರಾಂಶುಪಾಲ ಡಾ| ಜಾನ್ ಕ್ಲಾರೆನ್ಸ್ ಮಿರಾಂದಾ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಎಸ್‌ಕೆಪಿಎ ಜಿಲ್ಲಾ ಕಾರ್ಯದರ್ಶಿ ಹರ್ಷಾಕರ್, ಉಪಾಧ್ಯಕ್ಷ ಪದ್ಮರಾಜ್ ಜೈನ್, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷ ರಫಾಯಿಲ್ ರೆಬೆಲ್ಲೋ ಸ್ವಾಗತಿಸಿ ಶಿವರಾಂ ಪ್ರಾರ್ಥಿಸಿದರು. .ಲೈನೆಲ್ ಪಿಂಟೋ ಪ್ರಸ್ತಾವನೆಗೈದು ಯಶವಂತ ಐಕಳ ವಾರ್ಷಿಕ ವರದಿ ಮಂಡಿಸಿದರು. ಕೆ.ಬಿ. ಸುರೇಶ್ ವಂದಿಸಿದರು ಯೋಗೀಶ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

Kinnigoli30101301

Comments

comments

Comments are closed.

Read previous post:
Kinnigoli 29101301
ಕಿನ್ನಿಗೋಳಿ ರೋಟರಿಯಿಂದ ವೃತ್ತಿ ಪರರಿಗೆ ಸನ್ಮಾನ

ಕಿನ್ನಿಗೋಳಿ : ನಿಷ್ಠೆ, ಶಿಸ್ತು ಬದ್ದ ಪ್ರಾಮಾಣಿಕತೆ ದುಡಿಮೆ ಮತ್ತು ಸಾಮಾಜಿಕ ಸೇವೆಯ ಉದ್ದೇಶ ಹೊಂದಿದವರನ್ನು ಸಮಾಜ ಯಾವಾಗಲೂ ಗುರುತಿಸುತ್ತದೆ ಎಂದು ರೋಟರಿ ಜಿಲ್ಲೆ 3180 ವಲಯ 3ರ...

Close