ಹಳ್ಳಿ ಹಳ್ಳಿಯಲ್ಲಿ ಸೌಜನ್ಯಾ ಪರ ಧ್ವನಿ ಮೊಳಗಲಿ

ಕಿನ್ನಿಗೋಳಿ; ಸೌeನ್ಯ ಹತ್ಯಾ ಪ್ರಕರಣದಲ್ಲಿ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಸಿಬಿಐ ತನಿಖೆಯೇ ಸೂಕ್ತ. ಹಳ್ಳಿ ಹಳ್ಳಿಗಳಲ್ಲಿ ಇಂದು ಸೌಜನ್ಯಾಪರ ಧ್ವನಿ ಮೊಳಗುತ್ತಿದೆ. ರಾಜ್ಯದಿಂದ ರಾಷ್ಟ್ರಮಟ್ಟದಲ್ಲಿ ಹೋರಾಟ ಕಿಡಿ ಹೆಚ್ಚುತ್ತಿದೆ ಎಂದು ಕೇಮಾರು ಸಾಂಧೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಕಿನ್ನಿಗೋಳಿ ಮುಖ್ಯರಸ್ತೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಸಂತ ಮಂಟಪದಲ್ಲಿ ಗುರುವಾರ ನಡೆದ ಸೌಜನ್ಯಾ ಹತ್ಯಾ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಮನುಷ್ಯನಿಗೆ ಆದರ್ಶ ಗುರಿ ಇರಬೇಕು ನಮ್ಮ ಹೋರಾಟ ಕೇವಲ ತಪ್ಪಿತಸ್ಥರ ವಿರುದ್ಧ ಮಾತ್ರ. ಜನರು ದೇಶದ ಕಾನೂನು ವ್ಯವಸ್ಥೆಗಳನ್ನು ತುಳಿಯುವ ಕೆಲಸ ಮಾಡಬಾರದು. ಸೌಜನ್ಯಾ ಹತ್ಯಾ ಪ್ರಕರಣದ ನ್ಯಾಯಕ್ಕಾಗಿ ಇಂದು ಅಂತರ್ಜಾಲದಲ್ಲಿಯೂ ಹೋರಾಟದ ಬಗ್ಗೆ ಯುವಜನತೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ, ವಸಂತ ಬಂಗೇರ ಹಾಗೂ ಶಕುಂತಲಾ ಶೆಟ್ಟಿಯವರು ಮಾತ್ರ ಈ ಪ್ರಕರಣದ ಬಗ್ಗೆ ಮಾತನಾಡಿದ್ದು ಬಿಟ್ಟರೇ ಉಳಿದ ಜನಪ್ರತಿನಿಧಿಗಳ ಮೌನಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು ಈ ಹೋರಾಟ ಧರ್ಮ ಪಕ್ಷಪಾತಿ ಹಾಗೂ ಅನ್ಯಾಯದ ವಿರುದ್ಧ ಹೋರಾಟವಾಗಿದ್ದು, ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಶಾಂತಿಯುತ ಹೋರಾಟ ಮಾಡೋಣ ಶಾಂತಿ ಮಂತ್ರ ಕ್ರಾಂತಿಯಾಗುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದರು.
ನಾಗರಿಕ ಸೇವಾ ಟ್ರಸ್ಟ್‌ನ ವಿಷ್ಣು ಮೂರ್ತಿ ಮಾತನಾಡಿ ಪ್ರತಿಯೊಂದು ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಾಪಿತ ಹಿತಾಸಕ್ತಿಗಳು ಕಾರಣ, ಇದರ ವಿರುದ್ಧ ಹೋರಾಟ ಮಾಡಿದವರನ್ನೇ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಶ್ರೀಮಂತರಿಗೊಂದು ಕಾನೂನು ಬಡವರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ಸೌಜನ್ಯಾಳ ತಾಯಿ ಕುಸುಮಾವತಿ ತಮ್ಮ ಮಗಳನ್ನು ಕಳೆದುಕೊಂಡ ನೋವನ್ನು ಬಾವುಕರಾಗಿ ಹೇಳಿಕೊಂಡರು.
ಜೊಸ್ಸಿ ಪಿಂಟೋ ಪ್ರಸ್ತಾವಿಕವಾಗಿ ಮಾತನಾಡಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿ ಜನಾರ್ದನ ಕಿಲೆಂಜೂರು ವಂದಿಸಿದರು. ಕಾರ್ಯಕ್ರಮದ ಮೊದಲು ಹಲವಾರು ವರ್ತಕರು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ಒಂದು ಗಂಟೆ ಅಂಗಡಿ ಮುಂಗಟ್ಟುಗಳನ್ನು ಶಾಂತಿಯುತವಾಗಿ ಬಂದ್ ನಡೆಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಸಾವಿರ ಕಾರ್ಡ್ ರವಾನೆ..
ಈ ಪ್ರತಿಭಟನೆಯಲ್ಲಿ ಸೌಜನ್ಯಾ ಪ್ರಕರಣದ ತನಿಖೆಯು ನ್ಯಾಯಯುತವಾಗಿ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಪೊಸ್ಟ್‌ಕಾರ್ಡ್ ಚಳುವಳಿಯಲ್ಲಿ ಒಂದು ಸಾವಿರ ಕಾರ್ಡ್‌ನ್ನು ಮುಖ್ಯಮಂತ್ರಿಗೆ ರವಾನಿಸಲಾಯಿತು.

Kinnigoli31101320 Kinnigoli31101318Kinnigoli31101325 Kinnigoli31101321 Kinnigoli31101322 Kinnigoli31101323 Kinnigoli31101324
Kinnigoli31101319

Comments

comments

Comments are closed.

Read previous post:
Kinnigoli31101317
ಕಂಬಳ ಕ್ರೀಡೆಯಲ್ಲಿ ರಾಜೋತ್ಸವ ಪ್ರಶಸ್ತಿ

Narendra Kerekadu ಮೂಲ್ಕಿ: ಪವಿತ್ರವಾದ ತುಳುನಾಡಿನ ಪುಣ್ಯ ಭೂಮಿಯಾದ ಮೂಲ್ಕಿಯ ಮಣ್ಣು ಅಷ್ಟೇ ಶ್ರೇಷ್ಠವಾಗಿದ್ದು, ಕಂಬಳ ಕ್ರೀಡೆಗಾಗಿ ವಿಶೇಷ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಮೂಲ್ಕಿಯ ಸಮಸ್ತ ಜನತೆಗೆ ಸಲ್ಲುವಂತಾಗಿದೆ,...

Close