ಎಲ್ಲಾ ಮತಧರ್ಮದವರಿಗೂ ಬೆಳಕು ಒಂದೇ

ಕಿನ್ನಿಗೋಳಿ: ತಂದೆತಾಯಿ ಗುರುಹಿರಿಯರನ್ನು ಗೌರವಿಸಿ, ಸಮಾಜಕ್ಕೆ ಒಳಿತನ್ನು ಮಾಡಿದಾಗ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಎಲ್ಲಾ ಮತಧರ್ಮದವರಿಗೂ ಬೆಳಕು ಒಂದೇ. ದೇವರು ಒಬ್ಬನೇ. ಮನಸ್ಸಿನ ಕತ್ತಲೆ ದೂರವಾಗಿ ಸಮಾಜಕ್ಕೆ ಬೆಳಕನ್ನು ನೀಡುವುದೇ ದೀಪಾವಳಿಯ ಸಂದೇಶ ಬೆಳಕು ಅಂದರೆ ದೇವರು. ಅನ್ಯೋನ್ಯತೆ, ಪ್ರೀತಿ ಸೌಹಾರ್ದತೆ, ಸಂಸ್ಕಾರ ಕಲಿಯಲು ಹಬ್ಬಗಳ ಆಚರಣೆ ನಿರಂತರವಾಗಿ ನಡೆಯಬೇಕು ಎಂದು ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಸಂಚಾಲಕ ಫಾ| ಆಲ್ಫ್ರೆಡ್ ಜೆ. ಪಿಂಟೋ ಹೇಳಿದರು.
ಗುರುವಾರ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಆಯೋಜಿಸಿದ ದೀಪಾವಳಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮ ಗುರು ಫಾ| ವಿನೋದ್ ಲೋಬೊ ಪ್ರಸ್ತಾವನೆಗೈದರು,
ಯುಗಪುರುಷದ ಭುವನಾಭಿರಾಮ ಉಡುಪ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರುಡಾಲ್ಫ್ ಫೆರ್ನಾಂಡೀಸ್, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಇಸಬೆಲ್ಲಾ ಪಿಂಟೋ, ಅನಿತಾ ಸೆರಾವೊ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ದೀಪಾವಳಿಯ ಬಗ್ಗೆ ವೈವಿದ್ಯಮಯ ಕಾರ್ಯಕ್ರಮ ನೀಡಿದರು.

Kinnigoli31101306

Kinnigoli31101307

Kinnigoli31101308

Kinnigoli31101309

Kinnigoli31101310

Kinnigoli31101311

Kinnigoli31101312

Comments

comments

Comments are closed.

Read previous post:
Kinnigoli31101305
ಜೀವ ರಕ್ಷಣೆಗೆ ಮಿಗಿಲಾದ ಸೇವೆ ಇಲ್ಲ

ಕಿನ್ನಿಗೋಳಿ: ಜೀವ ರಕ್ಷಣೆಗೆ ಮಿಗಿಲಾದ ಸೇವೆ ಇಲ್ಲ. ಜನರ ಆರೋಗ್ಯ ರಕ್ಷಣೆ, ಸ್ವಚ್ಛ ಪರಿಸರ ಕಾಪಾಡುವಲ್ಲಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುವಲ್ಲಿ ಸಂಸ್ಥೆಗಳು ಮುತುವರ್ಜಿ ವಹಿಸಬೇಕು...

Close