ಜೀವ ರಕ್ಷಣೆಗೆ ಮಿಗಿಲಾದ ಸೇವೆ ಇಲ್ಲ

ಕಿನ್ನಿಗೋಳಿ: ಜೀವ ರಕ್ಷಣೆಗೆ ಮಿಗಿಲಾದ ಸೇವೆ ಇಲ್ಲ. ಜನರ ಆರೋಗ್ಯ ರಕ್ಷಣೆ, ಸ್ವಚ್ಛ ಪರಿಸರ ಕಾಪಾಡುವಲ್ಲಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುವಲ್ಲಿ ಸಂಸ್ಥೆಗಳು ಮುತುವರ್ಜಿ ವಹಿಸಬೇಕು ಎಂದು ಮಂಗಳೂರು ಶ್ಯಾಮ ರಾವ್ ಪೌಂಡೇಶನ್ ಅಧ್ಯಕ್ಷ ಸಿ.ಎ. ರಾಘವೇಂದ್ರ ರಾವ್ ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ, ವಿಪ್ರ ಸಂಪದ ಪುನರೂರು ನೇತೃತ್ವದಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕ ಇವರ ವತಿಯಿಂದ ಬುಧವಾರ ಪುನರೂರು ದೇವಳ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಡು ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಧರ್ಮದರ್ಶಿ ಪಠೇಲ್ ವೆಂಕಟೇಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಕರಾವಳಿ ಬ್ರಾಹ್ಮಣರ ಸಂಘ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ಆಸ್ಪತ್ರೆಯ ಎಲುಬು ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ| ರಾಮಚಂದ್ರ ರಾವ್ ಆರೋಗ್ಯ ಕಾರ್ಡಿನ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ಕರಾವಳಿ ಬ್ರಾಹ್ಮಣರ ಸಂಘ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಆಸ್ರಣ್ಣ, ಮಂಗಳೂರು ಶ್ಯಾಮ ರಾವ್ ಪೌಂಡೇಶನ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಮುಕ್ಕ ಶ್ರೀನಿವಾಸ ಆಸ್ಪತ್ರೆಯ ನಿರ್ದೇಶಕ ಎಂ. ಆರ್ ವಾಸುದೇವ ರಾವ್, ಯುಗಪುರುಷದ ಭುವನಾಭಿರಾಮ ಉಡುಪ, ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್ ಉಪಸ್ಥಿತರಿದ್ದರು.
ಪುನರೂರು ವಿಪ್ರ ಸಂಪದ ಗೌರವಾಧ್ಯಕ್ಷ ಪಠೇಲ್ ವಾಸುದೇವ ರಾವ್ ಸ್ವಾಗತಿಸಿದರು, ಕಾರ್ಯದರ್ಶಿ ಸುಧಾಕರ ರಾವ್ ಪ್ರಸ್ತಾವನೆಗೈದರು, ರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli31101305

Comments

comments

Comments are closed.

Read previous post:
Kinnigoli31101304
ಮುಲ್ಕಿ ಲಾರಿ ಉರುಳಿ ರಸ್ತೆಗೆ

Yogeesh Pavanje ಸೋಮವಾರ ರಾತ್ರಿ 9 ಗ೦ಟೆ ಸುಮಾರಿಗೆ ಮುಲ್ಕಿ ಬಸ್ಸುನಿಲ್ದಾಣದ ಬಳಿ ಉಡುಪಿಯಿ೦ದ ಮ೦ಗಳೂರು ಕಡೆ ಸಾಗುತ್ತಿದ್ದ ಕ೦ಟೈನರ್ ಲಾರಿಯೊ೦ದು ಎದುರಿನಿ೦ದ ಹೊಗುತ್ತಿದ್ದ ಕಾರೊ೦ದು ಹಠಾತ್ತಾಗಿ...

Close