ಬೆಳ್ಮಣ್ : ಮುಂಡ್ಕೂರು ಶಾಲೆಗೆ ಹಲವು ಪ್ರಶಸ್ತಿ

ಬೆಳ್ಮಣ್ನ:ಬೆಳ್ಮಣ್ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟ ಇತ್ತೀಚೆಗೆ ಪೊಸ್ರಾಲು ಅನುದಾನಿತ ಶಾಲಾ ಆತಿಥ್ಯದಲ್ಲಿ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆದು ಮುಂಡ್ಕೂರಿನ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರ ವೈಯಕ್ತಿಕ ಚಾಂಪಿಯನ್‌ಶಿಪ್ ಸಹಿತ ಹಲವು ಪ್ರಶಸ್ತಿ ಗಳಿಸಿದೆ.
ನೀಕ್ಷಿತಾ ಪೂಂಜಾ ಬಾಲಕಿಯರ ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನಿಯಾಗಿ ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದರೆ,ಗುಣಶ್ರೀ 200 ಮೀಟರ್‌ನಲ್ಲಿ ಪ್ರಥಮ, 80 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ, 100 ಮೀ ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಅನುಷಾ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, ಶೇಖರ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿದರೆ, ಅನುಷಾ , ಗುಣಶ್ರೀ, ರಕ್ಷಿತಾ , ಶ್ರುತಿಕಾ ರನ್ನೊಳಗೊಂಡ ಬಾಲಕಿಯರ ರಿಲೇ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಈ ಮೂಲಕ ಗುಣಶ್ರೀ, ನೀಕ್ಷಿತಾ ಪೂಂಜಾ, ಅನುಷಾ ನವೆಂಬರ್ 8 ರಂದು ಮುದ್ರಾಡಿಯಲ್ಲಿ ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿ ಶಾರದಾ, ದೈಹಿಕ ಶಿಕ್ಷಕಿ ಮಮತಾ ಶರತ್ ಶೆಟ್ಟಿ ಹಾಗೂ ಸಾಲಾಭಿವೃದ್ಧಿ ಸಮಿತಿಯ ಆಧ್ಯಕ್ಷ ಕರುಣಾಕರ ಶೆಟ್ಟಿಯವರ ಜತೆ ವಿಜೇತ ವಿದ್ಯಾರ್ಥಿಗಳು.

Kinnigoli1111301

Comments

comments

Comments are closed.

Read previous post:
Mobile-diya-live-animated-picture
Wishing You Happy Diwali

Wishing You Happy Diwali

Close