ಮೂಲ್ಕಿ: ದಿ| ಇಂದಿರಾ ಗಾಂದಿ 29 ನೇ ಪುಣ್ಯತಿಥಿ

Bhagyavan Sanil
ಮೂಲ್ಕಿ:ಗ್ರಾಮೀಣ ಬಡವರ್ಗದ ಜನರ ಉದ್ದಾರಕ್ಕಾಗಿ ವಿಧ ಯೋಜನೆಗಳಮೂಲಕ ಜನಮೆಚ್ಚಿದ ನಾಯಕಿಯಾಗಿ ವಿಶ್ವದಲ್ಲಿ ಅಗ್ರಗಣ್ಯರೆನಿಸಿದ ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿಯ ನಿಲುವು ಹಾಗೂ ನಡೆ ನಮಗೆಲ್ಲಾ ದಾರಿದೀಪ ಎಂದು ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರೋಜಿನಿ ಸುವರ್ಣ ಹೇಳಿದರು.
ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿಯವರ 29ನೇ ಪುಣ್ಯತಿಥಿಯ ಪ್ರಯುಕ್ತ ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಗುರುವಾರ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಹೂ ಹಾರ ಹಾಕಿ ದೀಪಬೆಳಗಿಸಿ ಆಚರಿಸಿದ ಸಂದರ್ಭ ಮಾತನಾಡಿದರು.
ಮಹಿಳಾ ಕಾಂಗ್ರೆಸ್ ಗೌರವಾಧ್ಯಕ್ಷೆ ಮನೋರಮ ಹೆನ್ರಿ ಪ್ರಸ್ತಾವಿಕ ವಾಗಿ ಮಾತನಾಡಿದರು. ನಂದಾ ಪಾಸ್ ನಿರೂಪಿಸಿದರು. ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶಾರದ ವಿ ಪೂಜಾರಿ ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Kinnigoli1111304

Comments

comments

Comments are closed.

Read previous post:
Kinnigoli1111303
ಮೂಲ್ಕಿ: ಸತ್ಯನಾರಾಯಣ ಪೂಜೆಗಾಗಿ ಶ್ರೀದೇವರ ಮೆರವಣಿಗೆ

Bhagyavan Sanil ಮೂಲ್ಕಿ: ಕೋಟೆಕೇರಿ ನವದುರ್ಗಾಯುವಕ ವೃಂದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥ ಶುಕ್ರವಾರ ನಡೆಯಲಿರುವ ಶ್ರೀ ಸತ್ಯನಾರಾಯಣ ಪೂಜೆಗಾಗಿ ಶ್ರೀದೇವರ ಚಿತ್ರವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದ ಮೆರವಣಿಗೆಯಲ್ಲಿ...

Close