ಮೂಲ್ಕಿ:ವಿದ್ಯಾರ್ಥಿಗಳಲ್ಲಿ ಪರಿಸರ, ಭ್ರಷ್ಟಾಚಾರ ಮಾಹಿತಿ

Bhagyavan Sanil
ಮೂಲ್ಕಿ:ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಆಸಕ್ತಿ ಹಾಗೂ ಮಾಹಿತಿ ಹೆಚ್ಚಲು ಮೂಲ್ಕಿ ನಗರ ಪಂಚಾಯತ್ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿವೆ ಎಂದು ಮೂಲ್ಕಿ ನಪಂ.ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಹೇಳಿದರು.
ಶುಕ್ರವಾರ ಮೂಲ್ಕಿ ನಪಂ ಸಭಾಂಗಣದಲ್ಲಿ ರಾಜ್ಯೋತ್ಸವ ಪ್ರಯುಕ್ತ ಭ್ರಷ್ಠಾಚಾರ ವಿರುದ್ದ ಜಾಗ್ರತಿ ಸಪ್ತಾಹ ಪ್ರಯುಕ್ತ ನಡೆಸಲಾದ ಪ್ರತಿಭಾ ಸ್ಪರ್ದೆಗಳ ಬಹುಮಾನ ವಿತರಿಸಿ ಮಾತನಾಡಿದರು.
ಕಾರ್ಯಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶತೆಗಾಗಿ ಸರ್ಕಾರಿ ನೌಕರರು ಪ್ರತಿಜ್ಞೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ವಹಿಸಿದ್ದರು. ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ.ಸಾಲ್ಯಾನ್,ಸದಸ್ಯ ಪುರುಷೊತ್ತಮ ರಾವ್,ಕಂದಾಯ ನಿರೀಕ್ಷಕ ಅಶೋಕ, ನಪಂ.ಇಂಜಿನಿಯರ್ ದಿನೇಶ್,ಸಿಬ್ಬಂದಿಗಳಾದ ಶಶಿಕಲಾ, ಪ್ರಸನ್ನ, ಮಾಲತಿ, ಸದಾಶಿವ, ಪ್ರಕಾಶ್, ಮತ್ತಿತರರು ಉಪಸ್ಥಿತರಿದ್ದರು.

ಭಾಷಣ ಸ್ಪರ್ಧೆ: ಪ್ರಥಮ: ಸೌಜನ್ಯ ಕೆ.ಪೂಜಾರಿ ದ್ವಿತೀಯ ಪಿ.ಯು.ಸಿ. ನಾರಾಯಣಗುರು ಪದವಿ ಪೂರ್ವ ಕಾಲೇಜು ಮೂಲ್ಕಿ, ದ್ವಿತೀಯ: ಸೋನಿಯಾ ಡಿ ಸೋಜ ದ್ವಿತೀಯ ಪಿ.ಯು.ಸಿ. ನಾರಾಯಣಗುರು ಪದವಿ ಪೂರ್ವ ಕಾಲೇಜು ಮೂಲ್ಕಿ, ತೃತೀಯ: ಧನುಷ್ ದ್ವಿತೀಯ ಪಿ.ಯು.ಸಿ. ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ, ಪ್ರಬಂಧ ಸ್ಪರ್ಧೆ: ಪ್ರಥಮ: ಸುಶ್ಮಿತಾ ಕೆ. 10ನೇ ತರಗತಿ ಮೆಡಲಿನ್ ಪ್ರೌಢಶಾಲೆ ಮೂಲ್ಕಿ, ದ್ವಿತೀಯ: ಕಲ್ಪಿತ 8ನೇ ತರಗತಿ ಸರಕಾರಿ ಪ್ರೌಢಶಾಲೆ ಮೂಲ್ಕಿ, ತೃತೀಯ: ಸ್ವಾತಿ 10ನೇ ತರಗತಿ ಸರಕಾರಿ ಪ್ರೌಢಶಾಲೆ ಮೂಲ್ಕಿ, ವರ್ಣ ಚಿತ್ರ ಸ್ಪರ್ಧೆ: ಪ್ರಥಮ: ನಾಗರತ್ನ 7ನೇ ತರಗತಿ ಸರಕಾರಿ ಪ್ರೌಢಶಾಲೆ ಮೂಲ್ಕಿ,  ದ್ವಿತೀಯ: ರಕ್ಷ ವಿ.ಶೆಟ್ಟಿ 7ನೇ ತರಗತಿ ಸರಕಾರಿ ಪ್ರೌಢಶಾಲೆ ಮೂಲ್ಕಿ, ತೃತೀಯ: ಕೌಶಿಕ್ 7ನೇ ತರಗತಿ ಮೆಡಲಿನ್ ಪ್ರೌಢಶಾಲೆ ಮೂಲ್ಕಿ.

Kinnigoli1111302

Comments

comments

Comments are closed.

Read previous post:
Kinnigoli1111301
ಬೆಳ್ಮಣ್ : ಮುಂಡ್ಕೂರು ಶಾಲೆಗೆ ಹಲವು ಪ್ರಶಸ್ತಿ

ಬೆಳ್ಮಣ್ನ:ಬೆಳ್ಮಣ್ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟ ಇತ್ತೀಚೆಗೆ ಪೊಸ್ರಾಲು ಅನುದಾನಿತ ಶಾಲಾ ಆತಿಥ್ಯದಲ್ಲಿ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆದು ಮುಂಡ್ಕೂರಿನ ಉಡುಪಿ...

Close