ಕಿನ್ನಿಗೋಳಿ: ವಿದ್ವಾನ್ ಪೆರ್ಲ ಕೃಷ್ಣ ಭಟ್ಟ ಸಂಸ್ಮರಣೆ

ಕಿನ್ನಿಗೋಳಿ: ವಿದ್ವಾನ್ ಪೆರ್ಲ ಕೃಷ್ಣ ಭಟ್ಟರು ಸಂಸ್ಕೃತ ಮತ್ತು ಹಿಂದಿ ಭಾಷಾ ಪಂಡಿತರಾಗಿ, ಅಧ್ಯಾಪಕ, ಯಕ್ಷಗಾನ ಅರ್ಥಧಾರಿ, ಭಾಷಣಕಾರ, ಉತ್ತಮ ಲೇಖಕ, ಹಲವಾರು ಸಾಧನೆಗಳ ಸರದಾರರಾಗಿ ಯಕ್ಷಗಾನದ ಕಲಾಪ್ರಕಾರವಾದ ತಾಳಮದ್ದಲೆಗೆ ಗೌರವದ, ಪಾಂಡಿತ್ಯದ ಚೌಕಟ್ಟು ನೀಡಿ ಅಚ್ಚುಕಟ್ಟುತನ ಮೆರೆದ ಆದರ್ಶ ವ್ಯಕ್ತಿತ್ವ ಹೊಂದಿದವರು ಎಂದು ಪ್ರೋ. ಎಂ. ಲಕ್ಷ್ಮೀನಾರಾಯಣ ಸಾಮಗ ಹೇಳಿದರು.
ಶುಕ್ರವಾರ ಕಿನ್ನಿಗೋಳಿಯ ಯಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಹಾಗೂ ಯುಗಪುರುಷ ಸಂಸ್ಥೆಗಳ ಸಹಯೋಗದಲ್ಲಿ ವಿದ್ವಾನ್ ದಿ| ಪೆರ್ಲ ಕೃಷ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಡಬಿದ್ರಿ ಧನಲಕ್ಷ್ಮೀ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಮಾಲಕ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಕೆ. ಮಂಜುನಾಥ ಮಲ್ಯ, ಯಕ್ಷಲಹರಿಯ ಕಾರ್ಯದರ್ಶಿ ಶ್ರೀಧರ ಡಿ.ಎಸ್., ಉಪಸ್ಥಿತರಿದ್ದರು.
ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿದರು. ಯುಗಪುರುಷ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಎಂ. ಆರ್ ವಾಸುದೇವ ಸಾಮಗ ಸಂಚಾಲಕತ್ವದ ಸಂ.ಯ.ಮಂ. ಕೋಟೇಶ್ವರ ಅವರಿಂದ “ಸತ್ವ ಪರೀಕ್ಷೆ” ಎಂಬ ತಾಳಮದ್ದಲೆ ನಡೆಯಿತು.

Kinnigoli2111303

Comments

comments

Comments are closed.

Read previous post:
Kinnigoli2111302
ಪಡುಪಣಂಬೂರು ಪರಿಸರದಲ್ಲಿ ಚಿರತೆ ಬೀತಿ

Yogeesh Pavanje ಮುಲ್ಕಿ: ಸಮೀಪದ ಪಡುಪಣಂಬೂರು ಎಂಬಲ್ಲಿ ಎರಡು ದಿನದಿಂದ ಚಿರತೆ ಕಾಣಿಸಿಕೊಂಡಿದ್ದು ಜನರು  ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ, ಕೆಲವರು ಎರಡು ಚಿರತೆ ಕಂಡಿದ್ದೇವೆ ಕೆಲವರು ಮೂರು ಚಿರತೆ...

Close