ಕಿನ್ನಿಗೋಳಿಯಲ್ಲಿ ಯೋಗ ಶಿಬಿರ ಸಮಾರೋಪ

ಕಿನ್ನಿಗೋಳಿ: ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಭಾರತದ ಯೋಗ ಮತ್ತು ಪ್ರಾಣಾಯಾಮ ಪಾಶ್ಚಾತ್ಯರಿಂದಲೂ ಪ್ರಶಂಸೆಗೆ ಒಳಪಟ್ಟ ರೋಗನಿವಾರಕ ವ್ಯಾಯಾಮವಾಗಿದೆ. ನಮ್ಮ ಜೀವನ ಪದ್ಧತಿಯಲ್ಲಿ ಯೋಗವನ್ನು ರೂಢಿಸಿಕೊಂಡಾಗ ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ ಪಡೆಯಬಹುದು ಎಂದು ಯೋಗಗುರು ಜಯ ಎಮ್. ಶೆಟ್ಟಿ ಕೆಂಚನಕೆರೆ ಹೇಳಿದರು.
ಗುರುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮೂಲ್ಕಿ ಪತಂಜಲಿ ಯೋಗ ಸಮಿತಿ ನಡೆಸಿದ ಉಚಿತ ಪ್ರಾಣಾಯಾಮ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಯೋಗ ಶಿಕ್ಷಕ ಜಯ ಎಮ್. ಶೆಟ್ಟಿ , ಅವರ ಪತ್ನಿ ಗೀತಾ ಶೆಟ್ಟಿ , ಸೋನಾಲಿ ಶೆಟ್ಟಿ , ಯುಗಪುರುಷದ ಭುವನಾಭಿರಾಮ ಉಡುಪ, ಯೋಗ ಶಿಕ್ಷಕರಾದ ಶ್ರೀ ಎನ್. ಪಿ. ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ರಾಜೇಂದ್ರ ಸ್ಟೀವನ್ ಸಿಕ್ವೇರಾ, ಪ್ರಕಾಶ್ ಶೆಟ್ಟಿ , ಬಬಿತಾ ಶೆಟ್ಟಿ , ರಾಘವೇಂದ್ರ ಪ್ರಭು, ಬಿ. ಡಿ.ರಾಮಚಂದ್ರ ಆಚಾರ್ಯ,ಕೆಂಚನಕೆರೆ ಯೋಗ ಶಾಲೆಯ ಸಹಶಿಕ್ಷಕರಾದ ಶಶಿಧರ ಕಾಮತ್, ಜಯ ಕುಮಾರ್, ಜಯ ಸಾಲ್ಯಾನ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶರತ್ ವಂದಿಸಿದರು.

Kinnigoli2111301

Comments

comments

Comments are closed.

Read previous post:
Kinnigoli1111306
ಕರ್ನಾಟಕ ರಾಜ್ಯೋತ್ಸವ- ಹಣ್ಣುಹಂಪಲು ವಿತರಣೆ

Yogeesh Pavanje ಮುಲ್ಕಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಯುವತಿ ಮಂಡಲ, ಮಹಿಳಾ ಮಂಡಲ ಹಳೆಯಂಗಡಿ ಇದರ ಆಶ್ರಯದಲ್ಲಿ ಮುಲ್ಕಿ ಸಮುದಾಯ ಆರೋಗ್ಯ...

Close