ಕಟೀಲು: ಸಹಕಾರಿ ಬ್ಯಾಂಕ್‌ ಕಛೇರಿ ಉದ್ಘಾಟನೆ

Bhagyavan Sanil

ಮೂಲ್ಕಿ: ಗ್ರಾಮೀಣ ಪ್ರಧೇಶದ ಜನರ ಆರ್ಥಿಕ ಸವಲತ್ತುಗಳನ್ನು ಉನ್ನತಿಗೊಳಿಸುವುದಲ್ಲಿ ಸಹಕಾರಿ ಬ್ಯಾಂಕುಗಳ ಕಾರ್ಯ ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಕೆ.ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಕಟೀಲು ನಂದಿನಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್‌ನ ನೂತನ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೆನ್ನಬೆಟ್ಟು ಗ್ರಾಮ ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು ವಹಿಸಿದ್ದರು. ಮಂಗಳೂರು ಸಹಕಾರಿ ಸಂಘಗಳ ಸಹಾಯಕ ನಿಭಂದಕರಾದ ಎಚ್.ಜಯಪ್ಪ.ಕೈಕಂಬ ಮಾತ್ರಭೂಮಿ ಸಹಕಾರಿ ಸಂಘ ಕಾರ್ಯನಿರ್ವಹಣಾಧಿಕಾರಿ ಶ್ರೀಕೃಷ್ಣ ಕೊಂಪದವು ಉಪಸ್ಥಿತರಿದ್ದರು.
ಕಟೀಲು ನಂದಿನಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ನೀಲಯ್ಯ ಕೋಟ್ಯಾನ್ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ವಂದಿಸಿದರು.

Kinnigoli04111302

Comments

comments

Comments are closed.

Read previous post:
Kinnigoli04111301
ಕೊಯಿಕುಡೆ ಹರಿಪಾದ – ರಸ್ತೆ ಉದ್ಘಾಟನೆ

Bhagyavan Sanil ಮೂಲ್ಕಿ: ಕೊಯಿಕುಡೆ  ಹರಿಪಾದ ನೂತನ ಕಾಮಕ್ರೀಟ್ ರಸ್ತೆಯನ್ನು ವಿಧಾನ ಸಭಾ ಸದಸ್ಯ ಗಣೇಶ್ ಕಾರ್ನಿಕ್ ಹಾಗೂ ಜಿಪಂ ಸದಸ್ಯ ಈಶ್ವರ ಕಟೀಲು ಅನುದಾನದಲ್ಲಿ ಸುಮಾರು 7ಲಕ್ಷರೂ...

Close