ಸೌಜನ್ಯಾ ಪರ ರಕ್ತ ಕ್ರಾಂತಿಗೂ ಸಜ್ಜಾಗಿದ್ದೇವೆ; ತಿಮರೋಡಿ

Narendra Kerekadu and Reshma Studio
ಮೂಲ್ಕಿ; ಧರ್ಮರಕ್ಷಕರನ್ನೇ ಧರ್ಮಾಧಿಕಾರಿಗಳು ದಮನಿಸಲು ಪ್ರಯತ್ನ ನಡೆಸುತ್ತಿರುವುದು ಖಂಡನೀಯ, ಸೌಜನ್ಯಾ ಪ್ರಕರಣದಲ್ಲಿ ಸಲ್ಲಿಸಿರುವ ಸಿಒಡಿ ವರದಿಯೇ ನಕಲಿಯಾಗಿದ್ದು ತನಿಖಾಧಿಕಾರಿಗಳು ದೊಡ್ಡವರ ಅಣತಿಯಂತೆ ವರದಿಯನ್ನು ನೀಡಿದ್ದಾರೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಸುಪರ್ದಿಯಲ್ಲಿಯೇ ಮರು ತನಿಖೆ ನಡೆಸಬೇಕು ನ್ಯಾಯಕ್ಕಾಗಿ ರಕ್ತಕ್ರಾಂತಿ ಆದರೂ ನಾವು ಹಿಂದೆ ಬೀಳುವುದಿಲ್ಲ ಎಂದು ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಮೂಲ್ಕಿಯ ನಾಗರಿಕ ವೇದಿಕೆಯ ಸಂಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 99 ರಲ್ಲಿ ಲಲಿತ್ ಮಹಲ್ ಬಳಿ ಸೌಜನ್ಯಾ ಹತ್ಯಾ ಪ್ರಕರಣದ ಸೂಕ್ತ ತನಿಖೆಯನ್ನು ನಡೆಸಬೇಕು ಎಂದು ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಸೌಜನ್ಯಾ ಹತ್ಯಾ ಪ್ರಕರಣದಲ್ಲಿ ಪೊಲೀಸ್ ಇಲಾಖೆಯು ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ ಅಧಿಕಾರಿಗಳ ನಿಷ್ಕ್ರೀಯತೆ ಹಾಗೂ ಪಾಳೆಗಾರಿಕೆಯ ಕುತಂತ್ರದಿಂದಾಗಿ ಸೌಜನ್ಯಾಳಂತಹ ಅನೇಕ ಪ್ರಕರಣಗಳು ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿಲ್ಲ. ಸತ್ಯವನ್ನು ದಮನಿಸುವ ಯಾವ ರಾಜಕೀಯ ಷಡ್ಯಂತ್ರ ಅಥವ ಕೃತ್ಯಗಳು ಸಹ ಇನ್ನು ಮುಂದೆ ನಡೆಯುವುದಿಲ್ಲ ಧರ್ಮಸ್ಥಳದ ದೇವತೆಗಳೇ ನಮಗೆ ರಕ್ಷಣೆ ನೀಡುತ್ತಿದೆ ಎಂದು ಹೇಳಿದರು.
ಕೆಮಾರು ಸಾಂಧೀಪನಿ ಸಾಧನಾಶ್ರಮದ ಈಶ ವಿಠಲ ದಾಸ ಸ್ವಾಮೀಜಿ ಮಾತನಾಡಿ ನಮ್ಮ ಈ ಹೋರಾಟವು ದುಷ್ಟ ಅಧಿಕಾರಿಗಳು ಹಾಗೂ ನೈಜ ಆರೋಪಿಗಳ ವಿರುದ್ಧವೇ ಹೊರತು ಯಾವುದೇ ವ್ಯಕ್ತ ಅಥವ ಕ್ಷೇತ್ರದ ವಿರುದ್ಧ ಅಲ್ಲ, ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ನಡೆದಲ್ಲಿ ಜನರೇ ಅದಕ್ಕೆ ಉತ್ತರಿಸುವ ದಿನ ದೂರವಿಲ್ಲ ಎಂದರು.
ಸೌಜನ್ಯಾಳ ತಾಯಿ ಕುಸುಮಾವತಿ ಮಾತನಾಡಿ ನ್ಯಾಯಕ್ಕಾಗಿ ಹೋರಾಟ ನಡೆಸಲು ಜಿಲ್ಲೆಯಾದ್ಯಂತ ನಾವು ವಿವಿಧ ಪ್ರತಿಭಟನೆಗಳಿಗೆ ತೆರಳಿದರೆ ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಸತ್ತ ನನ್ನ ಮಗಳ ನ್ಯಾಯಯುತ ಬೇಡಿಕೆಯನ್ನು ನಡೆಸುವುದು ಅಪರಾದವೇ ಎಂದು ಕಣ್ಣೀರು ಹಾಕಿದರು.
ನಾಗರಿಕ ಸಮಿತಿಯ ಅಧ್ಯಕ್ಷ ವಿನೋದ್ ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು, ಸೌಜನ್ಯಳ ತಂದೆ ಚಂದಪ್ಪ ಗೌಡ ಉಪಸ್ಥಿತರಿದ್ದರು. ಉಮೇಶ್ ಮಾನಂಪಾಡಿ ಕಾರ್ಯಕ್ರಮ ನಿರೂಪಿಸಿದರು, ನವೀನ್ ಬಪ್ಪನಾಡು ವಂದಿಸಿದರು.
ಪ್ರತಿಭಟನೆಯ ಸಂದರ್ಭ ಮೂಲ್ಕಿಯ ಆಸುಪಾಸಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿದ್ದರು. ರಿಕ್ಷಾ ಮತ್ತು ಕಾರು ಚಾಲಕರು ತಮ್ಮ ವಾಹನವನ್ನು ಸ್ಥಗಿತಗೊಳಿಸಿ ಹರತಾಳ ನಡೆಸಿದರು.

Kinnigoli04111305 Kinnigoli04111306 Kinnigoli04111307 Kinnigoli04111308 Kinnigoli04111310 Kinnigoli04111311

 

Comments

comments

Comments are closed.

Read previous post:
Kinnigoli04111304
ರಾಜ್ಯೋತ್ಸವ ಪ್ರಶಸ್ತಿ-ಮೂಲ್ಕಿ ಪೈಯೊಟ್ಟು ಸದಾಶಿವ ಸಾಲ್ಯಾನ್

Bhagyavan Sanil ಮೂಲ್ಕಿ: ಗ್ರಾಮೀಣ ಕ್ರೀಡೆ ಕಂಬಳ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಮೂಲ್ಕಿ ಪೈಯೊಟ್ಟು ಸದಾಶಿವ ಸಾಲ್ಯಾನ್ ರವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನೀಡಿದರು.

Close