ಮೂಲ್ಕಿ- ಬಿಲ್ಲವ ಸಂಘದ ತುಳುವೆರೆ ತುಡರ ಪರ್ಬ

Bhagyawan Sanil

ಮೂಲ್ಕಿ:ಇನ್ನೊಬ್ಬರ ಸುಖಃದಿಂದ ಸಂತೋಷ ಪಟ್ಟ ಸಂಘಟಿತರಾಗಿ ಬದುಕುವಂತೆ ಎಲ್ಲಾ ಧರ್ಮಗಳು ಭೋಧಿಸುತ್ತಿದ್ದರು ಜನರು ಜಾತಿ ಮತ ಧರ್ಮದ ಅಂತರದಲ್ಲಿ ಭಯೋತ್ಪಾದನೆ ಪೂಜಾ ಕೇಂದ್ರಗಳ ನಾಶಕ್ಕೆ ಇಳಿದಿರುವುದು ಅಕ್ಷಮ್ಯ ಅಫರಾಧ ಎಂದು ಉಡುಪಿ ಫಾರಂ ಫಾರ್ ಹ್ಯುಮಾನಿಟಿ ಸಂಚಾಲಕರಾದ ಯಾಸಿನ್ ಮಲ್ಪೆ ಹೇಳಿದರು
ಶನಿವಾರ ಮೂಲ್ಕಿ ಬಿಲ್ಲವ ಸಂಘದಲ್ಲಿ ಯುವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ತುಳುವೆರೆ ತುಡರ ಪರ್ಬದ ಅತಿಥಿಯಾಗಿ ಮಾತನಾಡಿದರು.
ಅತಿಥಿಯಮಾಗಿದ್ದ ಉಡುಪಿ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷ ಪಿ.ಕೆ.ಸದಾನಂದ ಮಾತನಾಡಿ, ಕ್ರಷಿಕ ವರ್ಗದಲ್ಲಿ ಯಾವುದೇ ಮತ ಧರ್ಮ ಜಾತಿಯ ಚೌಕಟ್ಟಿಲ್ಲ ಕೃಷಿಕರು ತಮ್ಮ ಕೃಷಿಗೆ ಸಹಕರಿಸುವ ಪಶುಗಳು ಪ್ರಕೃತಿ ಹಾಗೂ ಇತರ ಸಲಕರಣೆಗಳು ಉತ್ತಮ ಫಸಲನ್ನು ದೊರಕಿಸಿಕೊಟ್ಟಿದಕ್ಕಾಗಿ ಕೃತಜ್ಞತೆ ಸೂಚಿಸುವ ಹಬ್ದವೇ ದೀಪಾವಳಿ ಎಂದು ಹಬ್ಬದ ಆಚರಣೆಯ ಬಗ್ಗೆ ಸ್ತೂಲ ಮಾಹಿತಿ ನೀಡಿದರು.
ಮೂಲ್ಕಿ ಡಿವೈನ್ ಕಾಲ್ ಸೆಂಟರ್ ಸುಪೀರಿಯರ್ ಫಾ.ಅಬ್ರಹಾಂ ಡಿಸೋಜ ಮಾತನಾಡಿ ಎಲ್ಲಾ ಧರ್ಮದ ಜನರು ಒಂದೇ ವೇದಿಕೆಯಲ್ಲಿ ದೀಪಾವಳಿಯ ಬಗ್ಗೆ ಮಾಹಿತಿ ನೀಡುವುದು ಹಬ್ಬಕ್ಕೆ ಉತ್ತಮ ಅರ್ಥ ತರುತ್ತಿದೆ ಈ ನಿಟ್ಟಿನಲ್ಲಿ ಮೂಲ್ಕಿ ಯುವಾಹಿನಿ ಕಾರ್ಯ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಯುವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರವಿಚಂದ್ರ ವಹಿಸಿ ಶುಭ ಹಾರೈಸಿದರು.
ಈ ಸಂದರ್ಭ ಹಿರಿಯ ಕಲಾವಿದ ಭೋಜ.ಸಿ.ಮೀನ್ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸದಾಶಿವ ಸಾಲ್ಯಾನ್ ರವರನ್ನು ಸನ್ಮಾನಿಸಲಾಯುತು.
ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಪ್ರಕಾಶ್ ಸುವರ್ಣ,ಕಾರ್ಯದರ್ಶಿ ರಮಾನಾಥ ಸುವರ್ಣ, ಕಾರ್ಯಕ್ರಮ ನಿರ್ದೇಶಕ ಸತೀಶ್ ಕುಮಾರ್,ಖಜಾಂಜಿ ಗಗನ್ ಸುವರ್ಣ ಉಪಸ್ಥಿತರಿದ್ದರು.
ಪ್ರಕಾಶ್ ಸುವರ್ಣ ಸ್ವಾಗತಿಸಿದರು,ವಿಜಯ ಕುಮಾರ್ ಕುಬೆವೂರು ಪ್ರಸ್ತಾವಿಸಿದರು. ಉದಯ ಅಮೀನ್ ಮಟ್ಟು ನಿರೂಪಿಸಿದರು.

Kinnigoli05111306

Comments

comments

Comments are closed.

Read previous post:
Kinnigoli05111305
ಗುರುವಿನ ಸ್ಥಾನಮಾನ ಶಾಶ್ವತ; ಚಂದ್ರಶೇಖರ ಸ್ವಾಮೀಜಿ

Narendra Kerekadu ಮೂಲ್ಕಿ: ಎಳೆಯ ಮನಸ್ಸುಗಳಿಗೆ ಸಮಾಜದ ಚಿಂತನೆ ಮೂಡಿಸಿ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರುಗಳ ಸ್ಥಾನಮಾನ ಶಾಶ್ವತ. ಶೈಕ್ಷಣಿಕವಾಗಿ ದಾರಿದೀಪವಾಗುವ ಶಿಕ್ಷಕರನ್ನು ನಮ್ಮ ಯಶಸ್ಸಿನ ದಿನಗಳಲ್ಲಿ ನೆನಪಿಸಿ...

Close