ಗುರುವಿನ ಸ್ಥಾನಮಾನ ಶಾಶ್ವತ; ಚಂದ್ರಶೇಖರ ಸ್ವಾಮೀಜಿ

Narendra Kerekadu

ಮೂಲ್ಕಿ: ಎಳೆಯ ಮನಸ್ಸುಗಳಿಗೆ ಸಮಾಜದ ಚಿಂತನೆ ಮೂಡಿಸಿ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರುಗಳ ಸ್ಥಾನಮಾನ ಶಾಶ್ವತ. ಶೈಕ್ಷಣಿಕವಾಗಿ ದಾರಿದೀಪವಾಗುವ ಶಿಕ್ಷಕರನ್ನು ನಮ್ಮ ಯಶಸ್ಸಿನ ದಿನಗಳಲ್ಲಿ ನೆನಪಿಸಿ ಗೌರವಿಸಿದಾಗ ಮುಂದಿನ ಪೀಳಿಗೆಗೆ ಆದರ್ಶರಾಗುತ್ತೇವೆ. ಜೀವ ಉಳಿಸುದ ವೈದ್ಯರನ್ನು ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ಜೀವನದ ಕೊನೇಕ್ಷಣದವರೆಗೂ ಮರೆಯಬಾರದು ಎಂದು ಬೆಂಗಳೂರಿನ ಆಧ್ಯಾತ್ಮಗುರು ಹಾಗೂ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಮೂಲ್ಕಿಯಲ್ಲಿರುವ ಗೇರುಕಟ್ಟೆ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ನಿವೃತ್ತ ವಿಶ್ರಾಂತ ಶಿಕ್ಷಕ ವಿ. ಶ್ರೀಧರರಾವ್ ಅವರನ್ನು ಅವರ ಪಂಜಿನಡ್ಕದ ಸ್ವಗೃಹ ಕೃಷ್ಣವೇಣಿಯಲ್ಲಿ ನಗದು ಪುರಸ್ಕಾರಗಳಿಂದ ದೀಪಾವಳಿಯ ವಿಶೇಷ ಗೌರವ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದರು.
ಆಶ್ರಮದ ಸಂಚಾಲಕ ಹಾಗೂ ದ.ಕ. ವಿಶ್ವಬ್ರಾಹ್ಮಣ ಸಮಾಜ ಒಕ್ಕೂಟದ ಉಪಾಧ್ಯಕ್ಷ ಕಾರ್ನಾಡು ಮಧು ಆಚಾರ್ಯ ಮಾತನಾಡಿ, ಶ್ರೀಧರರಾವ್ ಅವರ ಉತ್ತಮ ಶಿಕ್ಷಣದ ಬಧನೆಯಿಂದ ಇಂದು ಸ್ವಾಮೀಜಿ ಸಹಿತ ಅನೇಕರು ಸಮಾಜದ ಆಸ್ತಿಗಳಾಗಿ ಗುರುತಿಸುವಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿಸಿ ಗ್ರಾಮೀಣ ಮಟ್ಟದಲ್ಲಿ ಶಿಕ್ಷಣರಂಗಕ್ಕೆ ಹೊಸ ಆಯಾಮ ತಂದು ಕೊಟ್ಟವರು ಎಂದು ನೆನಪಿಸಿದರು.
ಕಿಲ್ಪಾಡಿಯ ಪ್ರಸಿದ್ಧ ಜ್ಯೋತಿಷಿ ಗೋವಿಂದ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾರದಮ್ಮ ಗೋವಿಂದ ಭಟ್, ಆಶ್ರಮದ ಸಂಚಾಲಕ ಗಿರೀಶ್ ಕಾಮತ್, ಆದಿತ್ಯಾ ಮೂಲ್ಕಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರರಾವ್ ಅವರ ಪುತ್ರ ಪುನೀತ ಕೃಷ್ಣ ಸ್ವಾಗತಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Kinnigoli05111305

Comments

comments

Comments are closed.

Read previous post:
Kinnigoli05111304
ಮೆನ್ನಬೆಟ್ಟು : ಅಂಗನವಾಡಿ ಕೇಂದ್ರ ಶಂಕು ಸ್ಥಾಪನೆ

ಕಿನ್ನಿಗೋಳಿ : ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯಲ್ಲಿ ಸುವರ್ಣ ಗ್ರಾಮ ಯೋಜನೆಯ ೫೧.೫೦ ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಯಲ್ಲಿ ಕೊಂಡೆಮೂಲ ಗ್ರಾಮದ ಹಾಲಿನ ಡೈರಿ ಸಮೀಪ ಅಂಗನವಾಡಿ ಕೇಂದ್ರದ ಶಂಕು...

Close