ಮೂಲ್ಕಿ- ದಾಖಲೆಯ 500 ಶ್ರಮಿಕರಿಗೆ ವಿಶೇಷ ಗೌರವ

Prakash Suvarna and Narendra Kerekadu

ಮೂಲ್ಕಿ; ಬಿಸಿಲು ಮಳೆ ಗಾಳಿ ಎನ್ನದೇ ಸಾಮಾನ್ಯ ಜನರಿಂದ ಹಿಡಿದು ಸಿರಿವಂತ ಜನರ ಸೇವೆಗೆ ಸದಾ ಮುಡಿಪಾಗಿರುವ ರಿಕ್ಷಾ ಮತ್ತು ಕಾರು ಚಾಲಕರು ನೈಜ ಸಮಾಜ ಸೇವಕರು, ಅವರನ್ನು ಗುರುತಿಸಿ ಗೌರವಿಸಿದಲ್ಲಿ ಇನ್ನಷ್ಟು ಸೇವೆ ನೀಡಲು ಅವರಿಗೆ ಉತ್ಸಾಹ ಹೊರ ಹೊಮ್ಮುತ್ತದೆ. ಶ್ರಮಿಕರನ್ನು ಸಮಾಜವು ಗೌರವಯುತವಾಗಿಯೂ ನಡೆಸಿಕೊಳ್ಳಬೇಕು ಎಂದು ಬೆಂಗಳೂರಿನ ಆಧ್ಯಾತ್ಮ ಗುರು ಹಾಗೂ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಮೂಲ್ಕಿಯ ಕಿಲ್ಪಾಡಿ ಗೇರುಕಟ್ಟೆಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಮೂಲ್ಕಿಯ ಆಸುಪಾಸಿನ ಸುಮಾರು 500 ರಿಕ್ಷಾ ಮತ್ತು ಕಾರು ಚಾಲಕರಿಗೆ ದೀಪಾವಳಿ ಉಡುಗೊರೆಯನ್ನು ಪಡಿತರ ಸಾಮಗ್ರಿಯೊಂದಿಗೆ ವಿತರಿಸಿ ಹಿರಿಯ ಶ್ರಮಿಕ ಚಾಲಕರನ್ನು ಸನ್ಮಾನಿಸಿ ಮಾತನಾಡಿದರು.
ಕಳೆದ 25  ವರ್ಷದಿಂದ ಅಪಘಾತ ರಹಿತವಾಗಿ ರಿಕ್ಷಾ ಚಾಲನೆ ಮಾಡುತ್ತಿರುವ ಕುಟ್ಟಿ ಸುವರ್ಣ, ಕೃಷ್ಣ, ವಾಮನ್ ಸಾಲ್ಯಾನ್, ಭೋಜ ಹೆಜ್ಮಾಡಿ, ರಮೇಶ್ ಆಚಾರ್, ಜನಾರ್ಧನ ಕಿರೋಡಿಯನ್, ಕೇಶವ ಚಿತ್ರಾಪು, ನೂರು ಮಹಮ್ಮದ್, ಎಂ.ಎ.ರೆಹಮಾನ್, ಹಾಗೂ ಕಾರು ಚಾಲಕರಾದ ದಾಮೋದರ ಕೋಟ್ಯಾನ್, ಕೇಶವ ಅಮಿನ್, ಸುಲೈಮಾನ್‌ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಜನಿ ಚಂದ್ರಶೇಖರ್, ಕಾರ್ಯಕ್ರಮದ ಸಂಚಾಲಕ ಮಧು ಆಚಾರ್ಯ ಕಾರ್ನಾಡು ಇನ್ನಿತರರು ಉಪಸ್ಥಿತರಿದ್ದರು.
ಮೂಲ್ಕಿ ಖ್ಯಾತ ಗಾಯಕ ರವೀಂದ್ರ ಪ್ರಭು ಬಳಗದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು ಈ ಗಾಯನದಲ್ಲಿ ಚಂದ್ರಶೇಖರ ಸ್ವಾಮೀಜಿ ಹಾಗೂ ರಜನಿ ದಂಪತಿಗಳ ಸುಪುತ್ರಿ ರೋಶನಿ ಸಿ.ಭಟ್‌ರವರು ಸಹ ತಮ್ಮ ಕಂಠಸಿರಿಯಲ್ಲಿ ಹಾಡಿ ರಂಜಿಸಿದ್ದು ವಿಶೇಷವಾಗಿತ್ತು.

Kinnigoli05111307 Kinnigoli05111308

Comments

comments

Comments are closed.

Read previous post:
Kinnigoli05111306
ಮೂಲ್ಕಿ- ಬಿಲ್ಲವ ಸಂಘದ ತುಳುವೆರೆ ತುಡರ ಪರ್ಬ

Bhagyawan Sanil ಮೂಲ್ಕಿ:ಇನ್ನೊಬ್ಬರ ಸುಖಃದಿಂದ ಸಂತೋಷ ಪಟ್ಟ ಸಂಘಟಿತರಾಗಿ ಬದುಕುವಂತೆ ಎಲ್ಲಾ ಧರ್ಮಗಳು ಭೋಧಿಸುತ್ತಿದ್ದರು ಜನರು ಜಾತಿ ಮತ ಧರ್ಮದ ಅಂತರದಲ್ಲಿ ಭಯೋತ್ಪಾದನೆ ಪೂಜಾ ಕೇಂದ್ರಗಳ ನಾಶಕ್ಕೆ...

Close