ಕಟೀಲು – ಚಿತ್ರ ನಟ ಜೈ ಜಗದೀಶ್ ಬೇಟಿ

Nishanth Kelenjooru
ಕನ್ನಡ ಚಿತ್ರ ನಟ ಜೈ ಜಗದೀಶ್ ಇಂದು ತಮ್ಮ ಕುಟುಂಬ ಸಮೇತ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳಕ್ಕೆ ಬೇಟಿ ನೀಡಿದರು. ನಂತರ ಮಾಧ್ಯಮ ದೊಂದಿಗೆ ಮಾತನಾಡಿದ ಅವರು ರಾಧಿಕ ಕುಮಾರ ಸ್ವಾಮಿಯವರ ಸ್ವೀಟಿ ನಂನ್‌ಜೋಡಿ ಚಿತ್ರವು ಮುಂದಿನ ೮ನೇ ತಾರೀಕು ಬಿಡುಗಡೆಯಾಗಲಿದ್ದು ನನ್ನ ಪತ್ನಿ ವಿಜಯ ಲಕ್ಷ್ಮೀ ಸಿಂಗ್ ನಿರ್ದೇಶನ ಮಾಡಿದ್ದು ತಾಯಿಯ ಆಶೀರ್ವಾದ ಪಡೆಯಲು ಬೇಟಿ ನೀಡಿದ್ದೇವೆ. ಹಿರಿ ತೆರೆಗಿಂತ ಕಿರು ತೆರೆ ಇಂದು ಪ್ರಭಾವಿ ಮನೋರಂಜನೆ ಮಾಧ್ಯಮವಾಗಿದೆ. ಈ ಹಿಂದೆ ನಾವು ಕಿರು ತೆರೆಗಾಗಿ ಕಾರ್ಯಕ್ರಮವನ್ನು ಇರ್ಮಿಸಿದ್ದೇವೆ. ಮುಂದೆಯೂ ದಾರವಾಹಿಯನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ನಮ್ಮ ನಿರ್ಮಾಣದ ಸಿನೇಮ ಒಂದು ನಿರ್ಮಾಣ ಹಂತದಲ್ಲಿದೆ ಹೆಚ್ಚಾಗಿ ಜನ ನನನ್ನು ವಿಲನ್ ಪಾತ್ರದಲ್ಲಿ ಗುರುತಿಸಿ ಕೊಂಡಿದ್ದಾರೆ. ಬೇರೆ ಪಾತ್ರಗಳನ್ನು ಮಾಡಿದ್ದು ಕಡಿಮೆ.
ನಂತರ ಮಾತನಾಡಿದ ಬಿಗ್ ಬಾಸ್ ಖ್ಯಾತಿಯ ರಿಷಿಕ ಬಿಗ್ ಬಾಸ್ ನಂತರ ಅವಕಾಶಗಳು ಬರುತಿದೆ ಆದರೆ ಅಷ್ಟಾಗಿ ಒಪ್ಪಿಕೊಳ್ಳುದ್ದಿಲ್ಲ, ತೆಲುಗು ಚಿತ್ರ ರಂಗದತ್ತ ಆಸಕ್ತಿ ಇದೆ. ಮುಂದೆ ತೆಲುಗು ಚಿತ್ರ ಒಂದು ತೆರೆ ಕಾಣಲಿದೆ ಮತ್ತು ಮುಸ್ಸಂಜೆ ಮಹೇಶ್ ನಿರ್ದೆಶನದ ತುಂತುರು ಚಿತ್ರ ಬಿಡುಗಡೆಯಾಗಲಿದೆ. ರಮೇಶಾರವಿಂದ ನನ್ನ ಅಣ್ಣನ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜೇಂದ್ರ ಸಿಂಗ್ ಬಾಬು ತಾಯಿ ಪ್ರತಿಮಾ ದೇವಿ, ವಿಜಯಲಕ್ಷ್ಮೀ ಸಿಂಗ್, ವೈ ನಿಧಿ, ವರದ ರಾಜ ಪೈ ಮುಂತಾದವರು ಉಪಸ್ಥಿತರಿದ್ದರು.

Kinnigoli06111305

Comments

comments

Comments are closed.

Read previous post:
Kinnigoli06111304
ಉಲ್ಲಂಜೆ- ಮುಂಚಿಕಾಡು ರಸ್ತೆ ಕಾಂಕ್ರೀಟೀಕರಣ

ಕಿನ್ನಿಗೋಳಿ: 13ನೇ ಹಣಕಾಸು ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಅನುದಾನದಿಂದ 10.60ಲಕ್ಷ ರೂ. ವೆಚ್ಚದಲ್ಲಿ ಉಲ್ಲಂಜೆ- ಮುಂಚಿಕಾಡು ರಸ್ತೆ ಕಾಂಕ್ರೀಟೀಕರಣ ಪೂರ್ಣಗೊಂಡಿದ್ದು ಮಂಗಳೂರು ಸಂಸದ ನಳಿನ್...

Close